ಸೂರ್ಯ ದಿನ ಇಡೀ ಕಾಯ್ಸಿದ್ದನ್ನೆಲ್ಲ
ತಂಪಾಗಿಸೋದು ಎಷ್ಟು ಕಷ್ಟದ ಕೆಲ್ಸ
ಯಾರಿಗಾದ್ರೂ ಗೊತ್ತಾ.
ಏನೋ ತಿಂಗಳಿಗೊಂದು ಅಮಾವಾಸ್ಯೆ ನಾನು
ರಜ ಹಾಕಿದ್ರೆ ಅದಕ್ಯಾಕ್ರಿ ತಕರಾರು
ಸೂರ್ಯನಿಗೆ ರಜವೂ ಬೇಕಿಲ್ಲ. ಮಜವೂ ಗೊತ್ತಿಲ್ಲ ಯಾಕೇಂದ್ರೆ
ಯಾವಾಗಲೂ ಹೊತ್ತಿಕೊಂಡು ಉರಿಯೋದೊಂದೆ
ಅವನ ದರಬಾರು
ಬೇರೆ ಏನಿದೆ ಅವನಿಗೆ ಹೇಳಿ ಕಾರುಬಾರು.
*****