ಎದ್ದೇಳು ಎದ್ದೇಳು ಕನ್ನಡಿಗ
ಎಚ್ಚರದಿಂದೇಳು ಕನ್ನಡಿಗ
ಉದಯವಾಯಿತು ಕನ್ನಡ ನಾಡು ||
ಉದಯರಾಗಲಹರಿಯಿಂ ಹಾಡು
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು ||

ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||
ಭಾರಿಸಿತು ಕನ್ನಡ ಡಿಂಡಿಮವ
ಕಟ್ಟಿತು ಹಸಿರು ತೋರಣವ
ಸಂಭ್ರಮಿಸಿತು ನವಕರ್ನಾಟಕ
ನವ ಚೈತನ್ಯದ ನೀಡಿತು || ಜ ||

ಕೆಂಪು ಹಳದಿ ಬಾವುಟ
ಕೆಚ್ಚೆದೆಯನು ಸಾರಿ ಕ್ರಾಂತಿ
ಶಾಂತಿ ದಿವ್ಯ ಮೊಗವ ತೋರಿ
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನು ||

ಸಾವಿರಾರು ವರುಷಗಳ ಹರುಷ
ಹೊನಲು ಹಿಗ್ಗಿನೊಲುಮೆಯಲಿ
ಕುಣಿದು ನಲಿದು ಭಾವೈಕ್ಯತೆಯಲಿ ಕೂಡಿ
ಜಯಕನ್ನಡ ಜಯಕನ್ನಡ
ಜಯ ಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||

ಗಂಗ ಕದಂಬಾದಿ ರಾಷ್ಟ್ರಕೂಟ
ಹೊಯ್ಸಳಾಧೀಶರು ಕಟ್ಟಿದ
ವೀರ ಧೀರ ತ್ಯಾಗ ಕಲಿಗಳ
ಭವ್ಯ ನಾಡು ನುಡಿಯು ಕನ್ನಡ
ಜಯ ಕನ್ನಡ ಜಯ ಕನ್ನಡ
ಜಯ ಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯ ಭೇರಿಯನ್ನು ||

ಮುನ್ನುಗ್ಗಿದೆ ಮುನ್ನಡೆದಿದೆ
ಕಗ್ಗತ್ತಲ ಮೌಢ್ಯಗಳ ಕಳಚಿ
ವಿಜ್ಞಾನ ದೀವಿಗೆಯ ಹಚ್ಚಿ
ಅಭಿಮಾನ ಸ್ವಾಭಿಮಾನದಿಂ
ನುಡಿದಿದೆ ಜಯಕನ್ನಡ
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು
ಬೆಳಗಿರಿ ಕನ್ನಡ ಜೋತಿಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||
*****