ಅಮ್ಮಾ ನಿನ್ನ ಮಾತಿನಲ್ಲಿ ಏನೋ

ಅಮ್ಮಾ ನಿನ್ನ ಮಾತಿನಲ್ಲಿ ಏನೋ
ಮಧುರ ಮಮತೆ ತುಂಬಿದೆ|
ಹೇಳಲಾರದ ಅದೇನೋ ಪ್ರೀತಿ ಕರುಣೆ
ಸಹಾನುಭೂತಿ ಸೆಳೆದು
ನಮ್ಮಿಬ್ಬರನು ಬಂಧಿಸಿ
ನನ್ನ ಮಂತ್ರಮುಗ್ಧನಾಗಿಸಿದೆ||

ಅಮ್ಮಾ ನಿನ್ನಾ ಕೈಯಲೆಂತಹ
ಮಂತ್ರಶಕ್ತಿ ಅಡಗಿದೆ|
ನೀನು ಹರಸಿದರೆ ಅದೆಂತಹ
ಕಷ್ಟ ಕೆಲಸವಿದ್ದರುನೂ
ನಿರಾಯಾಸವಾಗಿ ಸಫಲವಾಗುತ್ತದೆ||

ಅಮ್ಮಾನಿನ್ನ ಮುಖಕಮಲದಲ್ಲಿ
ಎಂಥಹ ಕಾಂತಿ ತುಂಬಿದೆ|
ಏನೇ ನೋವು ಇದ್ದರೂನು
ನಿನ್ನ ನೋಡಲೆಲ್ಲ ಅಳಿಸಿ
ಮಾಯವಾಗುತ್ತದೆ||

ಅಮ್ಮಾ ನಿನ್ನ ಹೃದಯಲೆಂತಹ
ಪ್ರೀತಿ ಮಮತೆ ತುಂಬಿದೆ|
ನಿನ್ನಜೊತೆ ಎರಡು ಮಾತನಾಡಲೊಮ್ಮೆ
ಹರ್ಷಾನುಭಾವ ತುಂಬುತ್ತದೆ||

ಅಮ್ಮಾ ನಿನ್ನ ಮಡಿಲಲೆಂತಹ
ಶಾಂತಿ ಭಾವ ತುಂಬಿದೆ|
ನಿನ್ನ ತೊಡೆಯ ಮೇಲೆ ತಲೆಯನಿಟ್ಟು
ಮಲಗಲದುವೆ ಮಗುವಾಗಿ ನಿದ್ದೆಗೈಯ್ಯುವೆ||

ಅಮ್ಮಾ ನಿನ್ನ ಕರುಳಲೆಂತ
ವಾತ್ಸಲ್ಯ ಸೆಳೆತ ತುಂಬಿದೆ|
ನನಗೆ ಸ್ವಲ್ಪ ನೋವಾದರೂನು
ನಿನಗೆ ದುಃಖ ಉಕ್ಕಿಬರುತದೆ|
ನಿನಗೂ ನೋವಾದರೂನು
ನನಗೂ ಸಂಕಟವಾಗುತ್ತದೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕಾಶದಲ್ಲಿ ವಜ್ರ ನಕ್ಷತ್ರ!!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೬

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…