ಅಸಂಖ್ಯ ಕೋನಗಳಿಂದ ವಜ್ರದಂತೆ ಹೊಳೆಯುವ ಆಕಾಶಕಾಯದಲ್ಲಿ ಸೂರ್ಯನಷ್ಟೇ ದೊಡ್ಡದಾದ ವಜ್ರದ ನಕ್ಷತ್ರವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ. ಭೂಮಿಯಿಂದ ೧೭ ಬೆಳಕಿನ ವರ್ಷಗಳ ದೂರದಲ್ಲಿನ ಸೆಂಟಾರಸ್ ರಾಶಿಯಲ್ಲಿ ಈ ನಕ್ಷತ್ರವಿದೆ. ಇದರ ವ್ಯಾಸ ೮ ಸಾವಿರ ಮೈಲುಗಳು. ಸೂರ್ಯನಷ್ಟೇ ಗಾತ್ರ ಹೊಂದಿದ ಇದಕ್ಕೆ “ಬಿ.ಪಿ.ಎಂ. ೩೭೦೯೩” ಎಂದು ಹೆಸರಿಡಲಾಗಿದೆ.

ಪ್ರಥಮವಾಗಿ ಹೈಡ್ರೋಜನ್ ವಾಯುವು ಧೂಳಿನೊಡನೆ ಸೇರಿ ಪ್ರೊಟೋಸ್ಟಾರಾಗಿ ಮಾರ್ಪಡುತ್ತದೆ. ನ್ಯೂಕ್ಲಿಯರ್ ಕ್ರಮಗಳು ಆರಂಭಗೊಂಡು ಪ್ರೊಟೊಸ್ಟಾರಾಗಿ ಮಾರ್ಪಡುತ್ತವೆ. ನ್ಯೂಕ್ಲಿಯರ್ ಕ್ರಮಗಳು ಆರಂಭಗೊಂಡು ಪ್ರೊಟೊಸ್ಟಾರ್ ನಕ್ಷತ್ರವಾಗಿ ಇದು ಬೆಳಗುತ್ತದೆ. ಹೈಡ್ರೋಜನ್ ನ್ಯೂಕ್ಲಿಯರ್ ಕ್ರಮದಿಂದ ಹಿಲಿಯಂ ಆಗಿ ಮಾರ್ಪಾಟು ಹೊಂದುತ್ತದೆ. ನಂತರ ಬಣ್ಣ ಕೂಡ ಕೆಂಪಗೆ ಆಗುತ್ತದೆ. ಬೆಳಕಿನ ಪೊರೆ ಹೊರಗೆ ಹೋಗುತ್ತ ನಕ್ಷತ್ರ ಅವಸಾನ ಆರಂಭವಾಗುತ್ತದೆ. ಕ್ರಮೇಣ ಉಷ್ಣತೆ ಕಡಿಮೆಯಾಗುತ್ತ ನಕ್ಷತ್ರದ ಗಾತ್ರ ಕುಗ್ಗುತ್ತದೆ. ಇದನ್ನೇ ನೈಟ್ ಡ್ವಾರ್‍ಸ್ (ಬಳಿ ಕುಬ್ಜ) ಎಂದು ಕರೆಯುತ್ತಾರೆ. ವೈಟ್ ಡ್ವಾರ್‍ಸ್ ತಣ್ಣವಾಗುತ್ತಿದ್ದಂತೆ ಬೆಳಕು ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ನಕ್ಷತ್ರದಲ್ಲಿ ನ್ಯೂಕ್ಲಿಯರ್ ಇಂಧನ ಮುಗಿದಾಗ ಉಳಿದ ಕಾರ್ಬನ್, ಆಮ್ಲಜನಕ ವಜ್ರವಾಗಿ ರೂಪಗೊಳ್ಳುವ ಅವಕಾಶವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಹಬಲ್ ಟೆಲಿಸ್ಕೋಪ್ ನೀಡಿದ ಮಾಹಿತಿ ಪ್ರಕಾರ ಐವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ವಿಷಯದ ಮೇಲೆ ಭರವಸೆಯ ನಿರ್ಧಾರ ಪ್ರಕಟಿಸಿದ್ದಾರೆ. ಈ ವಜ್ರದ ಉಷ್ಣತೆ ೧೨ ಸಾವಿರ ಡಿಗ್ರಿ ಸೆಲ್ಸಿಯಸ್. ಇದರ ಕ್ಯಾರೆಟ್ ಬೆಲೆ ೧೦ ಬಿಲಿಯನ್ ಟ್ರೆಲಿಯನ್ ಭೂಮಿಯ ಮೇಲಿರುವ ಅತಿ ದೊಡ್ಡವಜ್ರ ಇದಾಗಿದೆ. ೧೪೬೨ ಕ್ಯಾರೆಟ್ ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ವೈಟ್ ಡ್ವಾರ್‍ಸ್ ವಿಪರೀತ ಗುರುತ್ವಾಕರ್ಷಣದಿಂದ ಮಾಲಿನ್ಯಗೊಂಡು ಕಾರ್ಬನ್ ಸ್ಪಟಿಕರೂಪ ತಾಳುತ್ತದೆ. ಆಮ್ಲಜನಕ ಇರುವುದರಿಂದ ಇದರ ಬಣ್ಣ ನೀಲಿ ಮತ್ತು ಎಲೆ ಹಸಿರು ಮಧ್ಯ ಇರುತ್ತದೆ. ಬಿಪಿಎಂ ೩೭೦೯೩ ವಾತಾವರಣ ೫-೬ ಕಿ.ಮೀ. ಮಾತ್ರ. ಧೂಮಕೇತು ಅಥವಾ ವಿಶ್ವದ ವಯಸ್ಸು ನಿರ್ಧರಿಸುವಲ್ಲಿ ಈ ವೈಟ್ ಡ್ವಾರ್‍ಸ್ ವಜ್ರವು ಸಹ ಕತ್ತರಿಸುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಜ್ರದ ವಯಸ್ಸು ೧೧-೧೨ ಶತಕೋಟಿ ವರ್ಷಗಳಿರಬಹುದಾಗಿದೆ. ಅಂತರಿಕ್ಷದಲ್ಲಿ ಕಾರ್ಬನ್ ಹೇರಳಾವಾಗಿರುವುದಿಂದ ಖಗೋಳ ನ್ಯೂಕ್ಲಿಯರ್ ಕ್ರಮದಿಂದ ವಜ್ರ ಉಂಟಾಗುವ ಅವಕಾಶವಿದೆ. ಆದರೆ ಬಂಗಾರ – ಬೆಳ್ಳಿಯಂತಹ ಲೋಹಗಳಿಗೆ ಅವಕಾಶವಿಲ್ಲವೆನ್ನುತ್ತಾರೆ ವಿಜ್ಞಾನಿಗಳು.
*****