ಭೂಮಿಕೆ

ಬೀಸೊ ಗಾಳಿಗೆ ದಿಸೆಯದಾವುದೊ
ಎಂಬ ನಿಯತಿಯದೆಲ್ಲಿಯೋ,
ಪ್ರೀತಿ ಸ್ಪುರಣೆಗೆ ಕುಲವದಾವುದೊ
ಎಂಬ ಭೀತಿಯದೆಲ್ಲಿಯೋ,

ಮೂಡಣದ ಕಿರಣಕೆ
ಅರಳದಿರುವವೆ ಸುಮಗಳು ತಾ ಲತೆಯಲಿ,
ಚಂದ್ರೋದಯ ದಂದಕೆ
ಏಳದಿರುವವೆ ತೆರೆಗಳು ತಾ ಕಡಲಲಿ,

ಸಮದ ಸಮತೆಯ ಶೃಂಗ ಭೂಮಿಕೆ
ಮಣ್ಣ-ಕಣ್ಣ ಕಣದ ಗೀತಿಕೆ,
ಮಾತನರಿಯದ ಮೌನ ಹೃದಯಕೆ
ಪ್ರೀತಿ ಕಾವ್ಯವೇ ಪೀಠಿಕೆ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋಡೋಣ ಬಾ ಹುಲಗೂರ ಸಂತಿ
Next post ರಾಜಕೀಯ ಬಿಸಿನೆಸ್ಸು

ಸಣ್ಣ ಕತೆ