ನೋಡೋಣ ಬಾ ಹುಲಗೂರ ಸಂತಿ

ನೋಡೋಣ ಬಾ ಗೆಳತಿ
ನಾಡೋಳ್ ಹುಲಗೂರ ಸಂತಿ
ಬಾಡ ಮಾರವಳ ಬಡಿವಾರ ಬಹಳೈತಿ ||ಪ||

ಜೋಡಬಿಲ್ಲಿ ದುಡ್ಡಿಗೊಂದು
ಸಿವಡು ಕೋತಂಬರಿಯ ಕೊಡಲು
ಬೇಡಿಕೊಳ್ಳುತ ನಿಂತರೆ ಮಾತಾಡಳೋ ಮುಖ ನೋಡಳೋ ||ಅ.ಪ.||

ಸರಸಾದ ಪ್ಯಾಟಿಯು ಮೆರೆವದು ಕೋಟಿಯು
ವರ ರಸವರ್ಗ ಫಲಗಳು ಸುರಹಿದಂತಿಹವು
ಕರಿಯ ಕುಂಬಳ ಬದನಿ ಬೆಂಡಿ
ಸರಸ ಮೆಣಸಿನಕಾಯಿ
ಹರವಿ ಮೆಂತೆ ಚವಳಿಕಾಯಿಗೆ
ಕರವನೆತ್ತುತ ಬೇಡಿಕೊಳ್ಳಲು ಕೇಳಳೋ ತಾ ತಾಳಳೋ ||೧||

ಎಷ್ಟಂತ ಹೇಳಲಿ ಸೃಷ್ಟಿಯೊಳಗ ಬಹು
ಖೊಟ್ಟಿತನದ ಬುದ್ದಿಯೆನ್ನ ನೋಡಿತ್ತ
ಮೀರಿದುನ್ಮನಿಯನು ಸೇರಿತ್ತ
ದೇವರಮನಿ ಮೂಲೆಯೊಳಿತ್ತ
ಭಾವಶುದ್ಧದಿ ಕುಳತಿತ್ತ
ಊರ್ಧ್ವಮುಖವ ತಾ ಮಾಡಿತ್ತ
ಸ್ಥೂಲ ದೇಹದೊಳಡಗಿತ್ತ ಕಾಲಕರ್ಮವನು ನುಂಗಿತ್ತ
ದೇವ ಶಿಶುನಾಳೇಶನ ಸುತ್ತ ಧ್ಯಾನದೊಳಗೆ ತಾನಿರುತಿತ್ತ
ಕಚ್ಚಿದರೆಚ್ಚರವಾದೀತ ||೨||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಲ್ಲು ಮನವೆ
Next post ಭೂಮಿಕೆ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…