ನಿಲ್ಲು ಮನವೆ, ನಿಲ್ಲು ಇಲ್ಲಿ ಇನ್ನು,
ಒಮ್ಮೆ ಹೊರಳಿ ನೋಡು,
ನಾಗಾಲೋಟದ ಧಾವಂತದಲಿ
ಪಡೆದುದೇನೆಂಬುದ ಕಾಣು…
ಜಗವನಾಳುವ ಶಕ್ತಿತ್ರಯಗಳನು
ಮೀರಲು ಜೀವನವಿನ್ನೇನು?
ಎಲ್ಲೋ ಕಳೆದುದನಿನ್ನೆಲ್ಲೋ
ಹುಡುಕಿರೆ ದೊರೆಯುವುದಿನ್ನೇನು…!
ಸುಖದ ಸಾಧನ ನಿನ್ನಾಚೆ ಎಲ್ಲಿದೆ,
ಜೀವ ಭಾವ ಕಣದಲಿ ಬೆರೆತಿದೆ…
ಸುಖದ ಕಾರಣವಿಲ್ಲಿ ಚೆಲ್ಲಿದೆ
ಪ್ರೀತಿ ನೇಹ-ಮೋಹ ದಿ ಹೊಸೆದಿದೆ…
*****


















