ಕುರುವರಿಯದ ಕುಂಬಾರಗ ಹೇಳಲು
ಮಾರಿಗ್ಹೊಡದ ಮಾದಿಗರಣ್ಣಾ ||ಪ||

ಕಾರಹುಣ್ಣಿವಿ ದಿನ ಕೋರಿಯ ಹೊತಗೊಂಡು
ಬೋರಗಲ್ಲಿಗೆ ಬಡದೀರಿ ಸುಣ್ಣಾ ||೧||

ಹುರಿಕಟ್ಟಿನ ಹೋರಿಗೆ ಗೊಟ್ಟವ ಹಾಕಲು
ಕುಟ್ಟಿ ಉಪ್ಪು ಎಣ್ಣಿ ಅರಿಷಿಣ ||೨||

ಹುರಿಯಕ್ಕಿ ಹೋಳಿಗೆ ಕರಿದ ಕೋಡಬಳಿ
ಹಣಿಕಟ್ಟಿನೊಳು ಮೂರು ಹೆಣಕೆಣ್ಣಾ ||೩||

ವಲ್ಲಭ ಶಿಶುನಾಳ ಬಲ್ಲಿದ ಗುರುವಿಗೆ
ಕಲ್ಲಿನೊಳಗ ಕರಿ ಹರಿದರಣ್ಣಾ ||೪||

****