ಅಂತರಂಗದ ಶಕ್ತಿ
ವಿಶ್ವನಾಳುವ ಶಕ್ತಿ;
ಅಂತರಂಗದ ದೀಪ್ತಿ
ವಿಶ್ವ ಬೆಳಗುವ ದೀಪ್ತಿ-
ನಡುವಿರುವ ಮಾಯೆಮೋಹವನೆಲ್ಲ ಕಳಚಯ್ಯ.
ಸ್ಥೂಲ ಸೂಕ್ಷ್ಮದ ಭಾರ
ಪಂಚಭೂತದ ಭಾರ,
ಕಾಲಪಾಶದ ಉರುಲು
ಪಂಚೇಂದ್ರಿಯಗಳುರುಲು-
ಆತ್ಮ ಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ,
ಬ್ರಹ್ಮಾಂಡ ಕೋಟಿಗಳು
ಪ್ರಳಯಕ್ಕೆ ತುತ್ತಾಗಿ
ಬ್ರಹ್ಮದಲಿ ಅಡಗಿರಲಿ ;
ಮೇಲೆ ಹಾರುವ ಶಕ್ತಿ
ಸರ್ವ ಶಕ್ತಿಗಳೆನಗೆ, ಸಹನೆ ನಿನಗಿರಲಯ್ಯ,
*****