ಮೂಲ: ವಿಲಿಯಂ ಬಟ್ಲರ್ ಏಟ್ಸ್ ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ; ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ. ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ (ಉಳಿದೆಲ್ಲ ಅಳಿದರೂ ...

ನನಗೂ ವಯಸ್ಸಾಯ್ತಲ್ಲ ಚಿನ್ನು… ಜೊತೆಗೆ ಈ ಮಾನಸಿಕ ‘ಖಿನ್ನತೆ’ ಬೇರೆ… ಹೀಗಾಗಿ ನಾನೆಲ್ಲೂ ಹೋಗುವುದೇ ಇಲ್ಲ. ಹೊರಗೊಂದು ಪ್ರಪಂಚವೊಂದಿದೆ ಎಂಬುದನ್ನು ಮರೆಯಲು ಯತ್ನಿಸುತ್ತಿದ್ದೇನೆ… ಯಾರಾದರೂ ನೋಡಲು ಮಾತನಾಡಲು...

ನಾನು ಕಾಮುಕನೆಂದು ಹಳಿಯುವರು. ಗ್ರಂಥಗಳ- ನೋದಿ ನರಕವೆ ಲೇಸು ಈ ಪಶುವಿಗೆನ್ನುವರು. ನಾಲ್ಕು ದಿನ ತಮ್ಮ ಮಲಬದ್ಧತೆಯ ಕಳೆದವರು ಇವನು ವ್ರಣಕಾಯನೆಂದೊರಯುವರು ಪಂಥಗಳ ಡಾಂಭಿಕರು ಜರೆಯುವರು ಅಂಥ ಇಂಥವುಗಳಾ ವಂಧಾನದವನೆಂದು. ಈ ಜನರ ಕೊಲ್ಲಲೆನೆ ಒಂದು ಕ...

ನಿತ್ಯ ನೆನೆನೆನೆ ಸತ್ಯ ಶಿವನನು ಶರಣ ಗಾನವು ಸುರಿಯಲಿ ನಿತ್ಯ ವಚನದ ಗಂಧ ಹರಡಲಿ ವಿಶ್ವ ಸುಂದರವಾಗಲಿ ಯುಗದ ಕೊನೆಯಲಿ ಕೂಗಿ ಬರುವನು ಶಿವನು ಸಂಗಮನಾಥನು ಇಗೋ ಸಂಗಮ ವಿಶ್ವ ಗಮಗಮ ಜಗವ ಜಂಗಮ ಗೈವನು ಸರಳ ಜೀವನ ಸಹಜ ಭಾವನ ಬೆಳ್ಳಿ ಬೆಳಕನು ಕೊಡುವನು ಜ...

ದೀಪ್ತಿ ಅವರ ಕವಿತೆಗಳನ್ನು ಓದುತ್ತಿದ್ದರೆ, ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆದಂತಹ ಅನುಭವ, ಹಿತವಾಗಿ ಕಚಗುಳಿಯಿಕ್ಕುವಂತಹ ಧಾಟಿ. ತಾಜಾ ಅನ್ನಿಸುವ ಭಾವಗಳನ್ನಿಟ್ಟುಕೊಂಡು ಕವಿತೆ ಬರೆಯುವುದೇ ಹೊಸ ಕವಿಯ ಪ್ಲಸ್ ಪಾಯಿಂಟ್. ಹೀಗೆ ಬರೆಯುತ್ತಿರುವ ...

ಸುಂಸುಂಕೇನೆ ನಂಗ್ ಅಂತೀಯ ಜಂಬದ ಕೋಳಿ ಅಂತ; ಮನ್ಸನ್ ಮನಸನ್ ನೋಡ್ದೆ ಸುಂಕೆ ಸಿಕ್ದಂಗ್ ಅಂದ್ರೆ-ಬಂತ! ೧ ತಿಳದೋರ್ ಇತರೋರ್ ಒಗಳೋದ್ಕೆಲ್ಲ ಕುಣದಾಡ್ತಾರ ಬಿದ್ದಿ? ತಿಳದೋರ್ ಎಕಡ ಮಂಡೇಲ್ ಮಡಗಿ ಕಲ್ತೀನ್ ಒಸಿ ಬುದ್ದಿ! ೨ ಕುಡಿಯೋನ್ ನಾನು! ಆಡೋನ್ ನ...

ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ, ನಿನ್ನ ಹಾಡನು ನಾನು ಕೇಳಲೆಂದು ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು. ರಸಿಕ:- ನನ್ನ ಕಂಗಳ ಕುಣಿತಗಳ ತಾಳಲಯದಲ್ಲಿ ಕಟ್ಟಿರುವೆ ನಿನ್ನ ನವ ಕಾವ್ಯವನ್ನ...

ತೋಟದ ಗಿಡದಲ್ಲಿ ಒಂದು ಜೇಡ ಬಲೆ ಕಟ್ಟಿತ್ತು. ಕವಿ ನೋಡುತ್ತಾ ನಿಂತ. ನವಿರಾದ ಎಳೆಗಳು ಬಿಸಿಲು ಕಿರಣದಲ್ಲಿ, ಬಂಗಾರದ ನೇಯ್ಗೆಯಂತೆ ಅತ್ಯಂತ ಚೆಲುವಾಗಿತ್ತು. ವರ್ತುಲ ವರ್ತುಲವಾಗಿ ಎಳೆಗಳು ಹಾದುಹಾದು ಸುಂದರ ಜಾಲ ರಚಿಸಿತ್ತು. ಕಲಾರಾಧಕನಂತಿದ್ದ ಜೇ...

ಕೃಷಿ ಬಿಟ್ಟನ್ನವನು ಕೊಂಡುಣುವ ಹಂಗ್ಯಾಕೋ ಖುಷಿಯೊಳುಂಡನ್ನದ ಶಕುತಿ ಎಮ್ಮೊಳಡಗಿರಲು ಕಹಿ ಮದ್ದು ವೈದ್ಯರಾಕೆಮಗೆ ರೋಗಿಯಾಗುವ ಮೊದಲು ಕಷ್ಟದೋದಿನ ಶಾಲೆಗಳಾಕೆಮ್ಮ ಮಕ್ಕಳಿಗೆ ಉಣಲರಿವ ಮೊದಲು ಕಷ್ಟ ಸುಖ ವ್ಯತ್ಯಾಸವರಿಯದೀ ರೋಗವನು ಅಲ್ಜಿಮಾರೆನ್ನುವರು...

“ನಿಲ್ಲು ನಿಲ್ಲಯ್ಯ ರಾಜ ನಿಜಗುಣ ನಾ ಬಲ್ಲೆ ಮಲ್ಲಿಗೆ ಸೂರಾಡಬಹುದೇನೋ || ನಿಲ್ಲಯ್ಯ ರಾಜಾ” || ೧ || ಠಾಕಠೀಕ ಜೋಕ “ನಾರೀ ಜೋರಲಿಂದ ಹೋಗುವಾಗ ಕರಗ ಬಿದ್ದಿತೆ ನಾರೀ, ಹೌದಲ್ಲೇ ರಮಣೀ || ೨ || ಹೌದಲ್ಲೇ ರಮಣೀ? ಕರಗು ಬಿದ್ದಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....