Month: January 2025

ನಿರಂತರ ಸ್ತ್ರೀ ದೌರ್ಜನ್ಯವೂ-ಕಣ್ಣೊರೆಸುವ ದೈವತ್ವದ ಪರಿಕಲ್ಪನೆಯೂ

ಮೊನ್ನೆ ಮೊನ್ನೆ ಸರ್‍ವಧರ್‍ಮ ಸಮನ್ವಯ ಸೌಹಾರ್‍ದ ಕಾರ್‍ಯಕ್ರಮವೊಂದರಲ್ಲಿ “ಯತ್ರ ನಾರ್‍ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಎಂದು ಹೆಣ್ಣಿಗೆ ದೇವರ ಸ್ಥಾನವನ್ನು ಕೊಟ್ಟ ದೇಶ ನಮ್ಮದು ಎಂದು […]

ಉಪದೇಶ

ಯೆಣ್ ನಾಯ್ ಇಂದಿನ್ ಗಂಡ್ ನಾಯ್ ಅಂಗೆ ಸುತ್ಬಾರ್‍ದ್ ಸಂದಿ ಸಂದಿ! ಬೀದೀಲ್ ಓಗೋ ಯೆಣ್ಣೆಂಗಿಸ್ಗೆ ಕಣ್ ಆಕೋನು ಅಂದಿ! ೧ ಕುಡಕನ್ ಕೈಲಿ ಯೆಂಡ್ ಇದ್ದಂಗೆ […]

ದೊಡ್ಡವರು

ದೊಡ್ಡವರದೆಲ್ಲವೂ ದೊಡ್ಡದೆಂಬುವ ಮಾತು ಸುಳ್ಳಲ್ಲ! ಶ್ರವಣ ಬೆಳಗುಳದಲ್ಲಿ ಒಂದು ಸಾ- ವಿರ ವರುಷ ನಿಂತ ಗೊಮ್ಮಟ! ವಿಜಯನಗರದ- ಲ್ಲಿರುವ ಸಾಸಿವೆ ಗಣಪ! ವಿಜಯಪುರದೊಳಗೀಗು ಆಡಿದ್ದ ನಾಡಾಡಿ ಏಳೇಳು […]

ಕಾಲದ ಓಟ

ಅಜ್ಜ ಅಜ್ಜಿ ಕೋಲು ಹಿಡಿದು ಕುಂಟುತ್ತ ನಡೆಯುತ್ತಿದ್ದರು. ಮಗ ಧಾವಿಸಿ ಓಡುತ್ತಿದ್ದ. ಮಗಳು ಕುಂಟೆಬಿಲ್ಲೆ ಆಡುತ್ತಿದ್ದಳು. ಮೊಮ್ಮಗ ರೈಲು ಬಿಡುತ್ತಿದ್ದ. ಮೊಮ್ಮಗಳು ಬೊಂಬೆಯಾಟವಾಡುತ್ತಿದ್ದಳು. ಕಾಲನ ರೈಲು ನಿಲ್ಲದೆ […]

ಸ್ವಂತ ಬಲ ಜಲವಾರಿಸಿದ ಮೇಲಲ್ಲಿ ಬಾಡಿಗೆ ಬದುಕೆಂತೋ?

ಎಂಥ ದುಃಸ್ಥಿತಿ ಬಂದೊದಗಿತಲಾ ಪುತ್ತೂರು ಮಂಗ್ಲರಂತೂರಿನೊಳು ಹಲಸಿನ ಮೇಳವ ನಾಂತದರ ಆಹಾರದೈಸಿರಿಯನೊರೆವಂತಾಯ್ತಲಾ ಸಂರಕ್ಷಿತಾರಣ್ಯದೊಳು ಜಲಬತ್ತಿ ಬೋರುನೀರೆತ್ತಿ ಟ್ಯಾಂಕರಿನೊಳುಪಚರಿಪತಿರೇಕಕಿದು ಸಮವಾಯ್ತಲಾ – ವಿಜ್ಞಾನೇಶ್ವರಾ *****

ಅಪೇಕ್ಷೆ ಉಪೇಕ್ಷೆ

ಯಾವುದಕ್ಕೂ ಅಪೇಕ್ಷೆ ಮಾಡುದೆಲ್ಲ ನಿನ್ನ ಕಷ್ಟಕ್ಕೆ ಬಂಧಿಸಲಾರದೆ! ಉಪೇಕ್ಷೆ ಮಾಡುತ್ತ ಮುನ್ನಡೆ ನೀ ನಿನ್ನ ಬಾಳಿಗೆ ದಾರಿಯಾಗದೆ! ಕ್ಷಣದ ಮಾಯಾ ಮೋಹವು ನಿನ್ನ ದೇವರನ್ನು ಮರೆಸಿ ಬಿಟ್ಟಿದೆಯಲ್ಲ […]

ಉಮರನ ಒಸಗೆ – ೫೪

ಬಳಿಕೋರ್‍ವನಿಂತುಸಿರಿದಂ: “ಜಗದ ಜನರೆಲ್ಲ ರೆಮ್ಮ ಪುಟ್ಟಿಸಿದನೆಮ್ಮನೆ ಪರೀಕ್ಷಿಸುತೆ, ಕೀಳೆನಿಸಿದವರ ತಾಂ ತುಳಿವನೆಂಬರದು ಸಟೆ; ಆತನೊಳ್ಳಿದನೆಲ್ಲಮೊಳ್ಳಿತಾಗುವುದೈ.” *****