ಸರಿಗೆಯಲಿ ಸಿಲುಕುತಿದೆ ಹೃದಯಸ್ವರಂ, ಹೃದಯದಲಿ ಕಲುಕುತಿದೆ ವಿರಹಜ್ವರಂ; ಎತ್ತ ನಡೆದವನೆಂದು ಮತ್ತೆನಗೆ ಬಹನೆಂದು ಮನಸಿನೋಪಂ, ಬಾಗಿಲೊಳೆ ನಿಲುಕುತಿದೆ ನಯನ ದೀಪಂ. ಮರಳುವೊಸಗೆಯ ಬೀರಿ ಗುಡುಗು ಮೊಳಗೆ, ಮನೆಯ ದಾರಿಯ ತೋರಿ ಮಿಂಚು ತೊಳಗೆ, ಬಂದರೆಲ್ಲ...

ಕನ್ನಡವೆ ಸತ್ಯ ಕನ್ನಡವೆ ನಿತ್ಯ ಕನ್ನಡರೆ ನಿತ್ಯ ಸತ್ಯ ಕನ್ನಡವ ಮರೆತ ಈ ಕಾವ್ಯ ತುಡಿತ ಎಷ್ಟಿದ್ದರೂನು ಮಿಥ್ಯ ಕಣ್ಸೆಳೆದರೇನು ಮಲ್ಲಿಗೆಯ ಮಾಲೆ ಕನ್ನಡಕು ಅಲ್ಲ ಮಿಗಿಲು; ನಲ್ವತ್ತ‌ಏಳು ಅಕ್ಷರವ ಆಯ್ದು ಜೋಡಿಸಲು ಸಾಲು ಸಾಲು! ಸ್ವರ ಹರಿಸಿದಂತ ಕೋಗ...

“ವಸಂತಣ್ಣ ಒಂದು ಬಿಸಿ ಚಾ” ವಸಂತಣ್ಣನ ಹೋಟೇಲಿನಲ್ಲಿ ಕುಳಿತೊಡನೆ ಅಂದೆ. ಐದೇ ನಿಮಿಷದಲ್ಲಿ ವಸಂತಣ್ಣ ಬಿಸಿಬಿಸಿ ಚಾ ತಂದು ನನ್ನ ಎದುರಿಟ್ಟ. ವಸಂತಣ್ಣ ನನಗೆ ಹದಿನೈದು ವರ್‍ಷಗಳಿಂದ ಪರಿಚಿತ. ಪರಿಚಿತ ಎನ್ನುವುದಕ್ಕಿಂತಲೂ ಸ್ನೇಹಿತ ಎ...

ನಾಮ ಫಲಕಗಳ ಮೇಲೆ ಬರೆದಾ ಚಿತ್ತಾರದ ಕವಿಕುಂಚದಾ ಹಕ್ಕಿ ಸುಂದರ ವರ್ಣಗಳ ಬಿಡಿಸಿ ಮಾರ್ದನಿಯರೂಪದಿ ನಸುನಗೆಯ ಬೀರಿತು ಮುತ್ತಿಟ್ಟ ಕನ್ನಡತನವ|| ಬೆರೆತಾಯ್ತು ಒಂದೊಂದಾದ ವರ್ಣಗಳ ಬೆಡಗು ಬಿನ್ನಾಣತನದಿ ಕೂಡಿಸಿ ಓಲೈಸಿ ಅಕ್ಷರ ಮಾಲೆಗಳ ತಿದ್ದಿ ತೀಡಿದಸ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ನನ್ನ ನಿಜಪ್ರೇಮಿಯನು ನೀನು ಸಂಧಿಸಿದಾಗ, ನಿನ್ನ ಕಾಲ್ಗಳ ನಡುವೆ ಅವನು ರಾಗಾಲಾಪ ಮಾಡುವಾಗ ಅಪಶಬ್ದ ನುಡಿಯದಿರು ಆತ್ಮಕ್ಕೆಂದೂ, ತಿಳಿಯದಿರು ದೇಹವೇ ಸಮಸ್ತ ಎಂದು. ಅವನ ಹಗಲಿನ ಹೆಣ್ಣು ನನಗೆ ಗೊತ್ತು ದೇಹದಿಂದೊದಗುವ ಕ...

ನನಗೆ ನಿನ್ನ, ನಿನ್ನ ಕುಟುಂಬದವರ ಜೊತೆ, ಇನ್ನೂ ಅನೇಕರು, ಸ್ನೇಹ, ಪ್ರೀತಿ, ವಿಶ್ವಾಸಕ್ಕೊಂದು ಸಾವಿಲ್ಲವೆಂಬಂತೆ ನನಗೆ ಸ್ನೇಹ ಹಸ್ತ ಚಾಚಿದ್ದರು. ಚಿನ್ನೂ, ನಿನಗೆ ಕೊಂಡಜ್ಜಿಯ ಮೋಹನ್ ಗೊತ್ತಿದೆಯಲ್ಲಾ? ನೆನಪಿಸಿಕೋ… ನನ್ನ ಊರಿನ ಜಿಲ್ಲೆಯವ...

ಇವನು ವೈಯಾಕರಣಿ, ಷಟ್ಕಾಸ್ತ್ರಕೋವಿದನು, ವೇದಪಾರಂಗತನು ವಿದ್ಯೆ ಗಳಿಸಲು ಬುದ್ದಿ – ಯನು ಬೆಳೆಸಲೆಂದಿವನು ಪಟ್ಟ ಕಷ್ಟಸಮೃದ್ಧಿ – ಯನು ಬಣ್ಣಿಸಲು ಬೇಕು ಎಂಟೆದೆಯ ಬಂಟತನ. ಗ್ರಂಥಭಾರವ ಹೊತ್ತ ಶೀಷನಿವ. ಒಂಟಿಗನು ಹಿರಿಯ ಪಾಂಡಿತ್ಯದಲಿ...

ಆ ಊರು ಈ ಊರು ಯಾವೂರು ತಿರುಗಿದರು ಅಜ್ಜಪ್ಪ ಕುಲುಕುಲು ನಕ್ಕು ಬಂದಿ ಉಕ್ಕಡಗಾತ್ರ್ಯಾಗ ಉಕ್ಕಲಾಡಿದಿ ಅಜ್ಜ ಜ್ಞಾನ ಕಕ್ಕಡ ದೀಪ ಹಚ್ಚಿ ನಿಂದಿ ಮರುಳನೆಂದರು ಮರುಳ ನೀ ಭಾರಿ ಶಿವಶರಣ ಕೆಂಡ ಬೆಣ್ಣಿಯ ಉಂಡಿ ಮಾಡಿಬಿಟ್ಟಿ ಮುಳ್ಳು ಮಲ್ಲಿಗಿ ಮಾಡಿ ಕಲ್ಲ...

ಕುವೆಂಪು ಕಾವ್ಯದಲ್ಲಿ ಯಾವುದು ತೀವ್ರವಾಗಿ ಅಭಿವ್ಯಕ್ತಿಸಲ್ಪಟ್ಟ ವಸ್ತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರಿಸಲು ಕಷ್ಟವಾದೀತು. ಏಕೆಂದರೆ ಪ್ರಕೃತಿ ಕಾವ್ಯವನ್ನೆಂತೊ ಹಾಗೆಯೆ ಸಾಮಾಜಿಕ ಕಾವ್ಯವನ್ನು ಬರೆದ ಕವಿ ಅವರು. ಕುವೆಂಪು ಕಾವ್ಯವನ್ನು ಒತ್ತ...

ದಾರೀಲ್ ಆರೆ ಗುದ್ಲಿ ಯಿಡ್ದಿ ರತ್ನ ಅಳ್ಳ ತೋಡ್ತಾನೆ ಮೇಸ್ತ್ರಿ ನೋಡ್ತಾನೆ; ತೋಡ್ತಿದ್ದಂಗೆ ಏನೋ ನೋಡ್ತ ಆರೇ ವೂರಿ ನಿಲ್ತಾನೆ! ಬೆಪ್ಪಂಗ್ ನಿಲ್ತಾನೆ! ೧ ಎದುರಿನ್ ಬೇಲೀಲ್ ಬಿಟ್ಟಿದ್ ಊವು ರತ್ನನ್ ಕಣ್ಗೆ ಬೀಳ್ತಾದೆ ನೆಪ್ಗೊಳ್ ಏಳ್ತಾದೆ; ಊವಿನ್ ...

1...789

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...