ನಾಮ ಫಲಕಗಳ ಮೇಲೆ ಬರೆದಾ
ಚಿತ್ತಾರದ ಕವಿಕುಂಚದಾ ಹಕ್ಕಿ
ಸುಂದರ ವರ್ಣಗಳ ಬಿಡಿಸಿ
ಮಾರ್ದನಿಯರೂಪದಿ ನಸುನಗೆಯ
ಬೀರಿತು ಮುತ್ತಿಟ್ಟ ಕನ್ನಡತನವ||
ಬೆರೆತಾಯ್ತು ಒಂದೊಂದಾದ ವರ್ಣಗಳ
ಬೆಡಗು ಬಿನ್ನಾಣತನದಿ ಕೂಡಿಸಿ ಓಲೈಸಿ
ಅಕ್ಷರ ಮಾಲೆಗಳ ತಿದ್ದಿ ತೀಡಿದಸೋಗು||
ನೋಡುವವನ ಕಣ್ಸೆಳೆದು ತಂಪಲೆರೆವ
ಮಣಿಕಟ್ಟು ತಾಪಸಿಗನ ಮಗ್ನತೆ ಭಗ್ನಗೊಳಿಸಿ
ಸಿರಿತನದ ಗೆಲ್ಗೆಯ ಉತ್ತುಂಗ ಶಿಖರಕ್ಕೇರಿಸಿತು||
ಆನಂದಾಮೃತ ನೆರೆದ ಸ್ವರಮಾಲೆ ಒಲ್ಮೆಯ
ಇದೋ ಬೆಳಕಾಯ್ತು ಕೂಹೂಕೂಹೂ ಕೋಗಿಲೆ
ಹಾಡಿ ನಲಿದುದ ಕಾಣಗೈದ ಜಾತಕಪಕ್ಷಿ
ಜೊತೆಗೂಡಿ ಮರ್ಮವ ಭೇದಿಸಿ ಹರಿಸಿತು||
ಅಂಗನೆಯರ ಮುಗುಳ್ನಗೆಯ ಅರಿವ
ಮೋಡಿಯಲಿ ಸುಪ್ರಭಾತವ ಹಾಡಿಸಿ
ಮೈ ಮೆರೆವತನದಿ ಕವಿಕುಂಚದಾ ಹಕ್ಕಿ||
ಫಲಕಗಳ ಮೈ ಯೊಡ್ಡಿ ಮೆರೆಸಿತು
ಕಸ್ತೂರಿ ಕನ್ನಡತನದಾ ಬಾಳ್ವೆಯ||
*****