ಯಾಕಮ್ಮ ಈ ಕೋಪ, ಈ ರೋಷ, ಇಷ್ಟೊಂದು ಆವೇಶ ಅವರ ಮೇಲೆ? ಬೆಳೆಯ ಗೊಡಲಿಲ್ಲವೇ ಅವರು ನಮ್ಮ- ನಾವಿಂದು ಇರುವ ಹಾಗೆ? ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ ನಮಗಿಂ...

ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ, ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ, ಕೊಟ್ಟುದಲ್ಲದೆ ನನಗೆ ಚಿತ್ರಹಿಂಸೆಯ, ನನ್ನ ಮಿತ್ರನನೂ ದಾಸ್ಯಕೂಪಕ್ಕೆಳೆದ ಹುನ್ನಾರ. ಕ್ರೂರಿ ಉರಿಗಣ್ಣಿಂದ ಸೆಳೆದುದಲ್ಲದೆ ನನ್ನ ಇನ್ನೊಂದು ಆತ್ಮವನೂ ಬಲವಾಗಿ...

ಬೆಂಗಳೂರಿನಲ್ಲಿ ಒಂದು ಮಾವಿನ ತೋಪು. ಆ ತೋಪಿನಲ್ಲಿ ಒಂದು ಹಿಂಡು ಕಪಿಗಳು ಇದ್ದವು. ಅವು ತಮ್ಮ ಮರಿಗಳನ್ನೆಲ್ಲಾ ಕಟ್ಟಿಕೊಂಡು ದಿನವೂ ತಿಂಡಿಗಾಗಿ ಬೀದಿಬೀದಿ ಆಲೆಯುತ್ತಿದ್ದವು. ತಾಯಿತಂದೆ ಕಪಿಗಳು, ಮರಿಗಳನ್ನು ಕರೆದು “ಜೊಕೇ! ಹಿಂಡು ಬಿಟ್...

ಅಡ್ಡಡ್ಡಲ್ಲ ಉದ್ದುದ್ದಾಗಿ ತಲೆ ಅಲುಗಾಡಿಸುತ್ತಲೇ ಇರಬೇಕು ನಿಲ್ಲಿಸಿದರೆ ಬಂತು ಬೆತ್ತ. ‘ಪಾಪ! ಇವಳೆಷ್ಟು ಮುಗ್ಧೆ’ ಹಾಗೇಽ ಇರಬೇಕು ಮಾತನಾಡಿದರೆ ಮುರಿದುಬೀಳುತ್ತವೆ ಹಲ್ಲು. ಕಣ್ಣಿಗೆ ರೆಪ್ಪೆ ಬಂದಂತೆ ನಟಿಸಬೇಕು ವರ್‍ಣಿಸಿದರೆ ಬಾಸುಂಡೆಗಳು. ಇವ...

ಅವರ ಮನೆಯಲ್ಲಿ ಮೊಗಸಾಲೆ, ಹಜಾರ, ಕೋಣೆ ಎಲ್ಲೆಡೆ ನೆಲ ಸ್ಪಂಜ್‌ನಂತೆ ರತ್ನ ಕಂಬಳಿ. ನಮ್ಮ ಮನೆಯಲ್ಲಿ ಸ್ನಾನದ ಮನೆ ಶೌಚಾಲಯದಲ್ಲಿ ಕೂಡ ನೆಲ ಸ್ಪಂಜ್‌ನಂತೆ ಪಾಚಿಯೋ ಪಾಚಿ! *****...

ಪ್ರೊಫೆಸರ್ ಮರಿಯಪ್ಪ ಭಟ್ ಅವರ ಆಯ್ದ ಇಂಗ್ಲಿಷ್ ಲೇಖನಗಳ ಮತ್ತು ಭಾಷಣಗಳ ಸಂಕಲನವೊಂದು Dravidic Studies ಎ೦ಬ ಹೆಸರಲ್ಲಿ ಈಚೆಗೆ ಪ್ರಕಟವಾಗಿದೆ. ಮರಿಯಪ್ಪ ಭಟ್ಟರ ಮಗಳು ಡಾಕ್ಟರ್ ಶಾರದಾ ಜಯಗೋಪಾಲ್ ಸಂಪಾದಿಸಿ ಚೆನ್ನೈನ ಮರಿಯಪ್ಪ ಭಟ್ ಸಂಸ್ಮರಣ ಸ...

ದುಮಸೋ ಲಣ್ಣಿರಾ ಇಲ್ಲಿ ಈಸ್ವರನಿಗೆ ತಳಕ ದುಮಸೋ ಲಣ್ಣಿರಾ ಇಲ್ಲಿ ಮೇಲು ಹೊಲ್ನರಿಗೇ || ೧ || ದುಮಸೋ ಲಣ್ಣಿರಾ ಇಲ್ಲಿ ನಲಕೆ ನಾಗೇಂದ್ರಗೇ ದುಮಸೋ ಲಣ್ಣಿರಾ ಇಲ್ಲಿ ಕುಲಕೆ ಪಾಂಡವ್ರೀಗೇ || ೨ || ದುಮಸೋ ಲಣ್ಣಿರಾ ಇಲ್ಲಿ ಭೂಮಿ ತಾಯಿಗೇ ದುಮಸೋ ಲಣ್ಣ...

1...45678...16

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....