ತಿಮ್ಮ

ಬೆಂಗಳೂರಿನಲ್ಲಿ ಒಂದು ಮಾವಿನ ತೋಪು. ಆ ತೋಪಿನಲ್ಲಿ ಒಂದು ಹಿಂಡು ಕಪಿಗಳು ಇದ್ದವು. ಅವು ತಮ್ಮ ಮರಿಗಳನ್ನೆಲ್ಲಾ ಕಟ್ಟಿಕೊಂಡು ದಿನವೂ ತಿಂಡಿಗಾಗಿ ಬೀದಿಬೀದಿ ಆಲೆಯುತ್ತಿದ್ದವು. ತಾಯಿತಂದೆ ಕಪಿಗಳು, ಮರಿಗಳನ್ನು ಕರೆದು “ಜೊಕೇ! ಹಿಂಡು ಬಿಟ್ಟು ಹೋದೀರಿ!” ಎಂದು ಆಗಾಗ ಹೇಳುತ್ತಿದ್ದವು.

ಆ ಹಿಂಡಿನಲ್ಲಿ ತಿಮ್ಮ ಎಂಬ ಒಂದು ಮರಿ ಇತ್ತು. ಆದು ಒಂದು ದಿನ “ಯಾವಾ ಗಲೂ ಇವರ ಜೊತೆಯಲ್ಲಿಯೇ ಏಕೆ ಹೋಗಬೇಕು? ಇಂದು ನಾನೇ ಬೇರೆ ಹೋಗುತ್ತೇನೆ” ಎಂದುಕೊಂಡಿತು. ಅಂದು ಹಾಗೆಯೇ, ಅವರೆಲ್ಲರೂ ಹೋಗುತ್ತಿದ್ದ ದಾರಿಯನ್ನು ಬಿಟ್ಟು, ಮತ್ತೊಂದು ಹಾದಿಯನ್ನು ಹಿಡಿಯಿತು. ಎಂದಿನಂತೆ ಮರಿಗಳೆಲ್ಲ ಜತೆಯಲ್ಲಿ ಬರುತ್ತಿವೆ ಎಂದು ದೊಡ್ಡ ಕಪಿಗಳೂ ಮುಂದು ಮುಂದಕ್ಕೆ ಹೋದವು. ತಿಮ್ಮನು ಹಿಂದೆ ಉಳಿದುದು ಯಾರಿಗೂ ತಿಳಿಯದು.

ತಿಮ್ಮನು ಕೊಂಚದೂರ ಹೋಗುವುದರೊಳಗಾಗಿ, ಒಂದು ನಾಯಿ ಬಂತು; ತಿಮ್ಮನನ್ನು ಕಂಡು ಬೊಗಳಿತು. ಅದನ್ನು ಕಂಡು ಕೆಲವರು ತುಂಟ ಹುಡುಗರು ಬಂದರು. ತಿಮ್ಮನನ್ನು ಬೇಕಾದಷ್ಟು ಕೀಟಲೆ ಮಾಡಿದರು. ಕೆಲವರು ಮುಖವನ್ನು ಉದ್ದಮಾಡಿ, “ಗುರ್‌ಗುರ್‌” ಎಂದು ಅಣಕಿಸಿದರು. ಮತ್ತೆ ಕೆಲವರು ಕೈಚಪ್ಪಾಳೆಯಿಟ್ಟು “ಕೋತೀ ತಿಮ್ಮಾ! ಲೇ! ಕೋತೀ ತಿಮ್ಮಾ!” ಎಂದು ಅದನ್ನು ರೇಗಿಸಿದರು. ಇನ್ನು ಕೆಲವರು ಕಲ್ಲಿನಿಂದ ಹೊಡೆದರು. ಇದನ್ನೆಲ್ಲಾ ಕಂಡು ತಿಮ್ಮನಿಗೆ ಬಲು ದಿಗಿಲಾಯಿತು. ಅರಿಚಿಕೊಂಡಿತು; ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೋ ತಿಳಿಯದೆ, ಸುಮ್ಮನೆ “ಕಿಚಿಕಿಚಿ” ಎಂದು ಒರಲಿಕೊಂಡಿತು.

ಅಷ್ಟರಲ್ಲಿ ಅದರ ಅರಚಾಟವು ದೊಡ್ಡ ಕಪಿಗಳಿಗೆ ಕೇಳಿಸಿತು. ಕೂಡಲೇ ಹಿಂಡಿಗೆ ಹಿಂಡೇ ತಿಮ್ಮನಿರುವ ತಾವಿಗೆ ಓಡಿಬಂದವು. ಅವು ಬರುತ್ತಲೇ ಹುಡುಗರೂ ಓಡಿಹೋದರು. ನಾಯಿಯೂ ಓಡಿಹೋಯಿತು.

ಆಗ ಅದಕ್ಕೆ ಬುದ್ಧಿ ಬಂತು. ತಿಮ್ಮನು ಅಲ್ಲಿಂದ ಮುಂದೆ ಎಂದೂ ಅವಿಧೇಯನಾಗಿ ನಡೆಯಲಿಲ್ಲ. ಹಿಂಡಿನಲ್ಲಿ ಯಾರಾದರೂ ತಾಯಿತಂದೆಗಳು ಹೇಳಿದ ಮಾತು ಕೇಳದೆ ಹೋದರೆ, ತಿಮ್ಮನು ಅವರಿಗೆ ತನ್ನ ಕಥೆಯನ್ನು ಹೇಳಿ ದಾರಿಗೆ ತರುತ್ತಿತ್ತು.
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...