ದುಮಸೋ ಲಣ್ಣಿರಾ ಇಲ್ಲಿ ಈಸ್ವರನಿಗೆ ತಳಕ
ದುಮಸೋ ಲಣ್ಣಿರಾ ಇಲ್ಲಿ ಮೇಲು ಹೊಲ್ನರಿಗೇ || ೧ ||

ದುಮಸೋ ಲಣ್ಣಿರಾ ಇಲ್ಲಿ ನಲಕೆ ನಾಗೇಂದ್ರಗೇ
ದುಮಸೋ ಲಣ್ಣಿರಾ ಇಲ್ಲಿ ಕುಲಕೆ ಪಾಂಡವ್ರೀಗೇ || ೨ ||

ದುಮಸೋ ಲಣ್ಣಿರಾ ಇಲ್ಲಿ ಭೂಮಿ ತಾಯಿಗೇ
ದುಮಸೋ ಲಣ್ಣಿರಾ ಇಲ್ಲಿ ಜಟ್ಗು ರಾಯಗೇ || ೩ ||

ದುಮಸೋ ಲಣ್ಣಿರಾ ಇಲ್ಲಿ ಕೀಳು ಪರಿವಾರದರಿಗೇ
ದುಮಸೋ ಲಣ್ಣಿರಾ ಇಲ್ಲಿ ಉರವಾ ಜೋತಿಗೇ || ೪ ||

ದುಮಸೋ ಲಣ್ಣಿರಾ ಇಲ್ಲಿ ಮೆರವಾ ತುಂಬಿಗೇ
ದುಮಸೋ ಲಣ್ಣಿರಾ ಇಲ್ಲಿ ಮೆರವಾ ಚೌಡಮ್ಮಗೇ || ೫ ||

ದುಮಸೋ ಲಣ್ಣಿರಾ ಇಲ್ಲಿ ವರ್ಸಗ್ವೊಂದು ಲಬ್ಬ
ದುಮಸೋ ಲಣ್ಣಿರಾ ಇಲ್ಲಿ ಲಾಡು ತಿಂಬ ಮಕ್ಕಳೇ || ೬ ||

ಹಬ್ಬದ ಮೂರುದಿನ ಲಾಡು ತಿನ್ನಿ ಮಕ್ಕಳೇ
ಹಬ್ಬದ ಮರುದಿನ ಬೇಡು ತಿನ್ನಿ ಮಕ್ಕಳೇ || ೭ ||

ಹಬ್ಬದ ಮರುದಿನ ಮಾ ದೊಡ್ಡ ಬಳಗವೋ
ಹಬ್ಬದ ಮರುದಿನ ಕಾಮನ ಬಳಗವೋ || ೮ ||

ಹಬ್ಬದ ಮರುದಿನ ಬೀಮ ದೊಡ್ಡ ಬಳಗವೋ
ಹಬ್ಬದ ಮರುದಿನ ಕಾಮಗು ಬೀಮಗು ಕತ್ನವು ಬಿದ್ದೋ || ೯ ||

ಹಬ್ಬದ ಮರುದಿನ ಕಾಮನೆ ಬಿದ್ದಾಬೀಮನೆ ಗೆದ್ದಾ
ಹಬ್ಬದ ಮರುದಿನ ಬೀಮನೆ ಬಿದ್ದಾ ಕಾಮನೆ ಗೆದ್ದಾ || ೧೦ ||
*****
ಹೇಳಿದವರು: ಸಣಕೂಸ ಉಪ್ಪಾರ, ಹಳದಿಪುರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.