ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲ, ಬಿಗಿದ ಕುದುರೆಯ ಹೂಡುವಾಯಾಸವಿಲ್ಲ, ಮಿಗೆ ಕಾದ ನೀರ ಹಬೆಯಿಂದ ಬಲು ಬೇಗ ಹೊಗೆಯ ಗಾಡಿಯು ನೋಡು ಹೋಗುತಿಹುದೀಗ. ಸೋಲಿಪುದು ಗಾಳಿಯನ್ನು ಬಲು ವೇಗದಿಂದ; ಮೇಲೆ ಹೊಗೆಯುಗುಳುತಿಹುದೀ ಕೊಳವೆಯಿಂದ; ಕಾಲಕ್ಕೆ ಸರಿಯಾ...

ಅಮ್ಮಮ್ಮ ಲಾಭದಾಯಕವೆಂಬೊಂದು ವಿಶೇಷಣಕೆಂಥ ಸಮ್ಮೋಹನ ಶಕ್ತಿಯೋ? ಸುಮ್ಮನೀ ಪದವನೆಸೆದೊ ಡೆಮ್ಮ ರೈತರು ಹೊಸ ಬೆಳೆಯ ನೆಚ್ಚುವರು ತಮ್ಮನೆ ಅಡವಿಟ್ಟು ನೆಲವ ಕಚ್ಚುವರು ಅಮ್ಮನಭಿಮಾನದಡಿ ಮುಗ್ಗರಿಸಿ ನೋಯುವರು – ವಿಜ್ಞಾನೇಶ್ವರಾ *****...

ಬದುಕಿನ ರಣಾಂಗಣದೆ ಮೋಹಪಾಶಗಳ ಬ್ರಹ್ಮಾಸ್ತ್ರ ಬಂಧನದೆ ಬಳಲುವ ಮನುಜನಿಗುಂಟೇ ಜೀವನ ಹಣ ಅಧಿಕಾರ ಅಂತಸ್ತು ಮಾಯಾಮೃಗದ ಬೆನ್ನೇರಿ ನಿರಾಸೆಯ ಕೂಪಕ್ಕೆ ಬೀಳುವ ಮನುಜನಿಗುಂಟೇ ಸುಖಜೀವನ ನೂರೆಂಟು ಸಮಸ್ಯೆಗಳ ಸುಳಿಯಲಿ ಸಿಕ್ಕು ಚಿಂತೆಯ ಚಿತೆಯ ಮೇಲೆ ಬೇಯು...

ಅರಿಯಬಹುದು ಕುರುಹಿಡಬಾರದು ಭಾವಿಸಬಹುದು ಬೆರೆಸಬಾರದು ಕಾಣಬಹುದು ಕೈಗೆ ಸಿಲುಕದು ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ಶರಣರು ಬಲ್ಲರು [ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ] ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-...

೧ ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ ! ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ ! ಚಿನ್ನದ ಮುದ್ದಿಯ ಮೂರ್ತಿಯನಿಟ್ಟಿ ! ಎಡಬಲ ನಂದಾದೀಪಗಳಿಟ್ಟಿ ! ೨ ಹಗಲಿರುಳೆನ್ನದೆ ಕಾಯುತಲಿರುವಿ! ತಾಳ ತಂತಿಗಳ ಬಾರಿಸುತಿರುವಿ ! ಸವಿ ಸವಿ ತಿಂಡಿಯ ತೋರಿಸುತಿರುವಿ ! ಪುಣ್...

ಬಿರು ಬೇಸಿಗೆಯ ಮಧ್ಯಾಹ್ನ ದೂರದಲ್ಲಿ ಎಲ್ಲೋ ಚಹಾದ ಅಂಗಡಿಯಲಿ ರೇಡಿಯೋ ಹಾಡುತ್ತಿದೆ. ರಸ್ತೆ ಇಲ್ಲದ ಊರ ಬಯಲಿನ ತುಂಬ ಸೂರ್ಯ ಚಾಪೆ ಹಾಸಿದ್ದಾನೆ. ಮಾವಿನ ಮರದಲ್ಲಿ ಹಕ್ಕಿಗಳು ನೆರಳಿಗೆ ಕುಳಿತಿವೆ. ಮತ್ತು ಅಂಗಳದ ನೆರಳಿನಲ್ಲಿ ನಾಯಿ ಮಲಗಿದೆ. ಚಹಾದ...

ಓ ಮನವೇ ಪ್ರೇಮ ಪೂಜಾರಿ ನಾನು ನುಡಿಸುವ ವೀಣೆಯ ಶೃತಿಯೆ ನಾನು ನುಡಿಯುವ ಮನದಾ ವೈಣಿಕ ಕೇಳೆ ಕರೆವ ಕೊರಳ ಮಂಜುಳ ನಾದವೇ ನಾನು ಭಾವದಿ ಕರೆವ ಭಾಮಿನಿ ಕೇಳೆ ಮಧುರ ರಾಗಿ ಕರೆವ ತರಂಗಿಣಿ ನಾನು ಅನುರಾಗದಿ ಕರೆವ ಆನಂದಿನಿ ಕೇಳೆ ಮೋಹನ ಮುರಳಿಗಾನ ಸಖಿಯೇ ...

ಭಜಿಸು ಭಜಿಸು ನಿತ್ಯ ಶಿವ ನಾಮ ಶಿವನಾಮವೊಂದೇ ಮುಕ್ತಿಗೆ ಸೋಪಾನ ನೀನು ಕೋಟಿ ಪಾಪಗಳು ಮಾಡಿದರೇನು ಅಳಿಸಿ ಹಾಕುವುದು ನಿನ್ನ ಆತ್ಮಧ್ಯಾನ ಸತ್ಯವೊಂದೇ ಶಿವನಲ್ಲಿಗೆ ಕರೆದೊಯ್ಯುವುದು ನಿರ್ದೋಷ ಮನವೆ ಅದಕ್ಕೆ ಸಾಕ್ಷಿ ಮನವೊಂದು ನಿನ್ನವನಾದ ರಾಯ್ತು ಸು...

ಸೂರ್ಯನಾರಾಯಣನು ದಿನಾಗಲೂ ವಿದ್ಯಾಭ್ಯಾಸದಲ್ಲಿ ಪೂರ್ಣ ಮನಸ್ಸಿಟ್ಟು ಸುಜ್ವನೆನಿಸಿಕೊಳ್ಳುವವನಾದನು. ಅನನ ಮುಖದ ವರ್ಚಸ್ಸು ಬಾಲಾರ್ಕನಂತೆ ಶೋಭಿಸುವದಾಯಿತು. ದ್ವಾದಶ ವರ್ಷಗಳು ಮಾತ್ರ ತುಂಬಿರುವುದಾದರೂ ನೋಡುವಿಕೆಗೆ ಹದಿನಾರು ವರ್ಷ ಪ್ರಾಯವಂತನಂತೆ ...

1...1011121314...16

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...