ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ ನಾ, ಧೋ ಎಂಬ ಸುರಿವ ಮಳೆಗೆ ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ ಅಲೆಯುತ್ತಿರುವೆ. ಚಳಿ ನನ್ನ ನರನಾಡಿಗಳಲಿ ಇಳಿದು ರಕ್ತ ಹೆಪ್ಪುಗಟ್ಟಿದ ಈ ಅಲೆದಾಟ ಮತ್ತು ನಭದಲ್ಲಿ ಹಾರುತ್ತಿದೆ ತಲೆಯತ್ತಿ ಒಂಟಿ ಹಕ್ಕಿ, ನ...

ವರ್‍ತಮಾನ ಅಭಿಮಾನದ ಹೊನ್ನಬೆಳಕಲ್ಲಿ ಮುನ್ನೆಡೆದಿದೆ ನವಯುಗದ ನವಚೇತನ ಹಿಮ್ಮೆಟ್ಟದೆ ಮುನ್ನುಗಿದೆ ಅನಂತ ಕಾನನ || ಕರ್‍ನಾಟ ಗತಕಾಲದಿ ಮೆರೆದಿದೆ ಕಲಿ ಜಾಗೃತದ ಅರಿವ ಮೂಡಿಸುವಡೆಗೆ ಶೃಂಗವೇರಿದೆ ಬಾಹ್ಯಸತ್ವವಿಜ್ಞಾನದ ಮರ್‍ಮತೆ ಸಾಧನಕೆ || ಮನ್ವಂತ...

ತಾಯೆ ಓ ಜಗದ ಮಾಯೆ ಬಂಧಿಸಿರುವೆ ನಿ ಎತ್ತೆತ್ತಲು ನಿನ್ನ ಸ್ಮರಣಿಯ ಮರೆಸಿ ಮತ್ತೆ ದುಕ್ಕ ದುಮ್ಮಾನಗಳ ಸುತ್ತಲೂ ನಿನ್ನ ಜ್ವಾಲೆಯಂತಹ ಕಂಗಳು ನಿನ್ನ ನಗುವು ಬೆಳದಿಂಗಳು ನಿನ್ನ ಕೌದ್ರಾವತಾರದ ಕೆನ್ನಾಲಗೆ ಮೂಲೋಕಕ್ಕೆ ಸುಡುವ ಇಂಗಳು ನಿನ್ನ ನರ್‍ತನವೂ...

ಮಾಧವರಾಯನ ಕಾಗದವು ಮುಟ್ಟಿ ದಾಗ್ಗೆ ವಿಕಾರ್-ಉಲ್- ಮುಲ್‌ಕನು ಬೊಂಬಾಯಿನಲ್ಲಿದ್ದನು. ಅವನು ಆ ಕಾಗದವನ್ನು ನೋಡಿದೊಡನೆಯೆ ತನ್ನ ಕೆಲಸವನ್ನೆಲ್ಲಾ ಆದಷ್ಟು. ಬೇಗನೆ ಮುಗಿಸಿ ಕೊಂಡು ಹೈದರಾಬಾದಿಗೆ ಹಿಂದಿರುಗಿ ಅಲ್ಲಿನ ಪೋಲೀಸಿನವರೊಂದಿಗೆ ಮಾತಾಡಿ ಗಂಗ...

ಮಾತೃವಚನ ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ ಪಾದವಿಟ್ಟೆ ನಿನ್ನ ನೆನೆ...

೧ ಸೆಟ್ಟಿಯ ಮನೆ ಸುಲಿಗೆಯಾಯ್ತು, ಮನೆಯಲಿದ್ದುದೆಲ್ಲ ಹೊಯ್ತು, ಬಡಿದುಕೊಂಡು ಅತ್ತ ಸೆಟ್ಟಿ ಬಾಯ್ಗೆ ಡೊಳ್ಳಿಗೆ; ನಡೆದನಂದೆ ನಗರ ಬಿಟ್ಟು ತನ್ನ ಹಳ್ಳಿಗೆ. ೨ ‘ಬಸ್ಸು’ಗಳಲಿ ಅಂದು ಜಿದ್ದು; ಸೆಟ್ಟಿ ಬರಲು ತಟ್ಟನೆದ್ದು ಓಡಿ ಬಳಿಗೆ ಬಂದನೊಬ್ಬ ಬಸ್ಸೆ...

ಬೇಲಿಯ ಹೂಗಳು ನಾವು ಬೆಳದಿಂಗಳ ಬಾಲೆಯು ನೀನು|| ತರತರಹದ ಬಣ್ಣಗಳಲಿ, ತರತರದ ನೋವುಗಳಲಿ ನಾವು| ಸಂತಸದಲಿ ಮೈತುಂಬಿ ಸ್ವಚ್ಚ ಬಿಳಿಯ ಬಣ್ಣದಲಿ ಕಾಣಸಿಗುವೆ ನೀನು|| ಪ್ರತಿ ತಿಂಗಳಿಗೊಮ್ಮೆ ನಿನಗೆ ಮರುವಸಂತದ ಸಂತಸ| ನಮಗೆಲ್ಲಾ ವರ್ಷಕ್ಕೊಂದೇ ವಸಂತ ಮಾ...

ಕುಡಕರ್ ಮಾತ್ವ ತಿಳಕೊಳ್ದೇನೆ ನೂಕ್ಬಾರ್ದ್ ಔರ್‍ನ ಕೆಳಗೆ; ಯಾವ್ ಚಿಪ್ನಾಗ ಯಾವ್ ಮುತ್ತ್ ಐತೊ ಒಡದಿ ನೋಡ್ಬೇಕ್ ಒಳಗೆ! ೧ ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ ಸಿಕ್ಕೋಕಿಲ್ವ ಗಂಗೆ? ಸಾಜಾ ಯೋಳೋನ್ ಯಾರಾದ್ರೇನು? ಸತ್ಯ ಕಣ್ ಕಂಡೌಂಗೆ! ೨ ಅರ್‍ತ್ ಇ...

ಕ್ರೀಡಾ ಭೂಮಿಕೆ ಮತ್ತು ಬಯಲು ಆಲಯಗಳೆರಡೂ ಒಂದೇ. ಎರಡೂ ಪವಿತ್ರವಾದುವೇ. ಕಾರಣ, ಇಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲಗೊಳ್ಳುವ ಮನಸ್ಸು ಎಲ್ಲಾ ಜಾತಿ, ಮತ, ವರ್ಗ, ಪಂಗಡ, ಭಾಷೆ, ರಾಷ್ಟ್ರೀಯತೆ ಮೊದಲಾದ ಎಲ್ಲಾ ಗೋಡೆಗಳನ್ನು ಮೀರಿ ನಿ...

ಕಾರ್ಮೋಡ ಗಗನದಲಿ ದಟ್ಟವಾಗಿರೆ ಕೋಲ್ಮಿಂಚು ಗುಡುಗು ದನಿ ಎದೆ ಝಲ್ಲೆನುತಿರೆ ಮೊದಲಿಗೆ ವಿದ್ಯುತ್ ಬೆಳ್ಳಿ ಗೆರೆ ಕಣ್ಣು ಕೋರೈಸುವುದು ಖಟ್ಟೆಂದು ಸಿಡಿಲು ಕಿವಿಗಪ್ಪಳಿಸುವುದು ಕೋಲ್ಮಿಂಚಿನ ಹಿಂದೆ ಗುಡುಗು ಮಿಂಚು ಆಕಾಶದಲಿ ಹೊರಟರೂ ಒಂದೇ ಸಲ ಶಬ್ದಕ...

1...1516171819...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...