ಕಾರ್ಮೋಡ ಗಗನದಲಿ
ದಟ್ಟವಾಗಿರೆ
ಕೋಲ್ಮಿಂಚು ಗುಡುಗು ದನಿ
ಎದೆ ಝಲ್ಲೆನುತಿರೆ

ಮೊದಲಿಗೆ ವಿದ್ಯುತ್ ಬೆಳ್ಳಿ ಗೆರೆ
ಕಣ್ಣು ಕೋರೈಸುವುದು
ಖಟ್ಟೆಂದು ಸಿಡಿಲು ಕಿವಿಗಪ್ಪಳಿಸುವುದು
ಕೋಲ್ಮಿಂಚಿನ ಹಿಂದೆ

ಗುಡುಗು ಮಿಂಚು ಆಕಾಶದಲಿ
ಹೊರಟರೂ ಒಂದೇ ಸಲ
ಶಬ್ದಕ್ಕಿಂತ ಬೆಳಕಿನ ವೇಗ ಅತ್ಯಧಿಕ
ಮಿಂಚು ಗೋಚರ ಬೇಗ

ಶಬ್ದದ ವೇಗವು ಬೆಳಕಿಗಿಂತ
ಚಲಿಸವುದು ನಿಧಾನ
ಅದಕೆ ಬೆಳಕು ಕಂಡ ನಂತರ
ಶಬ್ದದ ಆಗಮನ
*****