ದೇವ ಮಂದಿರದಲ್ಲಿ ನನ್ನ ಒಡವೆ ಕದ್ದ ಕಳ್ಳ ಸಿಕ್ಕಿ ಬಿದ್ದ- ಜೈಲಿನಲ್ಲಿ ಬಂದಿಯಾದ. ಅದೇ ದೇಗುಲದಲ್ಲಿ ಹೃದಯ ಕದ್ದ ನಲ್ಲ ನನ್ನ ಮನ ಮಂದಿರದಲ್ಲಿ ಬಂದಿಯಾದ- ಆತ್ಮ ಬಂಧುವಾದ. *****...

‘ಸುದೀರ್ಘವೂ ಸೃಜನಶೀಲವೂ ಆದ ಬದುಕನ್ನು ಬದುಕಿದ ಇತರ ಶ್ರೇಷ್ಠ ಕಲಾವಿದರಂತೆಯೇ, ಬರ್ನಿನಿ ಕೂಡಾ ವ್ಯಕ್ತಿಗತವಾದ ತನ್ನದೇ ತಡವಾದ ಶೈಲಿಯೊಂದನ್ನು ರೂಪಿಸಿಕೊಂಡ. ಈ ಸಾದೃಶ್ಯವನ್ನು, ಉದಾಹರಣೆಗೆ, ರೆಂಬ್ರಾಂಟ್ ಅಥವಾ ಬಿಥೋವೆನ್‌ರ ಜತೆ ಇನ್ನೂ ...

ಪಾಂಡೋರೊಂದು ಮುರುದಂಗಾ ಲಿಡೀದಾರೋ ನಾರಾಣ ತಾಲಾವ ಹಿಡಿದಾನೋ || ೧ || ಪಾರಾವತಿ ಲುರುಗೆಜ್ಜೇನ ಹಿಡಿದಾಲೋ ಮೂಡಿನೊಂದು ಮುಂದಾಗೀ ನಡೆದಾರೋ || ೨ || ಮೂಡಿಗೊಂದು ಮೊಕುವಾಕೇ ನಿಂತಾರೋ ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ || ೩ || ನಾರಾೖಣ ತಾಲಾನ...

ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ – ವಿಜ್ಞ...

ಮಂಜುವಿಗೆ ಶೀಲಾ ಹೇಳಿದ್ಲು – “ರೀ ಬಾಚಣಿಗೆಯ ಒಂದು ಹಲ್ಲು ಮುರಿದು ಹೋಗಿದೆ, ಹೊಸ ಬಾಚಣಿಗೆ ತನ್ನಿ” ಮಂಜ: “ಒಂದು ಹಲ್ಲು ಮುರಿದ್ರೆ ಹೊಸ ಹಣಿಗೆ ಯಾಕೆ?” ಶೀಲಾ: “ಅದರಲ್ಲಿ ಉಳಿದಿದ್ದು ಒಂದೇ ಹಲ್ಲು..&...

ಬೆನ್ನು ಬಾಗಿಸಿಕೊಂಡು ತಂದುದನ್ನು ಅಟ್ಟುಕೊಂಡು ಉಟ್ಟುಕೊಂಡು ಪಾಡು ಪಟ್ಟುಕೊಂಡು ಜೀ ಹುಜೂರ್ ಹಾಡಿಕೊಂಡು ಉಸಿರು ಬಿಡಲು ಅಪಣೆ ಬೇಡಿಕೊಂಡು ಕೀ ಕೊಟ್ಟ ಗೊಂಬೆಗಳಂತೆ ಕುಣಿಯುವವರು ನಾವು ಕುಣಿಸುವವರು ನೀವು. ನಿಮ್ಮ ಪಾದಕ್ಕೆ ಮೂಗುದಾರಕ್ಕೆ ಮಣಿದು ತ...

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು. ನೋಡಾ ಅಯ್ಯಾ ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲ...

-ಬ್ರಾಹ್ಮಣ ವೇಷಧಾರಿಗಳಾಗಿ ಭಿಕ್ಷೆ ಬೇಡುತ್ತ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಪ್ರಜಾಪೀಡಕನಾಗಿದ್ದ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ, ಇನ್ನು ಅಲ್ಲಿರುವುದು ಒಳಿತಲ್ಲವೆಂದು ಭಾವಿಸಿ, ಅಗ್ನಿಪ...

1...1415161718...183

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...