ಅರಿಯದವರು ನಾವು ಬಾಳ ಅರಿಯದವರು ತೋರಿಸುವ ಜಗಕೆ ನಾವು ಕೂಡಿ ಬಾಳುವ ನೀತಿಯನು ನನ್ನಲ್ಲಿಯೂ ಏನೂ ಇಲ್ಲ ನಿನ್ನಲ್ಲಿಯೂ ಏನೂ ಇಲ್ಲ ಅನ್ನಕ್ಕಿಂತ ಇನ್ನೊಂದು ದೇವರಿಲ್ಲ ಎನ್ನುವುದು ನಾವುಗಳು ಬಲ್ಲೆವಲ್ಲ ಬನ್ನಿ ಗೆಳೆಯರೆಲ್ಲ ಇಲ್ಲಿ ಬನ್ನಿ ಇದ್ದುದನ್ನ...

ಆ ದಿನ ಮುಂಜಾವಿನಿಂದ ಸಂಜೆಯ ತನಕ ಬೀದಿಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಪೇಟೆಯಲ್ಲಿ ಎಲ್ಲೆಡೆ ಕಂಡ ಹಲವು ಹತ್ತು ಮುಖಗಳು ಎಲ್ಲ ಪರಿಚಿತ! ಕೊನೆಗೆ – ಹೋಗಿ ಮನೆಗೆ ನಿಂತಾಗ ಕನ್ನಡಿಯ ಮುಂದೆ, ಕಂಡ ಪ್ರತಿಬಿಂಬ ಪರಿಚಿತ ತುಂಬ! ಬರಿ...

ಕರ್ನಾಟಕದಲ್ಲಿ ನಕ್ಸಲ್ ಪಿಡುಗನ್ನು ನಿವಾರಿಸುವುದು ಜನ ತಿಳಿದುಕೊಂಡಷ್ಟು ಸುಲಭವಲ್ಲ. ಭಾರತದ ನಕ್ಸಲಿಸಮಿನ ಆರಂಭ ಏನೇ ಇರಲಿ, ಅದೀಗ ಅಂತರರಾಷ್ಟ್ರೀಯ ಮಾವೋಯಿಸಮಿನ ಒಂದು ಅಂಗ. ಸೋವಿಯೆಟ್ ರಶಿಯಾದ ಪತನ ಮತ್ತು ಚೈನಾದಲ್ಲಿ ಮಾವೋಯಿಸಮ್ ಬದಲಾದ ಇಂದಿನ...

ಬಸವ ಚೇತನ ಶಿವನಿಕೇತನ ಭುವನ ಕಾಶಿ ಕ್ಷೇತ್ರಾ ಬಸವ ವಚನಾ ವೇದ ಮಂತ್ರಾ ಪ್ರೇಮಗೀತಾ ಜ್ಞಾನಾ ದೇಹ ದೇಗುಲ ಮನವೆ ಲಿಂಗಾ ಕೋಟಿ ಲಿಂಗದ ಕ್ಷೇತ್ರಾ ನಡೆಯೆ ಲಿಂಗಾ ನುಡಿಯೆ ಜಂಗಮ ಜ್ಞಾನ ಮಾನಸ ಯಜ್ಞಾ ನಾನು ಕಿರಿಯಾ ನೀನು ಹಿರಿಯಾ ಗೌರಿಶಂಕರ ಶಿಖಽರಾ ಸಕಲ...

ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ..” ಮಾಣಿ: “ಅವರಿಲ್ಲಾ ಸಾರ್” ಗಿರಾಕಿ: “ಎಲ್ಲಿ ಹೋಗಿದ್ದಾರೆ?” ಮಾಣಿ: “ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು..&#8221...

ರಾಮನನ್ನು ದೇವರಾಗಿಸಿ ಗಳಿಸಿದವರು ಸಾವಿರಾರು ಬಾಬರನಿಗೆ ಗೋರಿಕಟ್ಟಿ ಗಳಿಸಿದವರು ಸಾವಿರಾರು ಎಲುಬಿನ ಗೂಡಾದ ನಿನ್ನನ್ನೇ ಬಂಡವಾಳ ಮಾಡಿಕೊಂಡು ಸುಲಿದವರು ಸಾವಿರಾರು. *****...

ಸಾವಯವವೆಂದರದು ಸಾಯುವ ಕೃಷಿಯಂ ದವಸರದೊಳೊಬ್ಬರಬ್ಬರಿಸಿದರಂದು. ನಾ ಸಾವರಿಸಿ ಆಲೋಚಿಸಿದೊಡಲ್ಲಿ ತಿಳಿಯಿತ ದುವೆ ಸರಿಯೆಂದು, ಜೀವ ನಿಯಮವೆ ಹುಟ್ಟು ಸಾವಿನೊಳಿರಲು ಸಾವಿರದಾ ನಿರವಯವ ತಪ್ಪೆಂದು – ವಿಜ್ಞಾನೇಶ್ವರಾ *****...

ನಡು ಹಗಲಿನ ಉರಿ ಬಿಸಿಲಿಗೆ ಬೀದಿಯ ಬದಿಯಲ್ಲಿ ನಾನು ನಿಂತಿರುವೆ ನನ್ನ ಹಿಂಬದಿಗೆ ಮರ ಅದರ ನೆರಳು ನನ್ನೆದುರು ನಿಂತಿದೆ ಮರದ ಕೊಂಬೆ ಕಪ್ಪು, ರೆಂಬೆ ಬೂದು ಕಪ್ಪು, ಎಲೆ ಹಸಿರು, ನೀಲ-ಶ್ಯಾಮಲ ಹೂವು ಅದರ ಮೇಲೊಂದು ಕರ್ರಗಿನ ಕಾಗೆ ಕೂತಿದೆ ಮರದಲ್ಲಿ ...

ಮುಗಿದ ಕತೆಗೆ ತೆರಯಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು || ಭಾವಲತೆಯ ದಳವ ಬಿಡಿಸಿ ಬಿರಿದ ಚೆಂದ ಹೂವಾ ಮುಡಿಸಿ ಮುಡಿಯ ಏರಿ ಒಲವ ತೋರಿ ಮನವ ಸೆಳೆಯಿತು ಚಂಚಲ ಮನಸು || ಕತ್ತಲೆಯ ನೀಗಿಸಿ ಬೆ...

1...34567...13

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....