ರಾಮನನ್ನು ದೇವರಾಗಿಸಿ
ಗಳಿಸಿದವರು ಸಾವಿರಾರು
ಬಾಬರನಿಗೆ ಗೋರಿಕಟ್ಟಿ
ಗಳಿಸಿದವರು ಸಾವಿರಾರು
ಎಲುಬಿನ ಗೂಡಾದ ನಿನ್ನನ್ನೇ
ಬಂಡವಾಳ ಮಾಡಿಕೊಂಡು
ಸುಲಿದವರು ಸಾವಿರಾರು.
*****