ಬೇಸಿಗೆ ಬಂತೆಂದಿರೆ ಸೆಕೆ! ಸೆಕೆ! ತಂಪನ್ನೀಯುವ ಕಾಡುಗಳನ್ನು ಕಡಿಯುತ್ತ ಭೂಮಿಯಲ್ಲಿ ಸುರಂಗತೋಡುತ್ತ ಭೂಮಿಗೆ ರಾಸಾಯನಿಕಗಳನ್ನು ಮಿಶ್ರಮಾಡುತ್ತ ಹೋಗುವುದರಿಂದ ಭೂಮಿ ಹೆಚ್ಚು ಉಷ್ಣತೆಯನ್ನು ಹೊಂದುತ್ತದೆ. ಈಗಾಗಲೇ ಭೂಮಿಯ ತಾಪಮಾನ (ಉಷ್ಟತೆ) ಹೆಚ್ಚ...

ಭೋರ್‍ಗರೆದು ಹರಿಯುತಿದ್ದ ಹರೆಯದ ನೀರು ಕೊಳದಲ್ಲಿ ಮುಳುಗಿ ಮೈ ಮರೆತು ಮಲಗಿ ತಾವರೆಗಳು ಹುಟ್ಟಿ ವಧುಗಳಾಗಿ ಬಿರಿದು ದುಂಬಿಗಳು ಸಾಲು ಕಟ್ಟಿ ವರಗಳಾಗಿ ನೆರೆದು ಸುಂದರ ಸರೋವರ *****...

ಮಾತಿಲ್ಲದ ಕವಿತೆ ನೀ ಹಾಡಿದೆ ಈ ಹಾಡಿಗೆ ನನ್ನ ಕವಿತೆ ಸೋತಿದೆ || ಮಾತು . . . ಮಾತು . . . ಜಗವೆಲ್ಲ ಮಾತು ಕಿವಿಯಾಗಿದ್ದರೂ ದೊಡ್ಡ ತೂತು ತಿಳಿಯುತ್ತಿಲ್ಲ ಯಾವುದೆ ಅರ್ಥ ಇನ್ನೀ ವ್ಯಾಕರಣ ಅಲ್ಲವೆ ವ್ಯರ್ಥ? ಭೂರಮೆ ಮಾತು ಅರಿವುದು ಮುಗಿಲು ನದಿಗ...

ದಸರಾ ರಜೆಯಲ್ಲಿ ಮೂರ್ತಿ ಬೆಂಗಳೂರಿನಿಂದ ಹಳ್ಳಿಗೆ ಬಂದಿದ್ದ. ಐಶ್ವರ್ಯವಂತರಾದ ತಂದೆತಾಯಿಯರಿಗೆ ಅವನೊಬ್ಬನೇ ಮಗ; ತಾಯಿಯ ಪ್ರೇಮದ ಬೊಂಬೆ. ಇಪ್ಪತ್ತುಮೂರು ವರ್ಷ ವಯಸ್ಸಿನವನಾದರೂ ತಾಯಿ ಅವನನ್ನು ಎರಡು ವರ್ಷದ ಮಗುವಿನಂತೆ ಮುದ್ದಿಸುತ್ತಿದ್ದಳು. ಅವ...

ಪ್ರಶಸ್ತಿಗೆ ಮಾಡಬೇಕಾಗಿಲ್ಲ ಸಾಧನೆ ಹಣವೊಂದಿದ್ದರೆ ಸಿಗುವುದು ಬೇಗನೆ ಅರ್‍ಹತೆ, ಯೋಗ್ಯತೆಯಿಲ್ಲ ಪಡೆದವರಿಗೆ ಶಿಫಾರಸಿದ್ದರೆ ಸಾಕು ಸಿಗುವುದು ಎಲ್ಲರಿಗೆ *****...

ಈ ನಿರಂಕುಶ ಕ್ರೂರ ಕಾಲನನು ಇದಕಿಂತ ಧೀರನೆಲೆಯಲಿ ನೀನು ಕಾದದಿರುವುದು ಏಕೆ ? ನನ್ನ ಈ ಬರಡು ಪದ್ಯಕ್ಕೂ ಮಿಗಿಲಾದಂಥ ಸಾಧನದ ರಕ್ಷಣೆಯ ಪಡೆಯದಿರುವುದು ಏಕೆ ? ಜೀವನದ ಸುಖಕ್ಷಣದ ಶಿಖರದಲಿ ನಿಂತಿರುವೆ, ಮದುವೆಯಾಗದ ಎಷ್ಟೊ ಕನ್ನೆಯುದ್ಯಾನಗಳು ನಿನ್ನ ...

ಮಾರನೆಯ ದಿನ ಶಿವಕುಮಾರ್ ಹೈಸ್ಕೂಲಿನ ಬಳಿಗೆ ಹೋದ. ಹೆಡ್‌ಮಾಸ್ಟರಿಗೆ ಆಶ್ಚರ್ಯವಾಯಿತು. ‘ಏನ್ ಕುಮಾರ್? ಬಹಳ ದಿನಗಳ ಮೇಲೆ ಈ ಕಡೆ ಸವಾರಿ ಬಂತಲ್ಲ’ ಎಂದರು. ಕುಮಾರನಿಗೆ ಒಂದು ಕ್ಷಣ ಅಳುಕೆನ್ನಿಸಿದರೂ ಚೇತರಿಸಿಕೊಂಡು ಹೇಳಿದ: ‘ಯಾಕ್ ಸಾರ್ ನಮ್ಮೂರ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....