
ನನ್ನ ಖಾಸಾ ಕೋಣೆಯೊಳಗೆ ಇಣುಕುವ ಧಾವಂತದಲ್ಲಿ ಅವಳು ತನ್ನ ಕಣ್ರೆಪ್ಪೆ ತೆರೆಯುವುದನ್ನೇ ಮರೆತುಬಿಟ್ಟಳು *****...
ಕಲ್ಲಿನ ಮೂರುತಿ ಪೂಜಿ ಮಾಡುದು ನೂರು ಪಟ್ಟು ನೆಟ್ಟಾ ಮನುಸೆರ ದೇವರ ಪಾದ ಬೀಳುದು ನೂರು ಪಟ್ಟು ಕೆಟ್ಟಾ ||ಪಲ್ಲ|| ಆಶಿ ಬುರುಕರು ಮನುಸೆರ ದೇವರು ತಿಂದು ಹೇಲತಾವ ಕಲ್ಲು ದೇವರು ಊಟ ಉಣ್ಣದೆ ಮೌನ ಕೂಡ ತಾವ ||೧|| ಚರುಮದ ದೇವರು ನಾಯಿ ದೇವರು ರೊಕ್ಕ...
ದುಷ್ಟ ಗಂಗೋತ್ರಿಗೆ ಗಂಡಂದಿರ ಬಲಿ ಕೊಟ್ಟ ನಿಮಗೆ ಮುಂಡೆಯರ ಪಟ್ಟವೇ ಗಟ್ಟಿಯಾಯಿತೇನು? ಉಕ್ಕಿ ಬಂದ ನಿಮ್ಮ ಹರೆಯ ಅಂತರಂಗದಲೇ ಹಿಂಗಿತೇನು? ಮೆಟ್ಟಿಬಂದ ಕಣ್ಣೀರು ಗೊಂಡಾರಣ್ಯದ ಗೂಢಕ್ಕಿಳಿದು ಗಟ್ಟಿ ಘನವಾಯಿತೇನು? ಸಿಡಿದು ಹೋದ ಕನಸುಗಳು ಕಡಲಾಚೆಯ ನ...
ಕೆರೆದರದುವೇ ಕೃಷಿಯೆಂದರಿಯದವರರುಹುತ್ತಿರೆ ಗರಿಕೆಯನು ಕೆರೆದುನ್ನತದ ಮನೆಯ ಕನ ವರಿಸುತಲಿ ಇಳೆಯ ಕಳೆಯನ್ನು ಕಳೆಯುತಿರೆ ಕೆರೆದು ಕೆಟ್ಟಿಹನೆಮ್ಮ ರೈತನು, ಆದೊಡಾತನು ಕೆರೆವ ಯಂತ್ರಗಳನಿತ್ತವನು ಮನೆಯ ಕಟ್ಟಿಹನು – ವಿಜ್ಞಾನೇಶ್ವರಾ *****...
ಕಂಬನಿಯೆ ಏಕಿಂತು ಒತ್ತರಿಸಿ ಬರುವೆ? ಕಂಪಿಸುವ ಚಿತ್ರದ ಇರವನ್ನೆ ಮರೆವೆ? ಮಿಥ್ಯಕ್ಕೆ ಗೆಲುವಾಯ್ತು ಸತ್ಯಕ್ಕೆ ಸೋಲಾಯ್ತು ದುಃಖವು ಮಿಗಿಲಾಯ್ತು ಸುಖದ ಮನೆ ಹೋಯ್ತು ಎಂದಿದಕೆ ಏಕೆ ಕಣ್ಣೀರು ಬದುಕಿಗಂಜಿ ಹೇಡಿ, ಹಿಂಜರಿವೆ? ವಂಚಿಸಿತು ಜಗಜನವು ಸಂಚಿ...
ಧರೆಗಿಳಿದು ಬಂದಿದೆ ಸ್ವರ್ಗದ ತಾಣವು ಸುಂದರ ಮಂದಿರವು ನಮ್ಮ ಭಾರತ ಭೂಮಿ || ಭುವನ ಮನೋಹರ ಚೆನ್ನಯ ತಾಣವು ತನ್ಮಯ ಚಿತ್ತದ ಜೀವರಾಶಿಗಳು ಸೃಷ್ಟಿ ಸ್ಥಿತಿ ಲಯವು ನಮ್ಮ ಭಾರತವು || ಯುಗ ಯುಗಗಳೆ ತಾಳಿದೆ ಗತ ವೈಭವ ಸಾರಿದೆ ಕಣ ಕಣವೂ ನಿನ್ನ ಸ್ತುತಿಯನ...
||ತಿರುಪ್ಪಲ್ಲಾಣ್ಡು|| ಗುರುಮುಖಮನಧೀತ್ಯ ಪ್ರಾಹ ವೇದಾನ್ ಅಶೇಷಾನ್ ನರಪತಿಪರಿಕ್ಲ್‌ಪ್ತಂ ಶುಲ್ಕಮಾದಾತುಕಾಮಃ | ಶ್ವಶುರಂ ಅಮರವಂದ್ಯಂ ರಂಗನಾಥಸ್ಯ ಸಾಕ್ಷಾತ್ ದ್ವಿಜಕುಲತಿಲಕಂ ತಂ ವಿಷ್ಣುಚಿತ್ತಂ ನಮಾಮಿ || ಮಿನ್ನಾರ್ ತಡಮದಿಶೂಯ್ ಎಲ್ಲಿಪುತ್ತೂರೆ...
ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ ನೀನೇ ನನ್ನ ಮನದ ಸಂಚಾಲಕನು ನನ್ನ ಯ...
ನಕ್ಕು ಬಿಡು ಒಮ್ಮೆ ಗುಳಿಬೀಳಲಿ ಕೆನ್ನೆ| ಸರಿಯಲ್ಲ ಈ ಮೌನ ನಿನಗೆ ನನ್ನ ಮಾತೇ ಮರೆತು ಹೋಗಿದೆ ನನಗೆ| ಮನೆ ಮನದ ತುಂಬೆಲ್ಲ ಹರಿಯುತಿದೆ ಬರಿಯ ಮೌನ… ನನಗೀಗ ನಿನ್ನ ಮೌನದೇ ವ್ಯಸನ|| ಮರೆತುಬಿಡು ಎಲ್ಲಾ, ನನ್ನೆಲ್ಲಾ ಒರಟುತನ| ಅಪ್ಪಿಕೋ ನನ್ನ...













