ಬಾಳವ್ವ ನಮ್ಮ ಮನೆಯಲ್ಲಿ ಕಸಮುಸುರೆ ಮಾಡುವ ಮೆನೆಗೆಲಸದಾಳು. ಅವಳ ದೊಡ್ಡಸಂಪತ್ತೆಂದರೆ ತುಟಿಯ ಮೇಲೆ ಸುದಾ ನಲಿಯುತ್ತಿರುವ ಅವಳ ನಗೆ. ಹೊಟ್ಟೆ ತುಂಬಿರಲಿ ಅಥವಾ ಖಾಲಿ ಇರಲಿ, ಅವಳು ಸದಾ ನಗುತ್ರಿರುವವಳೇ. ಅವಳದು ದೊಡ್ಡ ಸಂಸಾರ. ಎಲ್ಲ ವಯಸ್ಸಿನ ಗಂಡ...

ನಾಚಿಗಿ ಬರತೈತೆ ನನಗಂಡಾ ನಿನಕೂಡ ನಾಚಿಗಿ ಬರತೈತೆ ||ಪಲ್ಲ|| ಬಾಯಾಗ ಹಲ್ಲಿಲ್ಲ ಕಣ್ಣಾಗ ಎಣ್ಣಿಲ್ಲ ಸಗತಿಲ್ಲ ನಡಿಗೀ ಸುಗತಿಲ್ಲ ಜೋತಾಡಿ ಹೋಗ್ತೀದಿ ಮಾತಾಡಿ ಬೀಳ್ತೀದಿ ಮೈಮ್ಯಾಲ ವೈನಾ ನಿನಗಿಲ್ಲ ||೧|| ಗೆಳತೇರು ಗರತೇರು ಗ್ವಾಡಂಬಿ ಚಲುವೇರು ತೇರ...

ಅವರ ಮನೆಯಲ್ಲಿ ಹಣ್ಣು ಹಣ್ಣು ಮುದುಕ ಸ್ವರ್ಗಸ್ತನಾಗಿದ್ದ. ಮನೆಯವರು ಅಜ್ಜನ ಕೊನೆಯ ಯಾತ್ರೆಗೆ ಸಿದ್ಧ ಮಾಡುತಿದ್ದರು. ಎಲ್ಲರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರು. ಅಳುವವರು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹೃದಯ ವಿದ್ರಾವಕ ರೋದನ ಶ...

ಕರೆಯುತ್ತೇನೆ ಮನಸೇ ಕನಸಿನ ಕೋಣೆಯೊಳಗೆ ಬೇಲಿಗಟ್ಟಿದ ಭಾವದೊಳಗೆ ಅಲ್ಲಿ ಮಾತಾಡೋಣ ಮೌನದ ಬಗೆಗೆ ಮೌನವಾಗೋಣ ಮಾತಿನ ಬಗೆಗೆ ಬೆಳೆಯುತ್ತ ಬೆಳೆಯುತ್ತ ಹೋಗೋಣ ಸಿಕ್ಕದ ಸುಖವನ್ನು, ಹುಡುಕುತ್ತ ಹುಡುಕುತ್ತ ಹೋಗೋಣ ಕಾಣದ ಮುಖವನ್ನು ಗುಬ್ಬಚ್ಚಿ ಗೂಡಲ್ಲಿ ...

ಈ ಕನ್ನಡ ನೆಲದಿ ಜನಿಸಿ ನಾನಾದೆನು ನಿಜದಿ ಧನ್ಯ| ಈ ಕೃಷ್ಣಕಾವೇರಿ ನದಿಯಲಿ ಮಿಂದು ನನಗಾಯಿತು ಮಹಾಪುಣ್ಯ| ಕನ್ನಡ ಹಾಡಾಯಿತು ನನಗದುವೆ ದಿವ್ಯಮಂತ್ರ ಈ ಕನ್ನಡ ಬಾವುಟ ಹಿಡಿದ ನನ್ನ ಕೈಯಾಯಿತು ಚಿನ್ನ|| ಇಲ್ಲಿರುವ ಪ್ರಕೃತಿಸೌಂದರ್ಯ್ಯ ಇಲ್ಲಿ ಬೆಳೆಯ...

ನಾವು ದಿನನಿತ್ಯದಲ್ಲಿ ಸಕ್ಕರೆ ಕಾಯಿಲೆ ಉಳ್ಳವರ ಸ್ಥಿತಿಯನ್ನು ನೋಡಿ ‘ಅಯ್ಯೋಪಾಪ’ ಎನ್ನುತ್ತೇವೆ. ಹೋಳಿಗೆ ತಿನ್ನುವಂತಿಲ್ಲ. ಸಿಹಿಪದಾರ್ಥಗಳನ್ನು ತಿನ್ನುವಂತಿಲ್ಲ. ಸಕ್ಕರೆರಹಿತ ಟೀ ಕಾಫಿಯನ್ನು ಗುಟುಕರಿಸುತ್ತ ಸಿಹಿಯನ್ನೇ ಉಪಯೋಗಿಸದ ಜನರಿದ್ದಾರ...

ಕಳಿತ ಹಣ್ಣನಿಕ್ಕುವುದೆನ್ನ ಕವನದ ಬಯಕೆ ಹುಳಿತವಾದೊಡಂ ಉಣಲಕ್ಕು ಹುಳಿಗೊಜ್ಜಿಗಕ್ಕು ಕೊಳೆತೊಡದುವೇ ಬಿತ್ತಾಗಿ ಹೊಸ ಮರ ಬಕ್ಕು ಕಳಿತ ಗೊಬ್ಬರಕು ಕಳಿತ ಹಣ್ಣಿನಾ ಬೆಲೆ ಇಕ್ಕು ಫಲಿತದೊಳು ತಿಪ್ಪೇಶನಾರಾಧನೆಗೆ ಮಹತಿಕ್ಕು – ವಿಜ್ಞಾನೇಶ್ವರಾ **...

ಹಕ್ಕಿಗಳೇ ವಿಸ್ಮಯದ ಗೂಡುಗಳೇ ತಿಳಿಸಿ, ತಣಿಸಿ ನಿಮ್ಮ ಬದುಕ ಬಗೆಗಿನ ಪ್ರೀತಿ ಕುತೂಹಲವ. ನಿಮ್ಮ ಶಿರ, ಶರೀರ ರೆಕ್ಕೆ, ಪುಕ್ಕ, ಕೊಕ್ಕು, ಕಾಲು, ಕಣ್ಣು, ಸೂಕ್ಷ್ಮ ಸೂಕ್ಷ್ಮ! ಸೂಕ್ಷ್ಮವಾದುದಕೆಲ್ಲ ಶಕ್ತಿ ಜಾಸ್ತಿಯೇನು ? ಬೆಳಕ ಹರಿವಿಗೆ ಹೊರಡುವಿರ...

ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು ಎತ್ತರಿಸಿ ಸುತ್ತಲೂ ನೋ...

1...34567...9

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....