“ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ ಕಸುಬುಗಾರಿಕೆಯನ್ನು ಪುನಃ ಶುರುಮಾಡಿದೆಯೋ, ನಿನ್ನ ಚರ್ಮ ಸುಲಿದು ಈ ಜೈಲಿನ...

ನಿನ್ನ ಪ್ರೀತಿಯನ್ನಷ್ಟೇ ಉಟ್ಟು ಹೊರಟು ನಿಂತಿದ್ದೇನೆ- ಇಗೋ ಹೊರಟೆ- ಎಲ್ಲವ ದಾಟಿ ಹೋಗಿಯೇ ಬಿಡುತ್ತೇನೆ ನೀ ಬಿಟ್ಟು ಹೋದ ತುಂಡು ನೆಲವನ್ನು ಉತ್ತು ಬಿತ್ತಿ ಫಸಲು ತೆಗೆಯುತ್ತೇನೆ ಚಳಿ-ಗಾಳಿಯೊಡನೆ ಗುದ್ದಾಡಿ ಕಲ್ಲುಗಳ ಜತೆಗೂಡಿ ಹಾಡಿ ಮೈಮರೆಯುತ್ತ...

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು ಬಿಳಿ ಮಡಿಯ ಶೆಳೆದುಡುತಲೆ ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು ತರದ ಶಾಂತಿಯ ಸವಿ...

ನನಗೆ ತಿಳಿದಿಲ್ಲ ನೀ ಬಲು ದುಬಾರಿ ಎಂದು ಎಂದೂ ಅನ್ನಿಸಿಲ್ಲ ಹಾಗೆ ಯಾಕೋ ಗೊತ್ತಿಲ್ಲ, ನಿನ್ನ ಒಳತೋಟಿಯಲ್ಲಿ ನನ್ನದೇ ನೆರಳು ಸರಿದಾಡುವುದು ಎಂಬ ಭ್ರಮೆ. ಗೊತ್ತು ನಿನ್ನ ಮಿತಿ ಅಪರಿಮಿತವೆಂದೂ ಎಂದೂ ನನ್ನೊಂದಿಗೆ ಒಗ್ಗದೆಂದು ಆದರೂ ಹೃದಯದ ಆರ್ದ್ರತ...

ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ ದೇವಗಂಗೆಯ ಆಳವೆಷ್ಟು ಹೇಳು ? ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ? ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ ಎಷ್ಟೆಷ್ಟು ಬಾರಿ ಬಂದೆ ಸುತ್ತು? ತೊಯ್ದ ದಂಡೆಯಲಿ ಏನು...

“ಸಿಲಿಕಾನ್ ಸುಂದರಿ ಬೆಂಗಳೂರು”… “ಗಾರ್ಡನ್ ಸಿಟಿ ಬೆಂಗಳೂರು”… “ಐಟಿ ಕಿಂಗ್ಡಂ ಬೆಂಗಳೂರು”.. ಅಂತ ಸನಾದಿ ಊದಿದ್ದೇ ಊದಿದ್ದು! ಉತ್ತರ ಕರ್ನಾಟಕದ ದಡ್ಡನಾದ ನನಗೆ ಇತ್ತೀಚೆಗೆ ಗೊತ್ತಾದ ಬ...

ನಿನ್ನೆ ರಾತ್ರಿ ನಿನ್ನ ಮೇಲೆ ಸಿಟ್ಟು ಬಂದು ರಾತ್ರಿಯನ್ನೆಲ್ಲ ಬಳಿದು ಸವರಿ ಒಂದು ಶೀಷೆಗೆ ಹಾಕಿಟ್ಟಿದ್ದೇನೆ. ಇನ್ನು ಮೇಲೆ ಸದಾ ಬರೀ ಬೆಳಕೇ ಇರುತ್ತೆ, ನೀನು ಬಚ್ಚಿಟ್ಟುಕೊಳ್ಳುವುದಕ್ಕೆ ಕೂಡಾ ಒಂದು ಚೂರೂ ಕತ್ತಲು ಸಿಗಲ್ಲ. ನೀನು ತತ್ತರಿಸಬೇಕು,...

ನನ್ನ ಕೂಸು ಗಿಣಿಯ ಕೂಸು ಹಸಿದು ಅಬ್ಬಾ ಎನುವದು ಸಂತಿ ಪ್ಯಾಟಿಗೆ ಹೊಂಟ ನನ್ನೆಡೆ ಅಂಬೆಗಾಲಿಲೆ ಬರುವದು ಅಂಗಿ ಟೊಪ್ಪಿಗಿ ಮುತ್ತು ಗೊಂಬಿ ಕೊಂಡು ಕೂಸನೆ ಮರೆತೆನು ಊರ ಮನೆಯಾ ಕೂಸು ಕಾಣುತ ನನ್ನ ಕೂಸೆ ಎಂದೆನು ಮನೆಯ ಕೂಸು ಮನೆಯಲುಳಿಯಿತು ಓಣಿ ಓಣಿಯ...

1...56789

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...