ಕಡಲ ಕರುಳು ಬಳ್ಳಿಯಲ್ಲರಳಿದ ಹೂ-ಮಗನೆ ಎಲೆ ಎಲೆ ಅಲೆಯೊಳಗಣ ನಿತ್ಯ ಹರಿದ್ವರ್‍ಣನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಹುಟ್ಟಿನ ಹರಿಕಾರನೆ ಮತ್ಸ್ಯಕನ್ನಿಕೆಯ ಪ್ರಿಯಕರನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಸುಳಿಗಾಳಿಯ ಸನ್ಮಿತ್ರನೆ ಮಳಲ ಮಾನ...

ನಾವು ತಿನ್ನುವುದಕ್ಕೆ ಅನ್ನ ಕೇಳಿದೆವು ಅವರು ಹುಳ ಬಿದ್ದ ಅಕ್ಕಿ ಕೊಟ್ಟರು ನಾವು ಹುಳ ದೇವರಿಗೆ ಕೊಟ್ಟು ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು ಅನ್ನ ಮಾಡಿ ಉಂಡೆವು! ಈಗ ಅವರು ತಿನ್ನುವ ಅನ್ನಕ್ಕೇ ಹುಳ ಬಿದ್ದಿದೆ ಅವರು ಹುಳುಗಳನ್ನು ನಿಷ್ಕಾರುಣ್ಯವಾಗ...

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ ಹೊಂದಿಕೊಳ್ಳುವಂತಿದ್ದರೆ ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ ಮಲ್ಲಿಗೆಯ ಮಂಪರೇ ನೆಲಮುಗಿಲ ಹಬ್ಬಿನಿಂತಿದ್ದರೆ, ಹೀಗೆಲ್ಲ ಆಗುವಂತಿದ್ದರೆ, ಕನಸುಗಳ ಜೀವ ಚಿಗುತುಕೊಳ್ಳುವುದೇ ಹಾಗೆ ಗಾಜು ಗುಜ್ಜಿನ ಬೆಳಕಿಗಿಂತ...

ತಿಂಗಳಿತ್ತಲ್ಲ ಒಂದು ಕ್ಷಣ ಹಿಂದೆ ಆಕಾಶದ ಅಂಗಳ ತುಂಬ ಕಣ್ಣ ಮಿಣುಕಿಸುವ ನಗುವ ನಕ್ಷತ್ರಗಳೂ ಇದ್ದುವು ಎಣಿಕೆಗೆ ಸಿಗದ ಅಕ್ಷಯ ರೂಪಿಗಳು. ನೋಡ ನೋಡುತ್ತ ಕರಿಯ ಮೊಡಗಳೆದ್ದು ಹರಿಹಾಯ್ದು ಸರಿ ರಾತ್ರಿಯಲಿ ಮಳೆ ಬಂತೇ ಬಂತು ತಣ್ಣನೆ ಗಾಳಿ ಹಿತವಾದ ಸೀರ...

ಇಂದು ವಾಸ್ತವವಾದಿ ನಾನು, ನನ್ನ ಚಿಕ್ಕ ವಯಸ್ಸಿನಲ್ಲಿ ಮಹಾ ಆಸ್ತಿಕನಾಗಿದ್ದೆ. ದೇವರು, ದಿಂಡರ ಬಗ್ಗೆ ಅಪಾರವಾದ ನಂಬಿಕೆ. ಹೀಗಾಗಿ ನಮ್ಮ ಊರಿನಲ್ಲಿ ದೀಪಾವಳಿ ಸಂದರ್ಭದಲ್ಲಿ ನಮ್ಮ ಓಣಿ ಸಿದ್ದರಾಮೇಶ್ವರ ದೇವರ ಕಂಚಿನ ಉತ್ಸವ ಮೂರ್ತಿಗಳನ್ನು ಹೊತ್ತು...

ದುಃಖ – ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ರೂಪಕವಲ್ಲ ಕವಿತೆಯಲ್ಲ ಸುಮ್ಮನೆ ಇರುವ ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ದುಃಖ ಸುಮ್ಮನೆ ಅಲ್ಲಿರುವ ಬೆಚ್ಚನೆ ಎದೆ ಸುಮ್ಮನೆ ಅಲ್ಲಿರುವ ರಾತ್ರಿ ದುಃಖ ಮಾತಿನಿಂದ ದೂರವಾಗಿ ಎದೆಯಿಂದ ದೂರ...

(ಗೋವಿನ ಕಥೆಯ ಮಟ್ಟು) ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; | ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು. ||...

ಕರೆದೇ ಕರೆದೆ ಗಂಟಲು ಹರಿವ ತನಕ ಒಂದೇ ಸಮನೆ ಮೊರೆದೆ. ತಿರುಗಿದೆಯ ನೀನು ತಿರುಗುವುದೆ ಬಾನು ಭೂಮಿಯ ತಾಳಕ್ಕೆ? ಭೂಮಿಯ ತಾಳಕ್ಕೆ ಋತುಗಳ ಗಾನಕ್ಕೆ ತಿರುಗುವವರು ನಾವು, ಯಾವನ ಪುಂಗಿಗೊ ರಾಗದ ಭಂಗಿಗೊ ಎಳ್ಳುಕಾಳಾಗಿ ಕಲ್ಲಗಾಣಕ್ಕೆ ದಿನವೂ ಉರುಳುವ ನೋ...

1...1314151617...110

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...