ದೀಪವಾರಿಸಿದ ಕತ್ತಲೆ ಕೋಣೆಯಲಿ ಕಣ್ಣಿಗೆ ಏನೂ ಕಾಣಿಸುವುದಿಲ್ಲ ಬರೀ ನಿಟ್ಟುಸಿರು ಕೇಳುತ್ತದೆ. ಮಲಿನಗೊಂಡ ರಾತ್ರಿ ಕಪ್ಪಿನಲಿ ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ ಇಬ್ಬನಿ ಹನಿಗಳು ಮಾಯವಾಗಿವೆ. ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ ತುಂಬ ವಿ...

ನಿದ್ರಿಸುವವರೆಲ್ಲರೂ ನಿದ್ರಿಸಿರುವುದಿಲ್ಲ. ಎಚ್ಚರಾಗಿರುವವರೆಲ್ಲರೂ ಎಚ್ಚರಾಗಿರುವುದಿಲ್ಲ. ಎಲ್ಲೋ ಒಂದೆಡೆ ಅವನಿಗೆಲ್ಲವೂ ಕೇಳಿಸುತ್ತಿತ್ತು. ಎಲ್ಲವೂ ಕಾಣಿಸುತ್ತಿತ್ತು. ಸಮಾಧಿಯೆಂದರೆ ಇದೇ ಎಂದುಕೊಂಡ. ಇದೇ ಸಮಾಧಿ ಯಾದರೆ ಅದು ಇಂದೇ ಆಗಲಿ, ಈ ಕ...

ಬೋಟಿನಲ್ಲಿ ಸಹಪ್ರಯಾಣ ಕೆಲೆ ನಿಲ್ದಾಣದಲ್ಲಿ ಕೇವಲ ನಗೆ ನಂತರ ಲೂವ್ರ್‌ ಮ್ಯೂಸಿಯಮಿನಲ್ಲಿ ಬೆರಗಿನಿಂದ ಎಲ್ಲರೂ ಕತ್ತೆತ್ತಿ ನೋಡುತಿದ್ದಾಗ ನಾನು ಕಂಡದ್ದೇನು– ನೋಡಲೆಂದು ಇಲ್ಲಿಯ ತನಕ ಬಂದ ಮೋನಾ ಲಿಸಾ ಚಿತ್ರವನ್ನೆ ಅಥವ ಹೆಸರು ಸ್ಥಳ ಗೊತ್ತ...

ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ ಏರುವ ಮೊದಲು ಗದ್ದುಗೆ ನನಗಾರು ಸಮನಿಲ್ಲ ನನ್ನಿಂದಲೆ ಎಲ್ಲ ಸರ್ವಥಾ ಸ...

ಬಣ್ಣದ ಸಂಜೆಯನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ಸಿಡಿಲ ಚೂರೊಂದು ಉರಿದು ಕಪ್ಪಾಯಿತು. ಮೊರೆಯುವ ಕಡಲನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ತತ್ತರಿಸುವ ಅಲೆಯೊಂದು ಎತ್ತರಕೆ ನೆಗೆದು ಕೆಳಗೆ ಬಿತ್ತು. ಹೆಮ್ಮರವೊಂದನ್ನು ...

ಇಲ್ಲಕಲ್ಲ ಜಾತ್ರ್ಯಾಗ ಕೊಂಡೇನ ಈ ಗಡಿಗಿ ಜ್ವಾಕೆವ್ವ ತಂಗೆವ್ವ ಜಾರಿಬಿಟ್ಟಿ ಚಂದೇನ ಚಾರೇನ ಚಕ್ರದುಂಡಿನ ಗಡಿಗಿ ಜೋಲ್ಹೋಗಿ ಜಲ್ಲೆಂದು ಚಲ್ಲಿಬಿಟ್ಟಿ ಹಾಡು ಹಾಡಿನ ವಳಗ ಬೋರಂಗಿ ಈ ಹುಡುಗಿ ಹೊಕ್ಕಾಳ ಗುಂಯ್ಯಂತ ಗುನಗತಾಳ ಗಡಗೀಯ ಮಾರ್‍ಯಾಳ ಪುರಿಭಾಜ...

12345...7

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....