Month: October 2019

#ಕವಿತೆ

ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ

0

ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ. ನಿಶ್ಯಬ್ದದಲಿನಿಂದು ನಗಬಲ್ಲೆಯಾ ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ ಕಾಜಾಣ ಕೋಗಿಲೆಯ ಮಾಜಾಣರು ನಿನ್ನ ಕಣಜದ ಒಳಗೆ ಹಣಜಲಿಯ ಒಟ್ಟುತ್ತ ರತ್ನದೀಪ್ತಿಯ ಲಾಭ ನೀ ಮರತೆಯ ನಾನು ಸುಂದರ ಆತ್ಮಶಿವನ ಬಂಧುರ ಪದ್ಮ ಓ […]

#ವಿಜ್ಞಾನ

ರಾಷ್ಟ್ರ ಪಕ್ಷಿ: ನವಿಲು

0

ನವಿಲು ನಮ್ಮ ರಾಷ್ಟ್ರಪಕ್ಷಿ. ನವಿಲು ತನ್ನ ಸೌಂದರ್‍ಯ, ಬಣ್ಣ ಹಾಗೂ ನಡೆಗಳಿಗೆ ಪ್ರಸಿದ್ಧಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಸುಂದರವಾದ ಪಕ್ಷಿ. ಹೆಣ್ಣು ನವಿಲಿಗಿಂತ ಗಂಡು ನವಿಲು ಹೆಚ್ಚು ಸುಂದರ. ಹಾಲು ಬಣ್ಣದ ಹೊಳಪಿನ ಮುಖ, ನೀಲಿಬಣ್ಣದ ತಲೆ, ಅದರ ಮೇಲೆ ರಾಜಠೀವಿ ಮೆರೆಸುವ ತುರಾಯಿ, ಕೆಂಪುಮಿಶ್ರಿತ ನಸುಹಳದಿ ಬಣ್ಣದ ರೆಕ್ಕೆ, ಬೆನ್ನಮೇಲಿನ ಹಸಿರು, ನೀಲಿ ಬಣ್ಣದ […]

#ಕವಿತೆ

ಶರೀಫಜ್ಜನಿಗೆ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಒಂದು ಧರ್ಮಕ್ಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ; ಹನಿಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ; ಹತ್ತು ವನಗಳ ಸುತ್ತಿ ಹೂ ಹೂವನೂ ಮುತ್ತಿ ಒಂದೆ ಜೇನಿನ ಹುಟ್ಟು ಕಟ್ಟಿದಾತ; ಎಲ್ಲಿ ಹೇಳೋ ತಾತ ಹಿಂದೆ ಯಾ ಅವಧೂತ ಸಾಧಿಸಿದ ನಿನ್ನಂತೆ ಧರ್ಮವನ್ನು ಕಾವ್ಯದಲಿ ಕೆಡೆದ ಆ ಮರ್ಮವನ್ನು […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೪೦

ಹಸಿವಿನ ಗರ್ಭದೊಳಗೆ ಭ್ರೂಣವಾಗಿರುವ ಭಾವಗಳು ಏಕೋ ಕಾಣೆ ಮಾತುಗಳಾಗುವುದಿಲ್ಲ. ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ. ಛಿದ್ರಗೊಂಡು ಸಿಡಿದುಬೀಳುತ್ತವೆ. ಆ ಪ್ರತಿ ಚೂರುಗಳಲ್ಲೂ ರೊಟ್ಟಿ ತನ್ನ ಸಾವು ಕಾಣುತ್ತದೆ.

#ಹನಿಗವನ

ಮೊದಲ ರಾತ್ರಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಎಲ್ಲರಿಗೂ ಅನಿಸಿದ್ದು ಅದು ನಮ್ಮಿಬ್ಬರ ಮೊದಲ ರಾತ್ರಿ! ಆದರೆ ನಮಗದು ಕನಸು ನನಸಾದ ಬೆಚ್ಚಗಿನ ಹಗಲು!! *****

#ಕವಿತೆ

ದೀಪಾವಳಿ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ನಿನ್ನ ನೆನಪಿನ ಬತ್ತಿ ಹೊಸೆದು ಹೊಸೆದು ಎದೆಯ ಹಾಲೆರೆದು ಪಣತಿಯ ಹಚ್ಚಿಟ್ಟೆ ಕಾರ್ತೀಕದ ಇರುಳ ಸಂಜೆಯ ಮರುಳಭಾವಕೆ. ಬಾ ನೀನು ಬೆಳಕಿನ ಗೆರೆಗುಂಟ ಮಾಡಿನ ಕದವ ತೆರೆದು ತೇಜ ತುಂಬಿದ ಹಾಸುಬೀಸು ಜೀವ ಜೀವದ ಬೆಸುಗೆ ಪ್ರೇಮ ರಾಗಕೆ. ಮಣ್ಣ ಕಡೆದ ಸಣ್ಣ ಮೊಳಕೆ ಇರುಳ ತುಂಬಿ ನರಳಿ ಕಂಪ ಬೀರಿ ಹೂವು ಅರಳು ಮೈಯ […]

#ಹನಿಗವನ

ಗುಟ್ಟು ರಟ್ಟು

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಮುಟ್ಟಾದ ಹುಡುಗಿ ಗುಟ್ಟಾಗಿಯೇ ಇದ್ದಳು ಚೈತ್ರಾ, ವಸಂತ ಬಂದನೇ ಎಂದರೆ ಬೆಚ್ಚಿದ್ದೇಕೆ? ಕೆನ್ನೆ ಕೆಂಪೇರಿದ್ದೇಕೆ? *****

#ಕಾದಂಬರಿ

ತರಂಗಾಂತರ – ೩

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

“ಸ್ಟಾಪ್ ಇಟ್! ಸ್ಟಾಪಿಟ್!” ಆತ ಚೀರಿದ. ಚೀಸಿನ ಕರಡಿಗೆ ಟಣ್ ಟಣ್ಣೆಂದು ಹಾರಿ ಕುಣಿಯುತ್ತ ದಾಪುಗಾಲಿನಲ್ಲಿ ಕೆಳಗಿಳಿಯುತ್ತಿತ್ತು. ಅದನ್ನ ತಡೆದು ನಿಲ್ಲಿಸಬೇಕಾದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ತಾನು ಕೆಳಗಿಳಿಯಬೇಕು. ಆದರೆ ತೋಳಿನ ತುಂಬ ಚೀಲಗಳಿವೆ. ಆ ಚೀಲಗಳನ್ನು ರೇಶ್ಮಳವಶಕ್ಕೆ ಕೊಟ್ಟು ತಾನು ಕರಡಿಗೆಯ ಬೆನ್ನು ಹತ್ತುವ ಉಪಾಯ ಅಂಥ ತುರ್ತಿನಲ್ಲಿ ಅವನ ಮನಸ್ಸಿಗೆ ಹೊಳೆದಿರಲಿಲ್ಲ. ಈಗ […]

#ಹನಿಗವನ

ರಾಜಮರ್ಯಾದೆ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಏನಾಗದಿದ್ದರೂ ಸರಿ ರಾಜಕಾರಣಿಯಾಗು ಬದುಕಿದ್ದಾಗ ಕಳೆದಿದ್ದರೂ ಮಾನಮರ್ಯಾದೆ ಸತ್ತಾಗ ಗ್ಯಾರಂಟಿ ರಾಜಮರ್ಯಾದೆ *****