ಸ್ವಾತಂತ್ರಕ್ಕಾಗಿ ಎಲ್ಲೆಡೆ ಹೋರಾಟ ನಡೆಯುತ್ತಿರುವಾಗ ಗಂಡುಮೆಟ್ಟಿನ ನಾಡು ಚಿತ್ರದುರ್ಗದಲ್ಲಿ ಮಾತ್ರ ರಣಕಹಳೆ ಮೊಳಗದಿರಲು ಸಾಧ್ಯವೆ ? ಇಂದಿನ ರಾಷ್ಟನಾಯಕ ನಿಜಲಿಂಗಪ್ಪನವರ ಗುಂಪು ಒಂದು ಕಡೆ ಚಳವಳಿ ಆರಂಭಿಸಿದ್ದರೆ, ರಾಜಕಾರಣಿ ಭೀಮಪ್ಪ ನಾಯಕರ ತಂ...

ಅಂದುಕೊಂಡಷ್ಟು ಚಳಿ ಏನಲ್ಲ! ಗಾಳಿ ಬಿರುಸು ನೆಪಕ್ಕೆ ಮಧ್ಯಾಹ್ನ ಆದರೆ ಅಡ್ಡಮಳೆ ಬೆಟ್ಟದ ಹಸಿರುವಾಸನೆಯೊಳಗೆ ಪುಕ್ಕಟೆ ಸಿಗುವ ಆಕ್ಸಿಜನ್, ಕುಣಿವ ಸಂಭ್ರಮ ಆ ಬೆಟ್ಟ ಈ ಬೆಟ್ಟ ಮತ್ತೊಂದು ಬೆಟ್ಟ ಅವರ ಬಿಟ್ಟು ಇವರ ಬಿಟ್ಟು ನೀನ್ಯಾರು? ಬೀಡುಬಿಟ್ಟ ಮ...

ನೋಡಿಹೆನೆಂದರೆ ನೋಟವಿಲ್ಲ. ಕೇಳಿಹೆನೆಂದರೆ ಕಿವಿ ಇಲ್ಲ. ವಾಸಿಸಿಹೆನೆಂದರೆ ನಾಸಿಕವಿಲ್ಲ. ನುಡಿದಿಹೆನೆಂದರೆ ಬಾಯಿಲ್ಲ. ಹಿಡಿದಿಹೆನೆಂದರೆ ಹಸ್ತವಿಲ್ಲ. ನಡೆದಿಹೆನೆಂದರೆ ಕಾಲಿಲ್ಲ. ನೆನೆದಿಹೆನೆಂದರೆ ಮನವಿಲ್ಲ. ಇಂತು ನೆನಹು ನಿಷ್ಪತ್ತಿಯಾಗಿ, ಶರಣ...

ಹುಚ್ಚು ಹಿಡಿದಿದೆ ನನಗೆ ಹುಚ್ಚು ಹಿಡಿದಿದೆ ಕನ್ನೆಯರೆದೆ ಕಳ್ಳನ ಬೆಣ್ಣೆ ಸೂರೆಗೊಳುವನ ಕಣ್ಣು ಹೊಡೆದು ಜಡೆಯನೆಳೆದು ಸಣ್ಣನಗುವ ಮಳ್ಳನ ಹುಚ್ಚು ಹಿಡಿದಿದೆ ಮುನಿಸಿಕೊಂಡ ಹೆಣ್ಣಿನ ಮನ ಬದಲಿಸಿ, ಕಣ್ಣಿನ ಮಿಂಚು ಹರಿಸಿ ನಮ್ಮ ಮನವ ಲೂಟಿ ಹೊಡೆವ ಚಿಣ್...

ಕುರಿಕಾಯುವ ಜೊತೆಗಾರರಾದ ಕಾಮಣ್ಣ ಭೀಮಣ್ಣ ಅವರಿಬ್ಬರು ತಮ್ಮ ಕುರಿ ಹಿಂಡಿನೊಡನೆ ಅಡವಿಯಲ್ಲಿಯೇ ಅಡ್ಡಾಡುವರು; ಅಡವಿಯಲ್ಲಿಯೇ ವಾಸಿಸುವರು. ತಮ್ಮಷ್ಟು ಜಾಣರಾದವರು ಇನ್ನಾರೂ ಇಲ್ಲವೆಂದೇ ಅವರು ಬಗೆದಿದ್ದರು. ಅಂಥ ಜಾಣರಾಗಿದ್ದರೂ ಅವರಿಬ್ಬರೂ ಬಗೆಹರಿ...

ತಂಟ್ಳುಮಾರಿ ಪಾಂಡುರಂಗ ಮಾಡುತಾನೆ ತಂಟೆಯ ಮಂಗಳಾರತಿ ಮುಗಿದ ಮೇಲೂ ಬಾರಿಸುತಾನೆ ಗಂಟೆಯ! ಇನ್ನೂ ಯಾತಕೆ ಎಂದರೆ ಹೇಳ್ತಾನೆ: ನಾಳೆಯ ಲೆಕ್ಕಕೆ ಬರಕೊಳ್ಳಿ ತುಸು ಬಡ್ಡೀನಾದ್ರೂ ಇಸಕೊಳ್ಳಿ! *****...

ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು. “ಅಯ್ಯೋ ! ಹೋದನೆ ನ...

1...6768697071...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...