ಆ ಹಿಂದು ಯುವಕನು ಬಾಣಬಿಟ್ಟ ಗುರಿಯನ್ನು ಛೇಧಿಸುತ್ತಲೇ ಒಂದು ನುಡಿಯು ಹೊರಬಿತ್ತು – “ಭಲೆ!  ಒಳಿತಾಗಿ!! ” ಯಾರೋ ನುಡಿದರು – “ಅಹುದು ಆದರೆ ಇನ್ನೂ ಹಗಲಿನ ಬೆಳಕಿದೆ ಆ ಧನುರ್ಧಾರಿಯು ಗುರಿಯನ್ನು ಚೆನ್ನಾಗಿ ಇ...

ಎಲ್ಲಿ ಅರಿವಿಗೆ ಇರದೊ ಬೇಲಿ ಎಲ್ಲಿ ಇರದೋ ಭಯದ ದಾಳಿ ಅಂಥ ನೆಲ ಇದೆಯೇನು ಹೇಳಿ? ಸ್ವರ್ಗವನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಬೀಸುವುದೋ ನೆಮ್ಮದಿಯ ಗಾಳಿ-ಎಲ್ಲಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ ಕಣ್ಣೋ ಹಿಗ್ಗಿನಾ...

ಹಿರಿದು ಯಾವುದೇ ಇರಲಿ-ಅದನು ನರೆಯುವ ದೇಶ ನನ್ನದು, ಎಲ್ಲ ದಿಕ್ಕಿನ ಬೆಳಕಿಗು ಬಾಗಿಲ ತರೆಯುವ ದೇಶ ನನ್ನದು. ತನ್ನದಲ್ಲದ ಅನ್ಯಧರ್ಮಗಳ ಮನ್ನಿಸಿದಾ ನೆಲ ನನ್ನದು, ಸಕಲ ಧರ್ಮಗಳ ಸಾಕಿದ ತಾಯಿ ಸನಾತನ ದೇಶ ನನ್ನದು. ದೇವಾಲಯದ ಗರ್ಭಗೃಹದ ಹಣತೆಯ ಬೆಳಕಿ...

ಆಟವಾಡಿ ಸಾಕಾಯ್ತೆ? ಸರಿ ಸರಿಸಿ ಬಿಡು ಪಕ್ಕಕ್ಕೆ ಹರಿದವು ಮುರಿದವು ಬಣ್ಣ ಮಾಸಿದವು ನುಡಿದ ನನ್ನಿಯ ಮಾತು ಕುಣಿದು ಹಾಡಿದ ಹಾಡು ಹಂಚಿಕೊಂಡ ಹಾಲುಗೆನ್ನೆಯನುಭವ ಕಟ್ಟಿಕೊಂಡ ಹಸಿ ಕನಸು ಇರಲಿ ಮಾಸದಂತೆ ಎಂದಾದರೊಮ್ಮೆ ಎತ್ತಿಕೊಂಡಾಗ ಮಗುವಿನಂತೆ ಮೆತ್...

ಸುತ್ತ ಹಬ್ಬುತಿದೆ ತುಳಸೀ ಪರಿಮಳ ಸಣ್ಣಗೆ ಗೆಜ್ಜೆ ದನಿ, ಕೋಗಿಲೆ ಉಲಿಯೋ ಕೊಳಲೊ ಕಾಣೆ ಮೋಹಕ ಇನಿಯ ದನಿ. ಹಗಲಿನ ಧಗೆಯಲಿ ನೀಲಿಯ ಮುಗಿಲು ಇಣುಕಿ ಹಾಯುವಂತೆ ಯಾರದೊ ನೆರಳೋ ಹೊಂಚಿ ಆಡುತಿದೆ ಗುರುತೇ ಕೊಡದಂತೆ. ಇಲ್ಲೇ ಗಿಡಮರ ಪೊದೆಗಳ ಮರೆಗೆ ತಿಳಿಯದ...

ತೋಟಕ್ಕೆ ಗಿಡಗಳ ಮಧ್ಯೆ ಬಾಳೆ ಹಾಕಬೇಕು ಅಂದುಕೊಂಡಿದ್ದ ಇಳಾ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು ಅಂತ ಗೊತ್ತಾದ ಮೇಲೆ ಅದನ್ನು ಮಾಡಿಸಿದಳು. ಮಣ್ಣು ಪರೀಕ್ಷೆ ಮಾಡಿಸಿ ಬಾಳೆ ಹಾಕಬಹುದು ಅಂತ ಗೊತ್ತಾದ ಮೇಲೆ ಅಂಗಾಂಶ ಕಸಿ ಪದ್ಧತಿಯಿಂದ ಬಾಳೆ ಬೆಳೆದರ...

ಸ್ವಾತಂತ್ರ್‍ಯ ಸೌಧವನು ರಚಿಸತೊಡಗಿಹರದೋ ನಾಡ ನಾಯಕರೆಲ್ಲರೊಂದುಗೂಡಿ; ಸೌಧವನ್ನಾಗಿಸುತ ಅದಕೆ ಕಲಶವನಿಟ್ಟು ಹರಸು, ಹೇ! ಭಾರತದ ಭಾಗ್ಯದೈವ! ಮತದ ಮೈಲಿಗೆ ಕಳೆದು ಒಮ್ಮತದ ಮಡಿಯುಟ್ಟು ಸ್ವಾತಂತ್ರ್‍ಯ ಮಂದಿರದೊಳೆಲ್ಲ ನೆರೆದು ಭಾರತಾಂಬೆಯನೇಕನಿಷ್ಠೆಯ...

ಚಂದ ಚಂದದ ಮಕ್ಕಳು ಅಂಗಳಕೆ ಬಂದರು ತಿಂಗಳ ಬೆಳಕ ನೋಡಿ ನಲಿದು ನಾಳೆ ಬರುವೆವೆಂದರು ಚಂದ ಚಂದದ ಮಕ್ಕಳು ಹೂದೋಟಕೆ ಹೋದರು ಒಂದೊಂದು ಹೂವಿಗೂ ಪರಿಮಳವ ತಂದರು ಚಂದ ಚಂದದ ಮಕ್ಕಳು ಪಾಠಶಾಲೆಗೆ ತೆರಳಿದರು ಪಾಠ ಕಲಿತು ಓಟಕಿತ್ತು ಊಟಕೆ ಮನೆಗೆ ಬಂದರು ಮಕ್...

ಗಂಡನೆಂದರೆ ಪ್ರಾಣ ಗಂಡ-ಹೆಣ್ಣೆ ನೀ ಗಂಡನ ಕೂಡಿಕೊಂಡ್ಯ ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ ಬಂಡೀಗೆ ಬಸವನು ಶಿರಬಾಗಿಕೊಂಡಂತೆ! ಹೆಸರಿಗೆ ಗಂಡ ಬಹುಚೆಂದ-ನಿನ್ನ ಸರ್ವಸ್ವವೇ ಅದುವೊಂದು ನೋಡು ಹಸನಾದ ಪುರುಷನು ದೊರೆತರೆ ಆನಂದ ಇಲ್ಲದಿದ್ದರೆ ಸದಾ ...

1...45678...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...