
ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ ಕಂಡರದೇಕೋ ಪುಟ್ಟ ಹೀಗಂತದು...
ಚಂದ್ರ ನನಗೆ ನೀನೂ ಬೇಡ ಸೂರ್ಯನೂ ಬೇಡ ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ ಅಹನಿರ್ಶಿ ತುಂಬಿ ಕೊಂಡಿರಲಿ ಸದಾ ಮಿನುಗುತ್ತಿರುವ ತಾರೆ. *****...
ಹಿಂಬಾಲಿಸಿಕೊಂಡು ಓಡುತ್ತಲೇ ಬಂದೆ ಗುಡ್ಡಗಳನೇರಿ ಕಣಿವೆಗಳನಿಳಿದು ಮುಳ್ಳುಕಲ್ಲುಗಳ ದಾರಿಯಲ್ಲದ ದಾರಿಯಲ್ಲಿ ಅವಳ ನೆರಳು ಹಿಡಿದು ಅವಳ ಅಲೌಕಿಕ ವಾಸನೆಯ ಬೆಂಬತ್ತಿ ಅವಳ ಸೆರಗು ಚುಂಗು ಸಿಕ್ಕಿತೆಂದು ತಿಳಿದು ಸಿಗಲಾರದ ಸೀರೆ ದಾರಿಯ ಹಿಡಿದು ಓಡೋಡುತ...















