ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ ಪುಟ್ಟಾ ಎಂದರೆ ಸಂತೆಯ ಚಿಂತೆ ಅಂತಾನೆ ತುಂಟ! *****...

ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು ಕೊಟ್ಟು ಬತ್ತಿದೆ ಈ ಕೊಳವು ಊರವ್ವ! ಫಕ್ಕನೆ ಮುಳುಗಿಸು ಕೊಡವನು ಬಾರವ್ವ ಗಂಗೆ! ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ ಅಕ್ಕ ಇಲ್ಲೇಕೆ ಅಡಗಿರುವೆ ಸಲ್ಲದು ನಿನಗದು ಭುಗ್ಗನೆ ಚಿಮ್ಮುತ ಏಳವ್ವ ಗಂಗೆ! ಕರ...

ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ… ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು… ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ… ಹೆಂಚು ತಿರಿಗಿಸಲು ಸಾಧ್ಯ...

ಹೊಲಸಲ್ಲೇ ಹೊರಳಾಡುವುದು ನಮಗೆ ಒಗ್ಗಿ ಹೋಗಿದೆ ಊರ ಹತ್ತಿರ ಹೊರದಾರಿಗಳೆಲ್ಲ ಬಯಲು ಕಕ್ಕಸುಗಳು ಊರೂಳಗೆ ಹೋಗುವಾಗ ನಾವು ಮೂಗು ಮುಚ್ಚಿಕೊಳ್ಳುವುದಿಲ್ಲ ಏಕೆಂದರೆ ದುರ್ವಾಸನೆಗೆ ಸಹಜವಾಗಿ ಒಗ್ಗಿಕೊಂಡ ದುರ್ವಾಸರು ನಾವು ದೇವರುಗಳಿಗೆ ಮಾತ್ರ ಹೆದರುತ್...

ಪ್ರಿಯ ಸಖಿ, ಬಸ್ಸಿನ ಎರಡು ಸೀಟುಗಳ ಜಾಗದಲ್ಲಿ ಒಂದು ಸೀಟಿನಲ್ಲಿ ಇವಳು ಕುಳಿತಿದ್ದಾಳೆ. ಪಕ್ಕದಲ್ಲಿ ಯಾರೂ ಬಂದು ಕುಳಿತುಕೊಳ್ಳದಿದ್ದರೆ ಸಾಕು ಎಂದು ಯೋಚಿಸುತ್ತಾ, ಮತ್ತಷ್ಟು ವಿಶಾಲವಾಗಿ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ತನ್ನಪ್ಪನೊಡನೆ ಬಸ್ಸ...

ಇತಿಹಾಸ ಎಂಬುದು ಕೇವಲ ನಾಲ್ಕಕ್ಷರದ ಪದಮಾತ್ರ ಕನ್ನಡ ಜನತೆಗೆ. ಕರ್ನಾಟಕದ ಇತಿಹಾಸದ ಬಗ್ಗೆ ಮಹಾಗ್ರಂಥಗಳನ್ನು ಬರೆದಿರುವ ಕನ್ನಡಿಗ ಇತಿಹಾಸ ಕಾರರಿದ್ದಾರೆ. ಆದರೆ ನಾವು ಅವನ್ನು ಓದುವುದೂ ಇಲ್ಲ, ಕಲಿಯುವುದೂ ಇಲ್ಲ,. ಬಹುಶಃ ಕರ್ನಾಟಕದ ಚರಿತ್ರೆಯು ...

ಸುತ್ತಲೂ ಕತ್ತಲು ನಂಬುವಂತಿಲ್ಲ ಯಾರೊಬ್ಬರನೂ ಕತ್ತಿ ಹಿಡಿದು ಮೇಲೇರಿ ಬಂದಂತೆ ಕಡ್ಡಿ ಗೀರಿದೆ ಮೆಲ್ಲಗೆ ದೀಪ ಹಚ್ಚಿದೆ ಬೆಳೆಯುತ್ತಾ ಹೋಯಿತು ಬೆಳಕು ಮುಟ್ಟಿದರೆ ಎದೆಯಾಳಕ್ಕೆ ಚುಚ್ಚಿಕೊಳ್ಳುವ ಮುಳ್ಳು ಪ್ರತಿ ಕೊಂಬೆಗೂ ತುದಿಯಲೊಂದು ಸಣ್ಣ ಮೊಗ್ಗು...

1...910111213...73

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...