ಎಲ್ಲರ ಮನೆಯ
ಹೆಂಚು ಕಪ್ಪು
ದೋಸೆ ಕಪ್ಪೇನು??
ಕಪ್ಪನ್ನು ಕಪ್ಪೆಂದರೆ…
ಮಕ ಚಿಪ್ಪೇಕೆ??


ಹೆಂಚಿಗೆ ಬರೀ ಕಾಯುವ ಕೆಲಸ!
ಕಾದ ರಬಸಕ್ಕೆ ಬುರು ಬುರು…
ಉಬ್ಬುವ ಕೆಲಸ, ಕಡಿಮೇನು??
ದೋಸೆ ತಿರಿವಿದಂಗೇ…
ಹೆಂಚು ತಿರಿಗಿಸಲು ಸಾಧ್ಯನೇನು??
ಹಾಕಿದ ಹಿಟ್ಟಿಗೆ-
ದೋಸೆ ಆಗುವುದೆಂದೇ ಗೊತ್ತು!!


ಹೆಂಚು ಕಪ್ಪೆಂದು,
ದೋಸೆ ಹೊರಕ್ಕೆ ಜಿಗಿವುದೇ??
ತೂತಾಗದೇ?!
ಹೆಂಚು ನಾಽ…
ದೋಸೆ ನೀಽ….
ಆಸೆ ಪಡುವುದು ತಪ್ಪೇನು??
*

ಹೆಂಡತಿ ಕೇಳಿದಳು:
ಮೆತ್ತಗೆ-
ಸ್ಯಾರೀ…
ಗಂಡ
ಹೇಳಿದ:
ಗತ್ತಿಲಿ-
ಐಯಾಮ್
ಸಾರೀ…
*

ಹದಿಹರೆದಲಿ
ಲವ್ಽ… ಲವ್ಽ…
ಅಂತಾ ಓಡಾಡುತ್ತಾರೆ.
ಮುಪ್ಪಲಿ,
ಲಬ್ಽ… ಲಬ್ಽ…
ಅಂತಾ ಬಡ್ಕೊಂತಾರೆ!
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)