ಹತ್ತೊಂಬತ್ತನೇ ಶತಮಾನ ಕನ್ನಡ ಜನತೆಗೆ ದೌರ್ಭಾಗ್ಯದ ಶತಮಾನ

ಹತ್ತೊಂಬತ್ತನೇ ಶತಮಾನ ಕನ್ನಡ ಜನತೆಗೆ ದೌರ್ಭಾಗ್ಯದ ಶತಮಾನ

ಇತಿಹಾಸ ಎಂಬುದು ಕೇವಲ ನಾಲ್ಕಕ್ಷರದ ಪದಮಾತ್ರ ಕನ್ನಡ ಜನತೆಗೆ. ಕರ್ನಾಟಕದ ಇತಿಹಾಸದ ಬಗ್ಗೆ ಮಹಾಗ್ರಂಥಗಳನ್ನು ಬರೆದಿರುವ ಕನ್ನಡಿಗ ಇತಿಹಾಸ ಕಾರರಿದ್ದಾರೆ. ಆದರೆ ನಾವು ಅವನ್ನು ಓದುವುದೂ ಇಲ್ಲ, ಕಲಿಯುವುದೂ ಇಲ್ಲ,. ಬಹುಶಃ ಕರ್ನಾಟಕದ ಚರಿತ್ರೆಯು ದುಃಖದ ಸಂಗತಿಗಳಿಂದ ತುಂಬಿದೆ. ಅವುಗಳು ದುರಂತಮಯವಾಗಿ ವೇದನೆ-ವಿಷಾದವಿಲ್ಲದೆ ಅರಗಿಸಿಕೊಳ್ಳಲು ಸಾಧ್ಯವಿಲ್ಲವಾಗಿದೆ. ನಾವು ಕಟ್ಟಿದ ಸಾಮ್ರಾಜ್ಯಗಳ ಗತವೈಭವದ ಹೊಂಬಿಸಿಲಿನಲ್ಲಿ ಸುಖ ದಿಂದಿರುವಂತೆಯೇ ಹಠಾತ್ತನೆ ದಾಳಿಗೀಡಾಗಿ ನಾವು ಕಟ್ಟಿದ ಸಾಮ್ರಾಜ್ಯಗಳ ವಿನಾಶಕ ಸಮರಕ್ಷೇತ್ರಗಳಲ್ಲಿ ನಾವು ಸತ್ತವರ ಮತ್ತು ಸಾಯುತ್ತಿರುವವರ ಮಧ್ಯೆ ಇರುತ್ತೇವೆ. ಕ್ರಿ. ಶ. ೧೩೧೧, ೨೩.೦೧.೧೫೬೫ ಮತ್ತು ೦೪.೦೫.೧೭೯೯ರ ವಿನಾಶಕ ಯುದ್ದಗಳು ಕನ್ನಡಿಗರಿಗೆ ಸಾವಿರಾರು ವರ್ಷಗಳವರೆಗೂ ಇತಿಹಾಸದ ಖಾಯಂ ಪಾಠಗಳಾಗುತ್ತವೆ. ನಾವು ಸತತ ಎಚ್ಚರವನ್ನು ಇಟ್ಟುಕೊಳ್ಳಲೇ ಇಲ್ಲ. ಹಳೆಯ ಆಯುಧಗಳ ಮತ್ತು ಆಯುಧಾಗಾರಗಳ ಬಗ್ಗೆಯೇ ಸಂತೃಪ್ತರಾಗಿದ್ದು ೧೩೧೧ ಮತ್ತು ೧೫೬೫ರ ಯುದ್ದಗಳಲ್ಲಿ ಅವಶ್ಯವಾಗಿ ಬೇಕಿದ್ದ ದೂರವ್ಯಾಪಿ ಸುಲಿಪ್ತರಬಾಣ ಗಳನ್ನು ಕಂಡುಹಿಡಿಯಲೇ ಇಲ್ಲ.

ನಾವು ೧೮ನೇ ಶತಮಾನದ ಯುದ್ಧಗಳಲ್ಲಿ ಉಪಯೋಗಿಸಿದ ಸಣ್ಣ ರಾಕೆಟ್ ಶಸ್ತ್ರಗಳನ್ನು ಸುಧಾರಿಸಲಿಲ್ಲ. ಕರ್ನಾಟಕ ಇತಿಹಾಸದ ದುಃಖದ ಘಟನೆಗಳಲ್ಲಿ ಒಂದನ್ನು ಪುನರ್ರಚಿಸಿಕೊಳ್ಳೋಣ. ೪.೫.೧೭೯೯ರ ಯುದ್ಧ ಮುಗಿದಿದೆ. ಅದು ೧೭೯೯ರ ಜೂನ್‌ನ ಒಂದು ಭಾಗವಿರಬೇಕು.

೧೮ನೇ ಶತಮಾನದ ಜಗತ್ತಿನ ಯುದ್ಧವೆಂದೇ ಈ ಯುದ್ದವನ್ನು ನಿಜವಾಗಿಯೂ ವರ್ಗೀಕರಿಸಬಹುದು. ಮಿತ್ರರಾಜ್ಯಗಳ ಸೇನೆಗಳು ಬ್ರಿಟಿಷರ ನೇತೃತ್ವದಲ್ಲಿ ಗೆದ್ದಿವೆ. ಟಿಪ್ಪುಸುಲ್ತಾನನು ಸತ್ತಿದ್ದಾನೆ. ೫.೫.೧೭೯೯ರಲ್ಲಿ ಶ್ರೀರಂಗಪಟ್ಟಣ ಮತ್ತು ನೆರೆ ಹೊರೆಯ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಕನ್ನಡಿಗರ ದಹಿಸುತ್ತಿರುವ ಮನೆ ಗಳಿಂದ ಭುಗಿಲೆದ್ದ ಅಪಾರ ಹೊಗೆ ಆಕಾಶವನ್ನು ಸೀಳಿ ಗುಡುಗು ಮಿಂಚಿನ ಅಭೂತ ಪೂರ್ವ ಮಳೆಯನ್ನು ಸುರಿಸಿರಬೇಕು. ವಿಜೇತರು ಭೂಪಟದ ಮುಂದೆ ಸೇರಿದ್ದಾರೆ. ಅವರಿಗಿರುವುದು ಒಂದೇ ಕಾರ್ಯಸೂಚಿ. ಬಹುವ್ವೆಭವದ ಮೈಸೂರು ಸಾಮ್ರಾಜ್ಯ ವನ್ನು ವಿಕಲಗೊಳಿಸಿ ನಾಶಮಾಡುವುದು. ಅವರ ತಂತ್ರವೇನೆಂದರೆ, ಮೈಸೂರು

ಸಾಮ್ರಾಜ್ಯವನ್ನು ವಿಭಜಿಸಿ ತಮ್ಮ ತಮಲ್ಲೇ ವಿಭಾಗಗಳನ್ನು ಬ್ರಿಟಿಷ್, ಮರಾಠಾ, ನಿಜಾಂ, ಆರ್ಕಾಟ್ ಇತ್ಯಾದಿ, ಹಂಚಿಕೊಂಡು ಮೈಸೂರು ಸಾಮ್ರಾಜ್ಯದ ಹೆಸರನ್ನೇ ಇತಿಹಾಸದಿಂದ ಅಳಿಸಿ, ಬ್ರಿಟಿಷರಿಗೆ ಕಷ್ಟಕೊಡದಂತೆ ಮತ್ತೆ ಮೇಲೇರದ ಹಾಗೆ ಮಾಡುವುದು.

ಆದರೆ ರಾಜವಂಶದ ಒಬ್ಬ ಮಹಿಳೆ ಇದನ್ನು ಆಗಗೊಡಲಿಲ್ಲ. ಇಮಣಿ ಕೃಷ್ಣರಾಜ ಒಡೆಯರ ಡವೇಜರ್ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿಯವರೇ ಅವರು. ಬ್ರಿಟಿಷ ರೊಡನೆ ಸಂಪರ್ಕದಲ್ಲಿದ್ದು ಒಡೆಯರ್ ರಾಜರಿಗೆ ಮೈಸೂರು ರಾಜ್ಯವನ್ನು ಪುನಃ ವಹಿಸಿಕೊಡಲು ಒತ್ತಾಯಿಸುತ್ತಿದ್ದರು. ಅವರ ರಾಜಮನೆತನಕ್ಕೆ ರಾಜ್ಯವನ್ನು ವಹಿಸ ಬೇಕೆಂದು ಸುಮಾರು ಮೂವತ್ತು ವರ್ಷಗಳ ಕಾಲ ವ್ಯವಹರಿಸಿದರು. ಬೇರೆ ಕನ್ನಡಿಗ ರಂತೆ ಆರಂಭಿಕ ಕಷ್ಟಗಳ ಕಾರಣ ನಿರಾಶೆಯಿಂದ ಆಕೆ ರಾಜ್ಯದ ಖಾಯಂ ನಷ್ಟವು ವಿಧಿ ಲಿಖಿತವೆಂದುಕೊಂಡು ಪ್ರಯತ್ನಗಳನ್ನು ನಿಲ್ಲಿಸಿದ್ದರೆ ಒಡೆಯರ ಮೈಸೂರು ರಾಜ್ಯವು ೩೦.೦೬.೧೭೯೯ರಲ್ಲಿ ಪುನರ್ಜನ್ಮ ಪಡೆಯುತ್ತಿರಲಿಲ್ಲ. ಆಕೆ ಅವರ ಪ್ರಯತ್ನವನ್ನು ಸತತವಾಗಿ ಮುಂದುವರಿಸಿದರು. ಬ್ರಿಟಿಷರು ಎಂಟು ಜಿಲ್ಲೆಗಳನ್ನೊಳ ಗೊಂಡ ಭಾಗವನ್ನು ಒಡೆಯರ್ ಸಂತತಿಗೆ ವಹಿಸಿಕೊಟ್ಟರು. ಕೊಯಮತ್ತೂರ್ ಜಿಲ್ಲೆಯ ಉತ್ತರಭಾಗ, ದಕ್ಷಿಣ ಕನ್ನಡದ ಭಾಗ ಮತ್ತು ವೈನಾಡ್ ಭಾಗಗಳನ್ನೊಳ ಗೊಂಡ ಹೆಚ್ಚಿನ ಭಾಗಗಳನ್ನೂ ಸೇರಿಸಬೇಕಾಗಿತ್ತು. ಅದಕ್ಕಾಗಿ ವ್ಯವಹಾರವನ್ನು ಮುಂದುವರಿಸುವುದು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಅವರಿಗೆ _ ಕಷ್ಟವಾಗಿದ್ದಿರ ಬಹುದು. ಮಹಾರಾಣಿಯವರು ರಾಜಧಾನಿಯನ್ನು ಮೈಸೂರಿಗೆ ವರ್ಗಾಯಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಿರೀಟ ಧಾರಣಮಹೋತ್ಸವ ೩೦.೦೬ .೧೭೯೯ ರಂದು ಆಯಿತು. ಮೈಸೂರು ರಾಜಧಾನಿ ನಗರವಾಯಿತು. ಪ್ರತಿ ವರ್ಷ ಜೂನ್ ೩೦ರ ದಿನಾಂಕವನ್ನು ರಾಜಧಾನಿ ನಗರದ ಸ್ಥಾಪನಾ ದಿನವಾಗಿ ಆಚರಿಸುವುದು ಉಚಿತವೆಂದು ಭಾವಿಸುತ್ತೇನೆ. ಮೈಸೂರು ನಾಗರಿಕರು ತಮ್ಮ ನಗರವನ್ನು ಪ್ರೀತಿಸುತ್ತಾರೋ ಎಂಬುದು ನನಗೆ ಗೊತ್ತಿಲ್ಲ. ಆದರೆ ೩೦.೦೬.೨೦೧೦ ರಾಜಧಾನಿ ಮೈಸೂರಿನ ೨೧೧ನೇ – ಜನ್ಮದಿನೋತ್ಸವವನ್ನು ಆಚರಿಸುವುದನ್ನು ನಾಗರಿಕರು ಪ್ರಾರಂಭಮಾಡಿದ್ದರೆ ತುಂಬ ಚೆನ್ನಾಗಿರುತ್ತಿತ್ತು.

ಮಹಾರಾಣಿಯವರ ಸುಖಸಂತೋಷಕ್ಕೆ ಪಾರವೇ ಇರಲಿಲ್ಲ. ಕಳೆದುಹೋಗಿದ್ದ ರಾಜ್ಯವನ್ನು ಒಡೆಯರ್ ಸಂತತಿಗೆ ಒದಗಿಸಿಕೊಟ್ಟ ಸಾಧನೆಯ ಅರಿವು ಅವರಿಗಿತ್ತು. ಆದರೆ ಅವರ ಅರಿವಿಗೆ ಸಿಲುಕದಿದ್ದುದು ಏನೆಂದರೆ, ಅವರ ಹೊಸರಾಜ್ಯವು ಕನ್ನಡಿಗರಿಗೆ ವರಪ್ರದಾನವೇ ಆಯಿತು. ಏಕೆಂದರೆ, ಆಮೇಲೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಮೈಸೂರು ರಾಜ್ಯವನ್ನು ಮೂಲಸ್ಧಾನವಾಗಿಟ್ಟುಕೊಂಡು ಕರ್ನಾಟಕ ಎಂಬ ದೊಡ್ಡ ಕನ್ನಡನಾಡನ್ನು ರಚಿಸಲು ನಾವು ಸಮರ್ಥರಾದೆವು.

ಮೈಸೂರಿನ ವಸ್ತುಸಂಗ್ರಹಾಲಯದಲ್ಲಾಗಲೀ, ಅರಮನೆಗಳಲ್ಲಾಗಲೀ _ ಈ ರಾಣಿಯ ಭಾವಚಿತ್ರ ಕಾಣದಿದ್ದುದು ನನಗೆ ಆಶ್ಚರ್ಯವೆನಿಸಿತು. ಆಕೆಯ ಕಾಲದಲ್ಲಿ ಕನ್ನಡಿಗ ವ್ಯಕ್ತಿ ಚಿತ್ರಕಲಾಕಾರನೊಬ್ಬನೂ ಇರಲಿಲ್ಲವೆನಿಸುತ್ತದೆ. ಮಹಾರಾಣಿ ಅಮಣ್ಣಿಯವರು ತುಂಬ ಸುಂದರಿಯಾಗಿಯೂ ಧೀಮಂತೆಯಾಗಿಯೂ ಇದ್ದರೆಂದು ಹೇಳಲ್ಪಟ್ಟಿದೆ. ದುರದೃಷ್ಟವಶಾತ್ ಆಕೆಯ ಚಿತ್ರ ಅಲಭ್ಯವಾಗಿ ಹದಿನೆಂಟನೇ ಶತಮಾನದ ಕನ್ನಡತಿ ಸುಂದರಿ ಹೇಗಿದ್ದಾಳೆಂದು ಊಹಿಸಿಕೊಳ್ಳಲೂ ಸಾಧ್ಯವಾಗಿಲ್ಲ.

ಬ್ರಿಟಿಷರು ನಿಜಾಂಗೆ ಕೆಲವು ಮುಖ್ಯ ಭಾಗಗಳನ್ನು ಕೊಟ್ಟರು. ಬಳಿಕ ನಿಜಾಂ ಅವನ್ನು ಹಿಂತಿರುಗಿಸಿದರು. ಕನ್ನಡಿಗರಿಗೆ ಅಮೂಲ್ಕವಾಗಿಯೂ, ದಿವ್ಯವಾಗಿಯೂ ಇದ್ದ ಭೂಮಿ ನಿಜಾಂಗೆ ಬೇಡವಾದದ್ದು ವಿಚಿತ್ರ. ಮೇ ೧೭೯೯ರ ಶ್ರೀರಂಗಪಟ್ಟಣದ ಚಿನ್ನ, ವಜ್ರಗಳು ಮತ್ತು ಜವಾಹಿರಿಗಳಲ್ಲಿ ನಿಜಾಂರಿಗೆ ಹೆಚ್ಚು ಆಸಕ್ತಿ ಇದ್ದಿರಬೇಕು.

ನಿಜಾಂ ಮತ್ತು ಮರಾಠರನ್ನು ಸಂತೋಷಪಡಿಸಲು ಮೈಸೂರು ಮಹಾ ಸಾಮ್ರಾಜ್ಯವನ್ನು ವಿಕಲಗೊಳಿಸಿ ದೊಡ್ದಭಾಗವನ್ನು ತಾವೇ ಇಟ್ಟುಕೊಳ್ಳಲು ಬ್ರಿಟಿಷರು ಮಾಡಿದ ಈ ಕೆಲಸ ತುಂಬ ದುರದೃಷ್ಟಕರವಾದುದು.

ಒಡೆಯರ ಸಂತತಿಗೆ ಕೆಲವು ಭಾಗಗಳನ್ನು ಕೊಟ್ಟಮೇಲೆ ಬ್ರಿಟಿಷರು ಒಂದು ಪ್ರತ್ಯೇಕ ಬೆಂಗಳೂರು ವ್ರೆಸಿಡೆಸ್ಸಿಯನ್ನು ರಚಿಸಬೇಕಾಗಿತ್ತೆಂದು ನನ್ನ ಅಭಿಪ್ರಾಯ. ಅದರ ಕೇಂದ್ರ ಬೆಂಗಳೂರು ಆಗಿದ್ದು, ಸಂಪೂರ್ಣ ಕರಾವಳಿ ಕರ್ನಾಟಕ ಪ್ರದೇಶ, ಬಳ್ಳಾರಿ ಮತ್ತು ಗುರನ್ಮಕೊಂಡ, ಕೊಡಗುರಾಜ್ಯ, ಹೊಸೂರು ತಾಲ್ಲೂಕು, ಕೊಯಮತ್ತೂರು ಜಿಲ್ಲೆಯ ಉತ್ತರದ ಭಾಗಗಳು ಮತ್ತು ಕೋಲ್ಜಾಪುರ ಜಿಲ್ಲೆಯ ದಕ್ಷಿಣಭಾಗಗಳು ಸೇರಿರಬೇಕಾಗಿತ್ತು. ಈ ನನ್ನ ಕನಸಿನ ‘ ಬೆಂಗಳೂರು ಪ್ರೆಸಿಡೆನ್ಸಿ ಒಡೆಯರರ ಮೈಸೂರು ರಾಜ್ಯದೊಡನೆ ಒಟ್ಟುಗೂಡಿ ಶಕ್ತಿಶಾಲಿಯಾಗಿ ಮೈಸೂರು ರಾಜ್ಯ ಮತ್ತು ಬೆಂಗಳೂರು ಪ್ರೆಸಿಡೆನ್ಸಿಯ ಎಲ್ಲ ಪ್ರದೇಶಗಳಲ್ಲೂ ಸಮವಾಗಿ ವೇಗದಿಂದ ಪ್ರಗತಿಯನ್ನು ಸಾಧಿಸುತ್ತಿತ್ತು. ಇಂದಿನ ಕರ್ನಾಟಕ ಮೂವತ್ತು ಸಂಪದ್ಬರಿತ ಜಿಲ್ಲೆಗಳಿಂದ ಕೂಡಿ ನಿಜವಾಗಿಯೂ ಬಹುವೈಭವದ ಚಿನ್ನದ ನಾಡಾಗಿ, ನಂಜುಂಡಪ್ಪ ಸಮಿತಿಯ ಆವಶ್ಯಕತೆಯಿಲ್ಲದಾಗಿಸುತ್ತಿತ್ತು.

ಸುಮಾರು ಹನ್ನೊಂದು ಲಕ್ಷ ಕನ್ನಡಿಗರನ್ನು ಕೊಂದ ಕ್ರಿ.ಶ. ೧೮೭೬ರ ವಿಧ್ವಂಸಕ ಕ್ಷಾಮವನ್ನು ಸಂಹರಿಸಿಕೊಳ್ಳಬಹುದಾಗಿತ್ತು. ಏಕೆಂದರೆ ಕೆಲವು ಪ್ರದೇಶಗಳಲ್ಲಿ ಸಮೃದ್ಧವಾಗಿ ದೊರಕುತ್ತಿದ್ದ ಆಹಾರಧಾನ್ಶಗಳನ್ನು ಒಳ್ಳೆಯ ಸಹಕಾರದಿಂದ ಬೆಂಗಳೂರು ಪ್ರೆಸಿಡೆನ್ಸಿ ಮತ್ತು ಮೈಸೂರು ರಾಜ್ಯಗಳೊಳಗೆ ಸುಲಭವಾಗಿ ಸಾಗಿಸ ಬಹುದಾಗಿತ್ತು.

ಬ್ರಿಟಿಷರು ಈ ಒಂದು ದೊಡ್ಡ ಸಾಮ್ರಾಜ್ಯವನ್ನು ವಿಭಜಿಸಿ, ವಿಭಜಿಸಿ ಇಷ್ಟವಿಲ್ಲದ ನೆರೆರಾಜ್ಯಗಳಿಗೆ ಹಂಜಿ ತಪ್ಪು ಮಾಡಿದರು. ಈ ಭಾಗಗಳು, ಆಳುವವರ ಅಸಡ್ಡೆ, ಅಪಚಾರಗಳಿಂದ ಕಷ್ಟವನ್ನು ಅನುಭವಿಸಿದವು.

ಈ ಭಾಗಗಳು ಕ್ರಿ.ಶ. ೧೭೯೯ರಿಂದಲೂ ನೂರೈವತ್ತು ವರ್ಷಗಳ ಕಾಲ ಹೊಸ ಅನಾಸಕ್ತ ಅಧಿಪತಿಗಳ ಅಸಡ್ಡೆ ಮತ್ತು ಶೋಷಣೆಗಳಿಗೊಳಗಾದವು. ಇದರ ಫಲಿತಾಂಶವಾಗಿ ಯಾವಾಗ ೧೯೫೬ರಲ್ಲಿ ವೈಭವದ ಹೊಸ ಕರ್ನಾಟಕಕ್ಕೆ ಸೇರ್ಪಡೆ ಯಾಯಿತೋ ಆಗ ಈ ಭಾಗಗಳು ದೊಡ್ಡ ನದಿಗಳಿಂದ ಫಲವತ್ತಾಗಿದ್ದರೂ, ಖನಿಜ ಸಂಪತ್ತಿನಿಂದ ಕೂಡಿದ್ದರೂ, ಕಷ್ಟಪಟ್ಟು ದುಡಿಯುವ ಬುದ್ಧಿವಂತ ಜನರಿಂದ ತುಂಬಿ ದ್ದರೂ ಅಭಿವೃದ್ವಿಯೇ ಇಲ್ಲದಾಗಿತ್ತು ಅಥವಾ ಅತ್ಯಲ್ಪವಾಗಿತ್ತು.

ಹೀಗೆ ೧೭೯೯ರ ವಿನಾಶಕ ಯುದ್ಧದ ಬಳಿಕ ಹೊಸದಾಗಿ ರಚಿತವಾದ ಒಡೆಯರ ಮೈಸೂರು ರಾಜ್ಯದ ಹೊರಗಿನ ಹರಿದು ಹಂಚಿದ ಪ್ರದೇಶಗಳ ಕನ್ನಡಿಗರ ಪಾಲಿಗೆ ೧೫೦ ವರ್ಷಗಳು ದೀರ್ಘ ಕಷ್ಟಗಳ, ಅಸಡ್ಡೆಯ ಯಾತ್ರೆಯಾಗಿತ್ತು.

ಕನ್ನಡ ಜನಕ್ಕೆ, ಕನ್ನಡ ಸಾಹಿತ್ಯಕ್ಕೆ, ಕನ್ನಡಕಲೆ ಮತ್ತು ವಿಜ್ಞಾನಗಳಿಗೆ ಕದನ ಮತ್ತು ತುಮುಲ ತುಂಬಿದ ದಶಮಾನಗಳನ್ನೊಳಗೊಂಡ ೧೮ನೇ ಶತಮಾನದಲ್ಲಿ ಏನಾಯಿ ತೆಂದು ನೋಡೋಣ. ಕನ್ನಡ ಸಾಹಿತ್ಯ ಮತ್ತು ಕಲೆಗೆ ಪ್ರೋತ್ಸಾಹವಿರಲಿಲ್ಲ. . ತಿರುಚಿನಾಪಳ್ಳಿ ಮತ್ತು ನೆರೆಪ್ರದೇಶಗಳ ಮೇಲೆ ಗೆಲುವು ಸಾಧಿಸಿ ಮೈಸೂರು ರಾಜ್ಯಕ್ಕೆ ಸೇರಿಸಿಕೊಳ್ಳುವುದಕ್ಕೆ ಆದ್ಯತೆಯಿತ್ತು. ಈ ಉದ್ದೇಶಕ್ಕಾಗಿ ವಿನಾಶಕವಾದ ಮತ್ತು ದೀರ್ಘವಾದ ಯುದ್ಧವಾಯಿತು. ಆಮೇಲೆ ಬಂದವು ಮಾರಣಾಂತಕ ಆಂಗ್ಲ- ಮೈಸೂರು ಯುದ್ಧಗಳು — ೧೮ನೇ ಶತಮಾನದ ಹತ್ತು ದಶಮಾನಗಳಲ್ಲಿ ತಮ್ಮ ಪಟ್ಟಣಗಳ ಮೇಲೂ, ಹಳ್ಳಿಗಳ ಮೇಲೂ ಆದ ಆಕ್ರಮಣಗಳಲ್ಲಿ ಕನ್ನಡ ಗ್ರಂಥ ಕರ್ತರು, ಕವಿಗಳು ತಮ್ಮ ಹಸ್ರಪ್ರತಿಗಳೊಡನೆ ಸಾವನ್ನಪ್ಪಿರಬೇಕು.

ಹದಿನೆಂಟು ಶತಮಾನದಲ್ಲಿ ಹತ್ತಕ್ಕಿಂತಲೂ ಹೆಚ್ಚು ವಿನಾಶಕಾರಿ ಯುದ್ದಗಳನ್ನು ಮಾಡಿ ಎರಡು ಲಕ್ಷಕ್ಕಿಂತಲೂ ಹೆಚು ಮತು. ಪ್ರಜೆಗಳು ಹತರಾಗಿದಿರ ಬೇಕು.

ಕನ್ನಡ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸಮಯವಿರಲಿಲ್ಲ. ಹದಿನೆಂಟನೇ ಶತಮಾನದ ರಾಜರ ಮತ್ತು ರಾಣಿಯರ ಚಿತ್ರಗಳನ್ನು ಬಿಡಿಸುವ ವ್ಯಕ್ತಿಚಿತ್ರಕಲಾಕಾರನೊಬ್ಬನನ್ನು ಆ ಶತಮಾನ ಕೊಡಲಿಲ್ಲ. ಹದಿಮೂರು ಮತ್ತು ಹದಿನಾಲ್ಕನೇ _ ಶತಮಾನದಲ್ಲಿ ವಿಜೃಂಭಿಸಿದ್ದ ಶಾಂತಲಾ ಶೈಲಿಯ ನಾಟ್ಯದ ಪುನರುಜ್ಜೀವನ ಮಾಡಿ ರಾಜಪೋಷಣೆಯ ಪ್ರೋತ್ಸಾಹ ನೀಡಬೇಕಾಗಿತ್ತು. ಅಂಥದೇನೂ ಆಗಲಿಲ್ಲ.

೧೭೭೦ರಲ್ಲಿ ಒಂದು ದಿನ ಹಿರಿಯ ಅಧಿಕಾರಿಗಳೊಡನೆ ಹೈದರಾಲಿಯು ಕಾವೇರಿ ಮಹಾನದಿಯನ್ನು ದಾಟುತ್ತಿದ್ದಾನೆ. ನದಿಯಲ್ಲೊಂದು ಮರದ ದಿಮ್ಮಿ ತೇಲುತ್ತಿದೆ. ಒಂದು ಸಣ್ಣ ಕಲ್ಲೂ ನೀರಿನಲ್ಲಿ ಮುಳುಗಿ ನದಿಯ ತಳ ಸೇರುವಲ್ಲಿ ಒಂದು ದೊಡ್ಡ ಭಾರವಾದ ಮರದ ದಿಮ್ಮಿಹೇಗೆ ತೇಲುತ್ತದೆ ಎಂದು ಹೈದರಾಲಿಯು ತನ್ನ ಸುತ್ತ ಇರುವವರನ್ನು ಕೇಳುತ್ತಾನೆ. ಅವರಲ್ಲೊಬ್ಬ ಧಾರ್ಮಿಕ ಉತ್ತರವೊಂದನ್ನು ನೀಡುತ್ತಾನೆ. ಹೈದರಾಲಿ ಅದನ್ನು ಒಪ್ಪುತ್ತಾನೆ; ವಿಷಯ ಅಲ್ಲಿಗೆ ಮುಕ್ತಾಯವಾಗು ತ್ತದೆ. ೧೮ನೇ ಶತಮಾನದ ಕನ್ನಡಿಗರ ವಿಜ್ಞಾನ ಹಾಗೆ ಕೊನೆಗೊಂಡಿತು. ತೇಲುವ ದಿಮ್ಮಿಯ ವಿದ್ಯಮಾನದ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಪ್ರೆಂಚರ ಸಹಯೋಗದಲ್ಲಿ ವೈಜ್ಞಾನಿಕ ಸಂಸ್ಥೆಯೊಂದು ಸ್ಥಾಪಿತವಾಗು ತ್ತಿತ್ತು.

ಕ್ರಿ. ಶ. ೧೯೧೧ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪನೆಗಾಗಿ ಕನ್ನಡಿಗರು ೧೩೧ ವರ್ಷಗಳ ಕಾಲ ಕಾಯಬೇಕಾಯಿತು.

ಟಿಪ್ಪುಸುಲ್ತಾನ್ ದೇವನಹಳ್ಳಿಯ ಹೆಸರನ್ನು ಏನೋ ತನಗೆ ಗೊತ್ತಿರಬಹುದಾಗಿದ್ದ ಕಾರಣ ಯೂಸುಫಾಬಾದ್ ಎಂದು ಬದಲಾಯಿಸಿದ. ಈ ಹೊಸ ಹೆಸರೇ ಮುಂದುವರಿದಿದ್ದರೆ ದೇವನಹಳ್ಳಿ ವಿಮಾನ ನಿಲ್ದಾಣವನ್ನು ಯೂಸುಫಾಬಾದ್ ಅಂತಾರಾಷ್ಟೀಯ ವಿಮಾನ ನಿಲ್ದಾಣವೆಂದು ಕರೆಯಬೇಕಾಗಿತ್ತು.

ರಾಜವಂಶದ ಒಡೆಯರ ಸಂತತಿಗೆ ೧೮ನೇ ಶತಮಾನವು ಸುಖಕರವಾಗಿ ಇರಲೇ ಇಲ್ಲ. ೧೬೭೧ ರಿಂದ ೧೭೦೪ರವರೆಗೆ ಆಳಿದ ರಾಜ ಚಿಕ್ಕದೇವರಾಯ ಒಡೆಯರಲ್ಲಿ ಅತ್ಯಂತ ವಿಶಿಷ್ಟರಲ್ಲಿ ಒಬ್ಬ. ಆತ ಬೆಂಗಳೂರನ್ನು ಮೈಸೂರು ರಾಜ್ಯಕ್ಕೆ ಪೂರ್ಣವಾಗಿ ಸೇರಿಸಿಕೊಂಡಾತ. ಔರಂಗಜೇಬನ ಆಸ್ಥಾನಕ್ಕೆ ರಾಯಭಾರಿಯೊಬ್ಬ ನನ್ನೂ ಕಳುಹಿಸಿದ್ದನು.

ಆ ಬಳಿಕ ರಾಜರು ದುರ್ಬಲರಾಗಿದ್ದು ದಳವಾಯಿಗಳು ಮೇಲುಗೈ ಸಾಧಿಸಿದರು. ಶೀಘ್ರವೇ ಹೈದರಾಲಿಯು ಚಿತ್ರದಲ್ಲಿ ಒಡಮೂಡಿದನು ಮತ್ತು ಉಳಿದದ್ದು

ಅಂತಾರಾಷ್ಟ್ರ್‍ಈಯ ಇತಿಹಾಸ. ತಿರುಚಿನಾಪಳ್ಳಿಯನ್ನು ಗೆದ್ದು ಮೈಸೂರು ರಾಜ್ಯಕ್ಕೆ ಸೇರಿಸಿ ಕಾವೇರಿ ನಾಡಿನ ಪ್ರತ್ಯೇಕ ಜಿಲ್ಲೆಯನ್ನು ರಚಿಸುವ ಒಡೆಯರರ ಮಹತ್ತ್ವಾ ಕಾಂಕ್ಷೆಯು ನೆರವೇರಲೇ ಇಲ್ಲ, ೧೭೫೧ ರಿಂದ ೧೭೫೫ರ ವರೆಗಿನ ಭಯಂಕರ ಯುದ್ದವು ನಡೆದರೂ ಬ್ರಿಟಿಷರ ಕುಟಿಲ ನೈಪುಣ್ಯ ಮತ್ತು ಮಹಮದಾಲಿಯ ವಂಚಕತೆಯ ಸಂಯೋಗದಿಂದ ಮೈಸೂರು ರಾಜ್ಯಕ್ಕೆ ತಿರುಜಿನಾಪಳ್ಳಿಯ ಸೇರ್ಪಡೆಯು ತಪ್ಪಿಹೋಯಿತು. ಆ ದೇವಸ್ಥಾನಗಳ ದಿವ್ಯ ನಗರವನ್ನು ಸೇರಿಸಿಕೊಳ್ಳ ಬಹುದೆಂದು ಖಚಿತವಾಗಿ ನಂಬಿದ್ದ ಇಮ್ಮಡಿಕೃಷ್ಣರಾಯ ಒಡೆಯರು ಹತಾಶರಾದರು.

೧೯ನೇ ಶತಮಾನವು ಕನ್ನಡಿಗರಿಗೆ ಏನನ್ನು ಕಟ್ಟಿಟ್ಟಿದೆಯೆಂದು ನೋಡೋಣ. ಮೈಸೂರು ಮಹಾಸಾಮ್ರಾಜ್ಯವು ವಿಕಲಾಂಗವಾಗಿ ವಿಭಜಿತವಾಗಿ, ದೊಡ್ದಭಾಗವೇ ಇಷ್ಟವಿಲ್ಲದ ಅಧಿಪತಿಗಳ ಹತೋಟಿಗೊಳಪಟ್ಟಿದ್ದನ್ನು ನಾವು ನೋಡಿದ್ದೇವೆ. ತಮ್ಮ ರಾಜ್ಯವನ್ನು ಹಿಂದಕ್ಕೆ ಪಡೆದುಕೊಂಡೆವೆಂದು ಒಡೆಯರ ಸಂತತಿಯ ರಾಜ ವಂಶೀಯರು ಸಂತುಷ್ಟರಾಗಿದ್ದಾರೆ. ಮಹಾರಾಣಿ ಲಕ್ಷೀ ಅಮ್ಮಣ್ಣಿಯವರ ಆನಂದ ಸಂತೋಷಗಳಿಗೆ ಪಾರವೇ ಇರಲಿಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ ಮೊದಲ ೧೫ ವರ್ಷಗಳ ಆಳ್ವಿಕೆ ಸುಸೂತ್ರವಾಗಿ ನಡೆಯಿತು. ಆದರೆ ದಂಗೆ, ಪ್ರತಿರೋಧಗಳು ಆಳ್ವಿಕೆಗೆ ಎದುರಾಗಿ ಸಮಸ್ಯೆ ಪ್ರಾರಂಭವಾಯಿತು. ಕೊನೆಗೆ ೧೮೩೧ರಲ್ಲಿ ಬ್ರಿಟಿಷರು ಆಳ್ವಿಕೆಯನ್ನು ತಮ್ಮ ಕೈಗೆತ್ತಿಕೊಂಡಾಗ ರಾಜನು ತನ್ನ ಸಿಂಹಾಸನವನ್ನೂ ಕಿರೀಟವನ್ನೂ ಕಳೆದುಕೊಂಡದ್ದಾಯಿತು. ಇದು ಕನ್ನಡಿಗರಿಗೆ ಭಾರಿ ಹೊಡೆತವಾಯಿತು.

೧೮೨೪ರಲ್ಲಿ ಕಿತ್ತೂರು ಚೆನ್ನಮ್ಮ ಎರಡನೇ ಆಂಗ್ಲ-ಕಿತ್ತೂರು ಯುದ್ದದಲ್ಲಿ ಸೋತು ಸೆರೆಮನೆ ಸೇರಬೇಕಾಯಿತು. ಮೊದಲನೇ ಯುದ್ಧವನ್ನು ಆಕೆ ಗೆದ್ದಿದ್ದಳು. ಏನಾದ ರೊಂದು ಒಪ್ಪಂದ ಮಾಡಿಕೊಂಡು ಆಕೆಗೆ ಬ್ರಿಟಿಷರು ರಾಜ್ಯವನ್ನು ಹಿಂದಕ್ಕೆ ಕೊಡ ಬೇಕಾಗಿತ್ತು. ಕಿತ್ತೂರು, ಬೆಳಗಾಂ, ಸಂಗೊಳ್ಳಿ ಮತ್ತು ಬೈಲಹೊಂಗಲಗಳನ್ನೊಳ ಗೊಂಡ ಸುಂದರರಾಜ್ಯವಾಗಿರಬಹುದಾಗಿತ್ತು.

ದೊಡ್ಡ ರಾಜ್ಯಗಳನ್ನು ತುಂಡರಿಸುವುದು ಬ್ರಿಟಿಷರ ರಾಜಕೀಯ ನೀತಿಯಾಗಿತ್ತು. ಆಕೆಯ ಸೋಲು, ಆಕೆಯ ರಾಜ್ಯದ ಪತನ ಕನ್ನಡಿಗರ ದುರ್ದೈವವಾಗಿತ್ತು.

ಪರಿಸ್ಥಿತಿ . ಸುಧಾರಿಸಬಹುದೆಂದು ಆಲೋಚನೆಯಿದ್ದಾಗಲೇ – ೧೮೭೬ರಲ್ಲಿ ಹಠಾತ್ತನೆ ಭಯಂಕರ ಕ್ಷಾಮವೆದುರಾಯಿತು. ಮೈಸೂರು ರಾಜ್ಯದಲ್ಲೇ ಆಹಾರ ಅಭಾವದಿಂದ ೧೧ ಲಕ್ಷ ಜನ ಕನ್ನಡಿಗರ ಸಾವಾಯಿತು. ಬೊಂಬಾಯಿ ಕರ್ನಾಟಕ, ನಿಜಾಂ ಕರ್ನಾಟಕ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಕರ್ನಾಟಕದ ಪ್ರದೇಶಗಳಲ್ಲೂ ಕ್ಷಾಮವುಂಟಾಗಿದ್ದಿರಬೇಕು. ಒಟ್ಟಾರೆ ೨೦ ಲಕ್ಷ ಕನ್ನಡಿಗರು ಈ ಕ್ಷಾಮದ ಕಾರಣ ಸಾವನ್ನಪ್ಪಿರಬೇಕು.

ಯಾವಾಗ ಮೈಸೂರು ರಾಜ್ಯದ ರಾಜರಾಗಿ ೧೮೮೧ರಲ್ಲಿ ಹತ್ತನೇ ಚಾಮರಾಜ ಒಡೆಯರು ಬಂದರೋ ಆಗ ಕನ್ನಡಿಗರು ಸಂತೋಷಭರಿತರಾದರು. ಆದರೆ ಮತ್ತೆ ಕನ್ನಡಿಗರನ್ನು ದುರಂತವೊಂದು ಅಪ್ಪಳಿಸಿತು. ೧೮೯೪ರಲ್ಲಿ ರಾಜರು ಡಿಫ್ತೀರಿಯಾ ಕಾರಣ ಕಲ್ಕತ್ತದಲ್ಲಿ ಸಾವಿಗೀಡಾದರು. ಅವರು ಒಳ್ಳೆಯ ಮಹಾರಾಜರಾಗಿದ್ದು ಕನ್ನಡಿಗರು ಅವರಿಂದ ಬಹಳ ನಿರೀಕ್ಷಿಸಿದ್ದರು. ಆದರೆ ಕನ್ನಡಿಗರಿಗೆ ಅದೃಷ್ಟವಿಲ್ಲವಾಯಿತು. ನಾನು ಅವರನ್ನು ಫಿಸಿಸಿಸ್ಟ್‌ ರಾಜನೆಂದು ಕರೆಯುತ್ತೇನೆ. ಏಕೆಂದರೆ ಅವರು ಭೌತಶಾಸ್ತ್ರದಲ್ಲಿ ಆಸಕ್ತರಾಗಿದ್ದರು.

ಕನ್ನಡಿಗರು ಇನ್ನೂ ದುಃಖದಲ್ಲೇ ಮುಳುಗಿದ್ದಾರೆ. ಮತ್ತೆ ಅವರನ್ನು ದುರಂತವು ಅಪ್ಪಳಿಸಿತು. ಪ್ಲೇಗ್ ಸಾಂಕ್ರಾಮಿಕವು ಎಲ್ಲೆಲ್ಲೂ ಹರಡಿತು. ಸಾವಿರಾರು ಕನ್ನಡಿಗರು ಸಾವಿಗೀಡಾದರು.

೧೯ನೇ ಶತಮಾನದಲ್ಲಿ ಕನ್ನಡಿಗರಿಗೆ ಎದುರಾದ ಕೆಲವು ವಿಷಯ ದುರಂತ ಗಳನ್ನು ಈ ಕೆಳಗೆ ಪಟ್ಟಿ ಮಾಡುತ್ತೇನೆ.

೧. ದಂಗೆಗಳು, ಕ್ರಾಂತಿಗಳು, ಪ್ರತಿಭಟನೆಗಳು, ವಿರೋಧಗಳು, ಇವುಗಳ ದುರಂತ.

೨. ಕರ್ನಾಟಕದ ವಾಯವ್ಯ ಪ್ರದೇಶಗಳನ್ನು, ಈಶಾನ್ಯ ಪ್ರದೇಶಗಳನ್ನು ಮತ್ತು, ಕರಾವಳಿ ಭಾಗಗಳನ್ನು ಇಷ್ಟವಿಲ್ಲದ ಅಧಿಪತಿಗಳಿಗೆ ವರ್ಗಾಯಿಸಿದ ದುರಂತ.

೩. ಸುಂದರ ಕಿತ್ತೂರು ರಾಜ್ಯದ ನಾಶ ಮತ್ತು ಕಿತ್ತೂರುರಾಣಿ ಚೆನ್ನಮ್ಮನ ಸಾವು.

೪. ೧೮೩೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಸಿಂಹಾಸನ, ಕಿರೀಟ ಮತ್ತು ರಾಜ್ಯವನ್ನು ಕಳೆದುಕೊಂಡದ್ದು.

೫. ೨೦ಲಕ್ಫ ಕನ್ನಡಿಗರ ಅಮೂಲ್ಯ ಜೀವವನ್ನು ತೆಗೆದುಕೊಂಡ ಭಯಂಕರ ವಿನಾಶಕಾರಿ ಕ್ಷಾಮದ ಮರಂತ .

೬. ೧೦ನೇ ಚಾಮರಾಜ ಒಡೆಯರ ಅಕಾಲ ಮರಣದ ದುರಂತ.

೭. ಸಾವಿರಾರು ಕನ್ನಡಿಗರ ಸಾವಿಗೆ ಕಾರಣವಾದ ಸಾಂಕ್ರಾಮಿಕ ಪ್ಲೇಗ್ ದುರಂತ.

೮. ಬೊಂಬಾಯಿ ಕರ್ನಾಟಕ ಪ್ರದೇಶದಲ್ಲಿ, ನಿಜಾಂ ಕರ್ನಾಟಕ ಪ್ರದೇಶದಲ್ಲಿ ಮತ್ತು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಎರವುಭೇದ, ಅಸಡ್ಡೆ, ಭಾಷೆಯ ಮತ್ತು ಸಾಂಸ್ಕೃತಿಕ ಆಶೋತ್ತರಗಳ ಅದುಮುವಿಕೆಗಳ ಕಾರಣ ಕನ್ನಡಿಗರ ಕಷ್ಟ ಮತ್ತು ದುಃಖಗಳ ದುರಂತ.

೯. ಹೊಸದಾಗಿ ರಚಿಸಿದ ಮೈಸೂರು ರಾಜ್ಯಕ್ಕೆ ಸೇರಿಸುವಂತೆ ಒಂದೇ ಬೆಂಗಳೂರು ಪ್ರೆಸಿಡೆನ್ಸಿಯನ್ನು ರಚಿಸುವುದರ ಬದಲು ಮೈಸೂರು ಮಹಾ ಸಾಮ್ರಾಜ್ಯವನ್ನು ತುಂಡರಿಸಿದ ದುರಂತ.

ಹತ್ತೊಂಬತ್ತನೇ ಶತಮಾನದಲ್ಲಿ ಕನ್ನಡಿಗರು ಅನುಭವಿಸಿದ ಕಷ್ಟಗಳನ್ನು ಅನಂತ ದುರಂತಗಳನ್ನೂ ನೆನೆಯುತ್ತ ಹೋದರೆ ಕನ್ನಡಿಗರಿಗೆ ಹತ್ತೊಂಬತ್ತನೇ ಶತಮಾನ ದುರದೃಷ್ಟದ ಶತಮಾನವೆಂದೇ ಹೇಳಬೇಕಾಗುತ್ತದೆ. ಕನ್ನಡಿಗರಿಗೆ ಅದು ಶೂನ್ಯ ಶತಮಾನವಾಗಿತ್ತೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ ಆಟದ ಮೈದಾನ
Next post ಪ್ರೀತಿ – ದ್ವೇಷ

ಸಣ್ಣ ಕತೆ

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys