ಕೋಮಟಿಗನೊಬ್ಬನಿದ್ದನು. ಅವನ ಆಳುಮಗನ ಹೆಸರು ಇಕ್ಯಾ. “ತುಪ್ಪ ಕೊಂಡುಕೊಂಡು ಬಾ” ಎಂದು ಕೋಮಟಿಗ ಹೇಳಿದರೆ, ಇಕ್ಯಾ ತುಪ್ಪ ಕೊಂಡು ತರುವಾಗ ಲೆಕ್ಕ ಹಾಕತೊಡಗಿದನು – “ಈ ಉಳಿದ ನಾಲ್ಕು ರೂಪಾಯಿಕೊಟ್ಟು ಕೋಳಿ ಕೊಂಡರೆ ಕೆಲವ...

ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ ಗಾಳಿ ಬೀಸಲು ಏಳುವಂತೆ ಧೂಳಿ, ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ- ವಾದ್ಯದಲಿ ಮಲ್ಹಾರ ಭಾವದಾಳಿ ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ ನುಡಿಸಿ ವಿರಹವ ಹೃದಯವೀಣೆಯಲ್ಲಿ ನಿನ್ನ ನೆನಪಿನ ಅಲೆಯು ತಾಗಿದೊಡನ...

ದಿನಗಳು ಉರಿಬಿಸಿಲಿನ ಸ್ನಿಗ್ಧದಿಂದಲೇ ಶುರುವಾಗುವುವು ಕನಸುಗಳು ಕಟ್ಟಿಕೊಳ್ಳುತ್ತಿದ್ದಂತೆಯೇ ಸ್ನಿಗ್ಧದಲ್ಲಿ ತೊಳೆದುಕೊಂಡೂ ಬಿಡುತ್ತವೆ. ಚುರು ಚುರುಗುಡುವ ರಸ್ತೆಯ ಡಾಂಬರೂ ಸುಸ್ತಾಗಿ ಸರೆಯುತ್ತದೆ. ಬಿರಿದ ನೆಲ ಮಳೆಗೆ ಹಪಹಪಿಸಿ ಬಿಸಿಲಿನ ಬೆವರಿ...

ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರ...

ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ ನಿತ್ಯ ನೆರೆದರೂ ಸಂತೆ ಇಲ್ಲ ಚಿಂತೆ! ಬಿಸಿಲು ಮಳೆ ಚಳಿಗಾಳಿಗೆ ಹಿಗ್ಗದೇ ಕುಗ್ಗದೇ ಎಲ್ಲಿಯೂ ಲೆಕ್ಕಕ್ಕೆ ಸಿಗದೇ ಯಾರಿಗೂ ವೇದ್ಯವಾಗದೇ ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ. ಅದೆಷ್ಟು ತರಹೇವಾರ...

ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ|| ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ ಕಲಿತ ಮಾತ ಮಾರ...

ಮೌಸ್ ಜೊತೆ ಬೆರಳು ಆಡುತ್ತಿದ್ದರೂ ಮನಸ್ಸನ್ನು ಕಂಪ್ಯೂಟರ್ ಕಡೆ ಕೇಂದ್ರಿಕರಿಸಲಾರದೆ ಗಾಯನ್ ಕೊಂಚ ಡಿಸ್ಟರ್ಬ್ ಆಗಿದ್ದ. ಬೆಳಗ್ಗೆಯೇ ಬಂದ ಮಮ್ಮಿ ಫೋನ್ ಅವನನ್ನು ಅಸಹನೆಗೀಡು ಮಾಡಿತ್ತು. ಇವತ್ತು ಸೂರ್ಯ ಗ್ರಹಣ. ಅದು ನೈಸರ್ಗಿಕವಾಗಿ ನಡೆಯೋ ಒಂದು ...

ಶೀನಣ್ಣ: “ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!” ಶಾಮಣ್ಣ: “ಹಾಗಾದರೆ ಮನೇಲಿ?” ಶೀನಣ್ಣ: “ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!” ***...

ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ? ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ? ಭೂಮಿ ಬಾಯ ತರೆಯುತಿದೆ ಬಾನು ಬೆಂಕಿ ಸುರಿಯುತಿದೆ ಧಾರೆ ಒಣಗಿ ಚೀರುತಿದೆ ಚಿಲುಮೆ ಎದೆಯಲಿ ಮುಗಿಲ ಬರುವ ಕಾಯುತಿದೆ ಮಳೆಯ ಕನಸ ನೇಯುತಿದೆ ನಿನ್ನ ಬಯಸಿ ಬೇಯುತ...

1...2526272829...37

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...