ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ ಹೇಳುತ್ತಿದ್ದೀರಿ : ಲುಕ್ ಹಿಯರ್ ಆ ಅದೇ ಬೆಂಚಿನ ಮೇಲೆ ನಾನು ಕೂ...

ಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ, ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಬುವಿಗೆ? ತಾವರೆದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು, ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ, ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು! ...

ರೋಗಿ: “ಡಾಕ್ಟರ್, ನೀವು ನನ್ನ ರೋಗವನ್ನು ಪರೀಕ್ಷಿಸುವಾಗ ಜೊತೆಗೆ ನರ್ಸ್ ಸಹ ಇರಲಿ” ವೈದ್ಯ: “ಯಾಕಮ್ಮ ನನ್ನ ಮೇಲೆ ನಂಬಿಕೆ ಇಲ್ಲವಾ?” ರೋಗಿ: “ಹಾಗಲ್ಲ ಡಾಕ್ಟರ್, ಹೊರಗಡೆ ಕುಳಿತಿರುವ ನನ್ನ ಗಂಡನಿಗೆ ನನ್ನ ಮ...

ಬಹಳ ಹೊತ್ತಿನಿಂದಲೂ ಅವಳು ಆ ಮುರುಕು ಬೆಂಚಿನ ಮೇಲೆಯೇ ಕುಳಿತಿದ್ದಾಳೆ. ಯಾರಿಗೋ ಕಾಯುತ್ತಿದ್ದಳೇನೋ ಕುಳಿತಲ್ಲಿಯೇ ಚಡಪಡಿಸುತ್ತ ದಾರಿಯುದ್ದಕ್ಕೂ ದೃಷ್ಟಿ ನೆಟ್ಟಿದ್ದಾಳೆ. ಕಣ್ಣುಗಳಲಿ ನಿರೀಕ್ಷೆ ಮನದಲಿ ಭಾವನೆಗಳ ಸಮೀಕ್ಷೆ. ಅದೊಂದು ಪಾರ್ಕಾಗಿದ್ದ...

ಕರ್ನಾಟಕಾಂಬೆಯ ಕನ್ನಡ ಮಾತೆಯೆ ಎಬ್ಬಿಸಮ್ಮ ತಾಯೆ ಎಬ್ಬೀಸೆ ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ ಹಿಂದಿನ ಕವಿಗಳ ಹಿಂದಿನ ಸಿರಿಗಳ ಬಾಯ್ತುಂಬ ಹೊಗಳುತ್ತ ಮಲಗಿಹರ ಇಂದಿನ ಪರಿಗಳ ಮುಂದಿನ ಗುರಿಗಳ ಕೈಯಿಂದ ಮಾಡದೆ ಕುಳಿತಿಹರ ಪಂಪ ರನ್ನ ಕು...

ಕಳೆದ ವಾರವೆಲ್ಲಾ ಎಲ್ಲಾ ಟಿವಿ ಚಾನಲ್ಲು ಪತ್ರಿಕೆಗಳ ಕಾಲಂ ತುಂಬಾ ಕಾಶಿನಾಗ್ಳ ಸಂಕಟಮೋಚನ ಹನುಮಾನ್ ಮಂದಿರದಾಗೆ ಬಾಂಬ್ ಸ್ಫೋಟವಾಗಿ ಡೆತ್ತುಗಳಾದ ನ್ಯೂಸೋ ನ್ಯೂಸು. ಮುಸ್ಲಿಮರಿಗೆ ಮೆಕ್ಕಾ ಹೆಂಗೋ ಹಿಂದೂಗಳಿಗೆ ಕಾಶಿ ಹೋಲಿ ಪ್ಲೇಸ್ ಅಂತಾರೆ. ಆದರೆ ...

ಅಡ್ವಾಣಿ ಎಂಬ ಓಲ್ಡ್ ಮಾಡಲ್ ರಾಜಕಾರಣೀಯ ನಲವತ್ತು ವರ್ಷಗಳ ಸುಧೀರ್ಘ ಸೇವೆ ಅಂಬೋದು ಹಾಳು ತೋಟಕ್ಕೆ ನೀರು ಹೊತ್ತು ಬೀಳ್ ರೆಟ್ಟೆ ಕೆಡವಿಕ್ಯಂಡ್ರು ಅಂಬಗಾತೇ ನೋಡ್ರೀ. ಬಿಜೆಪಿ ರಜತಮಹೋತ್ಸವದ ಕೊಡುಗೆಯಾಗಿ ಹಿರಿಯ ತೆಲಿಗಳ ನಿವೃತ್ತಿ ಘೋಷಣೆಯೇ ಪ್ರಮ...

ಇತಿಹಾಸ ನಮ್ಮನ್ನು ಒಗೆಯುತ್ತದೆ ಅದರ ಕಸದ ತೊಟ್ಟಿಗೆ ಕೊಳೆತ ಹಣ್ಣು ಹರಿದ ಚಪ್ಪಲಿಗಳ ಕಸದ ತೊಟ್ಟಿಗೆ ಬೀದಿ ನಾಯಿಗಳು ಬಾಯಿಡುವ ಕಸದ ತೊಟ್ಟಿಗೆ ಆ ಕಸದ ತೊಟ್ಟಿಯನ್ನು ಸಿಮೆಂಟಿನಿ೦ದ ಮಾಡಲಾಗಿದೆ ಕಸದ ತೊಟ್ಟಿ ಎ೦ದು ಕೆಂಪಕ್ಷರಗಳಲ್ಲಿ ಬರೆಯಲಾಗಿದೆ ‘...

ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ, ಕಣ್ಣ ಮುಂದೆ ಸುಳಿಯೆ ನೀನು, ಕಾಲದಾ ತೆರೆ ಸರಿದು ತಾನು, ಜನುಮ ಜನುಮ ಜ್ಞಾಪಕ. ನಿನ್ನ ಬೊಗಸೆಗಣ್ಣಿಗೆ, ಕೆನ್ನೆ ಜೇನು ದೊನ್ನೆಗೆ, ಸಮ ಯಾವುದೇ ಚೆನ್ನೆ ನಿನ್ನ ಜಡೆ ಹರಡಿದ ಬೆನ್ನಿಗೆ? ನಿನ್ನ ಕನಸು ಬಾಳಿಗ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...