ಒಂದೂರಲ್ಲಿ ತಾಯಿ ಮಗ ಇದ್ದರು. ಮಗನ ಹೆಂಡತಿಯೂ ಬಂದಿದ್ದಳು. ಸೊಸೆಯ ಕೈಯಿಂದ ಅಡಿಗೆ ಮಾಡಿಸುವಾಗ ಅತ್ತೆಯು ಹಿಟ್ಟು, ಬೇಳೆ, ಖಾರಗಳನ್ನಲ್ಲ ಲೆಕ್ಕಾಚಾರದಿಂದ ತೆಗೆದುಕೊಡುವಳು. ಅದರಿಂದ ಅಡಿಗೆ ಹಾಳಾಗುವುದಕ್ಕೆ ಅವಕಾಶವೇ ಇಲ್ಲವೆಂದು ಅತ್ತೆ ಬಗೆದ್ದಿ...

ಈತ: ಸ್ನೇಹಿತನ ಕೂಡ ಮಾತನಾಡುತ್ತಾ, ಇನ್ನೊಂದು ವಿಚಾರ: “ನಾನು ಈ ದಿನ ನನ್ನ ಲವರ್‌ಗೆ ನನ್ನ ಪ್ರೇಮಪತ್ರವನ್ನು ಬರೆದು ನೇರವಾಗಿ ಅವರ ಮನೆಗೆ ಹೋಗಿ ಗೇಟ್ ಬಳಿ ನಿಂತಿದ್ದ ಅವಳ ತಂದೆಯ ಕೈಗೇ ಕೊಟ್ಟೆ. ಅವರು ನನ್ನನ್ನು ನೀನು ಹೊಸ ಪೋಸ್ಟ್‌‍ಮ್...

ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ ಚೆಲುವೆ ಯಾವ ಮಾಯೆ ನುಡಿಸಿ ತೆಗೆದೆ ಎದೆಬಾಗಿಲ ಒಲವೆ? ತಂಗಳಾದ ಬಾಳಿನಲ್ಲಿ ತಿಂಗಳೊಂದು ಮೂಡಿತು ಹಂಗಿನಲ್ಲಿ ನಮೆದ ಜೀವಕೊಂದು ಬೆಳಕ ಹಾಡಿತು ದಿನದ ದುಃಖ ದುಡಿತ ಇದ್ದಂತೇ ಇರುತ ಹೊಸದಾಯಿತೆ ಇಡಿಯ ಲೊಕ ನೀ ಹಜ್ಜ...

ಸೂರ್ಯ ನಸುಕಿನ ನಿನ್ನ ಹೂನಗೆ ಮುದ್ದಿಸಿಕೊಳ್ಳಲು ನಿನಗಿಂತ ಮೊದಲೇ ಎದ್ದು ಕಿಟಕಿಯಲಿ ನಿನಗಾಗಿ ಕಾಯುತ್ತೇನೆ ಬೆಳಗಿನ ಕಾಫಿಗಿಂತಲೂ ಚೇತೋಹಾರಿ ನಿನ್ನದೊಂದು ಸ್ಪರ್ಷ ಮಲ್ಲಿಗೆಯ ಘಮಲು ಆಹಾ! ನೆಲತುಂಬ ಸುರಿದ ಪಾರಿಜಾತ ಕಿಡಕಿಯಾಚೆ ಎದುರಿಗೆ ಬಂದೇಬಿಟ...

ದಲಿತರು ಶೂದ್ರರು ಮೆರಿಟ್ ವಿದ್ಯಾರ್ಥಿಗಳಿಗೆ ಎಂದಿಗೂ ಸಮವಲ್ಲ ಬಿಡ್ರಿ. ಮೀಸಲಾತಿ ಬೆಂಬಲದಿಂದ ಸೀಟು ಗಿಟ್ಟಿಸಿ, ನೌಕರಿ ಗಿಟ್ಟಿಸಿದ ಪ್ರಾರಬ್ದ ಮುಂಡೇವು ಯಾವತ್ತಿಗೂ ಎಫೀಶಿಯಂಟ್ಸ್ ಅಲ್ಲ. ಎಂಜಿನೀರ್ ಗಳಾದರೆ ಧಡಾರಂತ ಸೇತುವೆಗಳು ಉರುಳಿಬಿದ್ದೇ ಹ...

ಮೆದುಭೂಮಿ ಹದ ಗಾಳಿ ಬೇಕಷ್ಟು ಬೆಳಕು ಸಾಕಷ್ಟು ನೀರು ಎಲ್ಲಾ ಇದ್ದೂ ಮೊಳಕೆಯೊಡೆಯಲೋ ಬೇಡವೋ? ಈಗಲೋ ಆಗಲೋ ಅನುಮಾನದಲ್ಲೇ ಸ್ತಬ್ದಗೊಂಡ ನುಗ್ಗೆಬೀಜ. ಯಾವ ಪರುಷಸ್ಪರ್ಶವೋ ಆಳಕ್ಕೆ ಬೇರನಿಳಿಸಿ ನೆಲ‌ಒಡಲು ಸೀಳಿ ಮೊಳಕೆಯೊಡೆಸಿ ಬುರಬುರನೆ ಎತ್ತರಕ್ಕೇರಿ...

ಬಾಲ್ಯದ ಬರಿಮೈ ತಿರುಗಾಟ ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು ಮೀಸಲ ಸೊಬಗು ನೋಡಿದವರು ಹಾಡಿದರು ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ ಮೈತುಂಬ ಮರ್ಯಾದೆಯುಟ್ಟು ಪ್ರಸನ್ನತೆ ಮುಡಿ...

ಭೂಲೋಕದಿಂದ ತನ್ನ ಕಡೆಗೆ ಬಂದ ವಿಪುಲ ಅರ್ಜಿಗಳ ಒಟ್ಟಣೆಯನ್ನು ನೋಡಿ, ಅವುಗಳಿಗೆಲ್ಲ ಉತ್ತರ ಬರೆಯಿಸುತ್ತ ಕುಳಿತುಕೊಳ್ಳುವುದಕ್ಕಿಂತ ಸ್ವತಃ ಭೂಲೋಕಕ್ಕೆ ಹೋಗಿ, ಅಲ್ಲಿಯವರಿಗೆ ಬೇಕಾದ ಪರಿಹಾರವನ್ನು ಒದಗಿಸಿ ಬರುವುದು ಲೇಸೆಂದು ಬಗೆದು ಬ್ರಹ್ಮದೇವನು...

ಕೆಂಪು ತಾವರೆಯ ಮಾದಕ ಕಂಪಿಗೆ ಕಂಪಿಸಿದೆ ಈ ಮನ ಹೂವಿನ ಮಾಯೆಗೆ ಹೋಳಾಗಿದ ಎದೆ ಕನಸಿಗೆ ಕರೆದಿದೆ ದಿನಾ! ಗಾಳಿಗೆ ತಲೆದೂಗಾಡುವ ಹೂವಿಗೆ ತಾರೆಗು ಇಲ್ಲದ ಮೆರಗು ಅರಬಿರಿದಾ ಆ ಕೆಂಪು ದಳಗಳಿಗೆ ಅಪ್ಸರೆ ಕೆನ್ನೆಯ ಬೆಳಗು ಕೊಳದಲ್ಲಿದು ಕೊಯ್ಯಲು ಬಾರದು ...

ಶ್ಯಾಮ: “ಅಲ್ಲಯ್ಯಾ, ನಿನಗೆ ನಾಯಿಕಚ್ಚಿತಂತೆ; ಹೌದಾ?” ಶೀನು: “ಹೌದು ಬೊಗಳುವ ನಾಯಿ ಕಚ್ಚೋಲ್ಲ ಎಂಬ ಗಾದೆ ಇದೆಯಲ್ಲಾ ಹಾಗಾಗಿ ನಾನು ಬೊಗಳುತ್ತಿದ್ದ ನಾಯಿ ಹತ್ತಿರ ಬಂದು ಅದರ ಬಾಯೊಳಗೆ ಹಲ್ಲು ಎಷ್ಟಿದೆ ನೋಡೋಣ ಆಂತ ಬಾಯಿ ಮು...

1...1516171819...37

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...