ಮೂಲ: ವಿ ಎಸ್ ಖಾಂಡೇಕರ ಆಕಾಶವು ಸೂರ್‍ಯನು ಕೂಡ ಕಾಣದಷ್ಟು ಕಾರ್‍ಮೋಡಗಳಿಂದ ತುಂಬಿ ಹೋಯಿತು. “ಏನು ಭಯಂಕರ ಸಂಹಾರವಿದು!” ಎಂದು ಆಕಾಶವು ಕಣ್ಣು ಮುಚ್ಚಿಕೊಂಡಂತೆ ಭಾಸವಾಗುತ್ತಿತ್ತು. ಟಪಟಪ ಮಳೆಯ ಹನಿಗಳು ಉದುರತೊಡಗಿದವು. ರಾಜ ಕವಿಗ...

ಜೀನ್ ವಾಲ್ಜೀನನು ತನ್ನ ಊರಿಗೆ ಬಂದಕೂಡಲೇ ನೆಟ್ಟನೆ ಫಾಂಟೈನಳು ಮರಣಾವಸ್ಥೆಯಲ್ಲಿ ಮಲಗಿದ್ದ ಕೊಠಡಿಗೆ ಹೋದನು. ಜೇವರ್ಟನೂ ಹಿಂಬಾಲಿಸಿ ಬಂದಿದ್ದನು ; ಅವನನ್ನು ದಸ್ತಗಿರಿ ಮಾಡಿ ದನು, ಜೀನ್ ವಾಲ್ಜೀನನು, ತಾನು ಕೋಸೆಟ್ಟಳನ್ನು ಕರೆತರು ವುದಕ್ಕಾಗಿ ಹ...

“ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ.” ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. “ನೋಡೇ-ನಾನು ರೈಲಿನ ಇಂಜಿನ್ನು, ನೀನು...

ಬ್ರೆವೆಟ್, ಚೆನಿಲ್‌ ಡ್ಯೂ, ಕೋಷೆಸೆಯಿಲ್ ಎಂಬ ಮೂರು ಮಂದಿ ಸಾಕ್ಷಿಗಳ ವಿಚಾರಣೆಯಾಯಿತು. ಇವರೂ ಅಪರಾಧಿಗಳಾಗಿದ್ದ ವರೇ, ಈ ಮೂವರೂ, ‘ಈಗ ಬಂದಿಯಾಗಿರುವವನೇ ಜೀನ್ ವಾಲ್ಜೀನನ್ನು,’ ಎಂದು ಸಾಕ್ಷ್ಯ ಹೇಳಿದರು. ಇವರು ಒಬ್ಬೊ ಬ್ಬರು ಸಾಕ್...

ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ ಹೇಳಬೇಕು. ದೂರ ಮಾಡಬೇಕು ಎಂದು ಎಷ್ಟು ತೀರ್‍ಮಾ...

ಇದಾದ ಸ್ವಲ್ಪ ದಿನಗಳಲ್ಲಿಯೇ ಗ್ರಾಮಾಧಿ ಕಾರಿಗೂ ಜೇವರ್ಟ ನಿಗೂ ಪ್ರಬಲವಾದ ಚರ್ಚೆಯು ನಡೆಯಿತು. ಫಾಂಟೈನ್ ಎಂಬ ಬಡ ಹೆಂಗಸು ತನ್ನನ್ನು ಬೀದಿಯಲ್ಲಿ ಅವಮಾನ ಪಡಿಸಿದ ಯಾವ ನೋ ಒಬ್ಬ ಪುರುಷನ ಮೇಲ್ಯರಿದು ಜಗಳವಾಡಿದಳೆಂಬ ತಪ್ಪಿತ ಕ್ಕಾಗಿ ಜೀವರ್ಟನು ಅವಳ...

ಮೊಬ್ಬಳ್ಳಿ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೂರತೆಯ ಕಾರಣ ಪಕ್ಕದ ಹಳ್ಳಿಗೆ ಸ್ಥಳಾಂತರಿಸಬೇಕೆಂಂಬ ನಿರ್‍ಧಾರಕ್ಕೆ ಸರ್ಕಾರ ಬಂದಾಗಿತ್ತು. ಮೊಬ್ಬಳ್ಳಿ ಶಾಲೆಗೆ ಬಂದ ಮೇಸ್ಟ್ರು ನಾಲ್ಕು ತರಗತಿಗಳಿಗೆ ಒಬ್ಬನೆ ಪಾಠ ಮಾಡಬೇಕಿತ್ತು. ಜವಾನನೂ ಅವನ...

ಪಾದ್ರಿಗೆ ತನ್ನಲ್ಲಿ ಉಂಟಾದ ನಂಬಿಕೆಯಿಂದ ಮನಸ್ಸು ಕರಗಿ ಜೀನ್ ವಾಲ್ಜೀನನು ಅಲ್ಲಿಂದ ಮುಂದೆ ಒಳ್ಳೆಯ ನಡತೆಯಿಂದಿರು ವುದೇ ಉತ್ತಮವೆಂದು ಅನುಭವದಿಂದ ತಿಳಿದುಕೊಂಡು, ತನ್ನ ಜನ್ಮಾವಧಿಯ ಒಳ್ಳೆಯ ನಡತೆಯನ್ನೇ ತನ್ನ ಧೈಯವಾಗಿಟ್ಟು ಕೊಂಡನು, ಒಂದು ಸಣ್ಣ...

ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ ನೆನೆಯುತ್ತಾರೆ. ಒಂದು ಸಲವಲ್ಲ, ನೂರ...

ನೂರು ವರ್ಷಗಳಿಗಿಂತಲೂ ಹಿಂದೆ ಫ್ರಾನ್ಸ್ ದೇಶದಲ್ಲಿ ಜೀನ್ ವಾಲ್ಜೀನನೆಂಬ ಒಬ್ಬ ಕಷ್ಟಜೀವಿಯಾದ ರೈತನು, ಆಹಾರ ವಿಲ್ಲದೆ ಸಾಯುತ್ತಿದ್ದ ತನ್ನ ತಂಗಿಯ ಮಕ್ಕಳಿಗಾಗಿ ಒಂದು ರೊಟ್ಟಿಯನ್ನು ಕದ್ದು ತಂದನು. ಇದಕ್ಕಾಗಿ ಇವನಿಗೆ ಐದುವರ್ಷಗಳ ಕಠಿಣ ಶಿಕ್ಷೆಯನ...

1...3536373839...137

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....