ಪಾಪಿಯ ಪಾಡು – ೧

ಪಾಪಿಯ ಪಾಡು – ೧

ನೂರು ವರ್ಷಗಳಿಗಿಂತಲೂ ಹಿಂದೆ ಫ್ರಾನ್ಸ್ ದೇಶದಲ್ಲಿ ಜೀನ್ ವಾಲ್ಜೀನನೆಂಬ ಒಬ್ಬ ಕಷ್ಟಜೀವಿಯಾದ ರೈತನು, ಆಹಾರ ವಿಲ್ಲದೆ ಸಾಯುತ್ತಿದ್ದ ತನ್ನ ತಂಗಿಯ ಮಕ್ಕಳಿಗಾಗಿ ಒಂದು ರೊಟ್ಟಿಯನ್ನು ಕದ್ದು ತಂದನು. ಇದಕ್ಕಾಗಿ ಇವನಿಗೆ ಐದುವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ ‘ ಗ್ಯಾಲಿ’ ಎಂಬ ನಾವೆಗೆ ಕಳುಹಿಸಿದರು. ‘ ಗ್ಯಾಲಿ ‘ ಎಂದರೆ, ಸಮುದ್ರದ ಮೇಲೆ ಅನೇಕ ಮಂದಿ ಬಂದಿವಾನರುಗಳಿಂದ ನಡೆಯಿಸಲ್ಪಡುತ್ತಿದ್ದ ಒಂದುದೊಡ್ಡ ದೋಣಿ, ಪ್ರತಿಯೊಬ್ಬ ಖೈದಿಗೂ ಕಾಲಿಗೆ ಭಾರ ವಾದ ಕಬ್ಬಿಣದ ಬೇಡಿಯನ್ನು ಹಾಕಿ ಅದನ್ನು ಬಲವಾದ ಕಬ್ಬಿಣದ ಸರಪಣಿಯಿಂದ ಅವನು ಕುಳಿತಿದ್ದ ಸ್ಥಳಕ್ಕೆ ಕಟ್ಟಿರುತ್ತಿದ್ದರು. ಈ ಬಡ ಖೈದಿಗಳಿಗೆ ಅತಿ ನಿಕೃಷ್ಟವಾದ ಆಹಾರವನ್ನೂ ಬಲು ಕೀಳುತರದ ಉಡುಪನ್ನೂ ಕೊಡುತ್ತಿದ್ದುದಲ್ಲದೆ, ಅವರು ಶ್ರಮಪಟ್ಟು ದೋಣಿಯನ್ನು ನಡೆಯಿಸುವುದು ಸ್ವಲ್ಪ ಕಡಿಮೆ ಯಾದರೂ ನಿಷ್ಕರುಣದಿಂದ ಹೊಡೆದು ಹೊಡೆದು ಚಚ್ಚುತ್ತಿದ್ದರು. ಜೀನ್ ವಾಲ್ಜೀನನು ನಾಲ್ಕು ಸಲ ತಪ್ಪಿಸಿಕೊಂಡೋಡಿಹೋಗಲು ಪ್ರಯತ್ನ ಪಟ್ಟನು. ಇದರಿಂದ ಇವನ ಶಿಕ್ಷೆಯು ಹತ್ತೊಂಭತ್ತು, ವರ್ಷಗಳವರೆಗೂ ಹೆಚ್ಚಿತು. ಕಠಿಣ ಶಿಕ್ಷೆಯೂ, ಸರಿಯಾದ ಅನ್ನ ಪಾನಗಳ ಅಭಾವವೂ, ಕಷ್ಟಮಯವಾದ ಪ್ರವಾಸವೂ ಸಹ ಇವನನ್ನು ಕೇವಲ ಪಶುವಿನಂತೆ ಮಾಡಿಬಿಟ್ಟಿದ್ದುವು.

ಬಿಡುಗಡೆಯಾದ ಮೇಲೆ ಇವನು ಮನೆಮನೆಗೂ ಅಲೆಯುತ್ತ ಕಡೆಗೆ ಒಬ್ಬ ಪಾದ್ರಿಯ ಮನೆಗೆ ಬಂದು ಬಾಗಿಲನ್ನು ತಟ್ಟಿದನು. ‘ ಒಳಗೆ ಬರಬಹುದು,’ ಎಂಬ ಧ್ವನಿಯು ಕೇಳಿಬಂದಿತು, ಒಳಗೆ ಹೋಗಿ, ಒಂದು ಹೆಜ್ಜೆಯನ್ನಿಟ್ಟು, ಬಾಗಿಲನ್ನು ಮುಚ್ಚದೆ, ಹಾಗೆಯೇ ಸ್ವಲ್ಪ ಅನುಮಾನಿಸಿ ನಿಂತನು. ಬೆನ್ನಿನ ಮೇಲೆ ಇವನ ಚೀಲವೂ ಕೈಯಲ್ಲಿ ದೊಣ್ಣೆಯ ಇದ್ದುವು. ದಣಿದಿದ್ದ ಇವನ ದೃಷ್ಟಿಯು ಕೂರವಾಗಿಯ, ಕಣ್ಣುಗಳು ಕೆಂಡದಂತೆ ಭಯಂ ಕರವಾಗಿಯೂ ಇದ್ದುವು. ಇವನ ಈ ಲಕ್ಷಣಗಳಿಂದ ಅಲ್ಲಿನ ಜನರಿಗೆ ಅಪಶಕುನದಂತೆ ಭಯಸೂಚನೆಯಾಯಿತು.

ಮನೆಯ ಯಜಮಾನಿಯಾದ ಮೇಡೆವ ಮೆಗ್ಲೊಯಿರಳು ಮಿತಿಮೀರಿದ ಭಯದಿಂದ ದಿಕ್ಕು ತೋರದೆ, ಕಿರಿಚಿಕೊಳ್ಳು, ವುದಕ್ಕೂ ಶಕ್ತಿಯಿಲ್ಲದೆ, ಗಡಗಡನೆ ನಡುಗುತ್ತ ಬಾಯಿ ತೆರೆದು ನಿಂತುಬಿಟ್ಟಳು.

ಈ ಮನುಷ್ಯನು ಬಂದುದನ್ನು ಮೇಡಮ್ ಬ್ಯಾಪ್ಟಿಸ್ಠೈನಳು ನೋಡಿ ಬೆದರಿ ಬೆಚ್ಚಿದಳು. ಮೆಲ್ಲನೆ ಹಿಂದಿರುಗಿ ತನ್ನ ಅಣ್ಣನ ಮುಖವನ್ನು ನೋಡಿ ಎಂದಿನಂತೆ ಶಾಂತಳಾದಳು.

ಪಾದ್ರಿಯು ಮಾತ್ರ ಈ ಹೊಸಬನನ್ನು ಪರಮ ಶಾಂತ ದೃಷ್ಟಿಯಿಂದ ನೋಡಿದನು.

ಈ ಅಪರಿಚಿತನಿಗೆ ಏನು ಬೇಕಾಗಿತ್ತೆಂದು ಕೇಳಲು, ಆತನು ಬಾಯಿ ತೆರೆದಾಗಲೇ, ಹೊಸಬನು ಎರಡು ಕೈಗಳನ್ನೂ ತನ್ನ ದೊಣ್ಣೆಯಮೇಲೆ ಊರಿನಿಂತು, ಅಲ್ಲಿದ್ದವರನ್ನು ಒಬ್ಬೊಬ್ಬರ ನ್ನಾಗಿ ನೋಡಿ, ಪಾದಿಯು ಮಾತನಾಡುವುದಕ್ಕೆ ಮೊದಲೇ, ಉಚ್ಚಸ್ವರದಿಂದ, “ ಇದೋ ನೋಡಿ, ನನ್ನ ಹೆಸರು ಜೀನ್ ವಾಲ್ಜೀನ್ ; ನಾನೊಬ್ಬ ಶಿಕ್ಷೆಯನುಭವಿಸಿದ ಅಪರಾಧಿಯು, ಹತ್ತೊಂಭತ್ತು ವರ್ಷಗಳು ಗ್ಯಾಲಿ ನಾವೆಯಲ್ಲಿ ಶಿಕ್ಷೆಯನ್ನನು ಭವಿಸಿ ಬಂದಿರುವೆನು, ನನಗೆ ಬಿಡುಗಡೆಯಾಗಿ ನಾಲ್ಕು ದಿನ ಗಳಾದುವು. ಈಗ ಪಾಂಟಾರ್ಲಿಯರ್‌ ಎಂಬ ನನ್ನ ಸ್ಥಳಕ್ಕೆ ಹೋಗುತ್ತಿರುವೆನು. ನಾಲ್ಕು ದಿನಗಳೂ ನಡೆದು ಟೂಲಾನ್ ಪಟ್ಟಣದಿಂದ ಬಂದೆನು. ಈ ದಿನ ಮುವತ್ತಾರು ಮೈಲಿಗಳನ್ನು ನಡೆದಿರುವೆನು. ಈ ದಿನ ಸಾಯಂಕಾಲ ನಾನು ಈ ಊರಿಗೆ ಬಂದಾಗ ಒಂದು ಸತ್ತ್ರಕ್ಕೆ ಹೋದೆನು. ನಾನು ಸರಕಾರದ ಆಜ್ಞೆಯಂತೆ ಗ್ರಾಮಾಧಿಕಾರಿಗೆ ತೋರಿಸಿ ನನ್ನ ಹತ್ತಿರವಿಟ್ಟು ಕೊಂಡಿದ್ದ ಹಳದಿ ಬಣ್ಣದ ಅಪ್ಪಣೆ ಚೀಟಿಯನ್ನು (passport) ಆ ಸತ್ತ್ರದ ಜನರು ನೋಡಿ ನನ್ನನ್ನು ಹೊರಗೆ ಕಳುಹಿಸಿಬಿಟ್ಟರು. ಅನಂತರ ಮತ್ತೊಂದು ಸತ್ತ್ರಕ್ಕೆ ಹೋದೆನು, ಅವರೂ ಸಹ “ ನಡೆ, ಆಚೆಗೆ ಹೋಗು,” ಎಂದು ಗರ್ಜಿಸಿ ಕಳುಹಿಸಿದರು. ಎಲ್ಲೆಲ್ಲಿಯೂ ಹೀಗೆಯೇ ಆಯಿತು. ಯಾರೂ ನನಗಾಶ್ರಯ ಕೊಡರು. ಬಂದೀಖಾನೆಗೆ ಹೋದೆನು. ಅಲ್ಲಿನ ಕಾವಲುಗಾರನು ನನ್ನನ್ನು ಒಳಗೆ ಬಿಡಲಿಲ್ಲ. ಬೀದಿಯ ಚೌಕದಲ್ಲಿ ಒಂದು ಬಂಡೆಯಮೇಲೆ ಮಲಗಿಕೊಂಡಿದ್ದನು. ಪುಣ್ಯಾತ್ಮಳೊಬ್ಬಳು ನಿಮ್ಮ ಮನೆಯನ್ನು ತೋರಿಸಿ, “ ಬಾಗಿಲನ್ನು ತಟ್ಟು,” ಎಂದು ಹೇಳಿದಳು. ಅದರಂತೆ ಇಲ್ಲಿಗೆ ಬಂದು ಬಾಗಿಲನ್ನು ತಟ್ಟಿದೆನು. ಈ ಸ್ಥಳವು ಯಾವುದು ? ಇದು ಸತ್ತ್ರವೇ ? ನೀವು ಇಲ್ಲಿಯ ಅಧಿಕಾರಿಗಳೇ ? ನನ್ನಲ್ಲಿ ಹಣ ವಿದೆ. ನಾನು ಹತ್ತೊಂಭತ್ತು ವರ್ಷಗಳು ನಾವೆಯಲ್ಲಿ ಕಷ್ಟಪಟ್ಟು ಕೆಲಸಮಾಡಿ ಸಂಪಾದಿಸಿ ಕೂಡಿಟ್ಟಿರುವ ಒಂದು ನೂರ ಒಂಭತ್ತು ಫಾಂಕುಗಳು ಹದಿನೈದು ಸೌಗಳು (ಸುಮಾರು ಅರವತ್ತೊಂದು ರೂಪಾಯಿಗಳು) ಇದೋ ಇಲ್ಲಿಯೇ ಇವೆ. ನನಗಿನ್ನೇನಾಗ ಬೇಕು ! ನಾನು ಬಹಳ ದಣಿದಿದ್ದೇನೆ. ಮೂವತ್ತಾರು ಮೈಲಿಗಳ ದೂರ ನಡೆದು ನನಗೆ ಬಹಳ ಹಸಿವಾಗಿದೆ. ನಾನು ಇಲ್ಲಿ ತಂಗಬಹುದೇ ?’ ಎಂದನು.

ಪಾದ್ರಿಯು, ಯಜಮಾನಿಯಾದ ಮೆಗೊಯಿರಳ ಕಡೆಗೆ ನೋಡಿ, ‘ ಇನ್ನೊಂದು ತಟ್ಟೆಗೆ ಊಟವನ್ನು ಅಣಿಮಾಡು,’ ಎಂದನು.

ಊಟಮಾಡುವ ಸಮಯದಲ್ಲಿ ಈ ಸಂಭಾಷಣೆ ನಡೆಯಿತು : ಜೀನ್ ವಾಲ್ಜೀನನು, ಸ್ವಾಮಿ, ತಾವು ಬಹಳ ಒಳ್ಳೆ ಯವರು. ನನ್ನನ್ನು ತುಚ್ಛವಾಗಿ ಕಾಣಲಿಲ್ಲ. ನನ್ನನ್ನು ನಿಮ್ಮ ಮನೆಗೆ ಬರಮಾಡಿಕೊಂಡು ಗೌರವಿಸಿಗಿರಿ. ಆದರೂ ನಾನು ಎಲ್ಲಿಂದ ಬಂದೆನೆಂಬುದನ್ನೂ ನಾನು ಇಂತಹ ದುರದೃಷ್ಟಶಾಲಿ ಎಂಬುದನ್ನೂ ನಿಮ್ಮಲ್ಲಿ ಮರೆಮಾಚದೆ ಹೇಳಿಬಿಟ್ಟೆನು,’ ಎಂದನು.

ಬಳಿಯಲ್ಲಿಯೇ ಕುಳಿತಿದ್ದ ಪಾದ್ರಿಯು ಮೆಲ್ಲನೆ ಅವನ ಕೈಯನ್ನು ಮುಟ್ಟಿ, ” ಅಯ್ಯಾ, ನೀನು ಯಾರೆಂಬುದನ್ನು ನೀನೇನೋ ನನಗೆ ತಿಳಿಸಿದೆ. ಇದು ನನ್ನ ಮನೆಯಲ್ಲ. ಇದು ಪರಮೇಶ್ವರನ ಭವನವು. ಇಲ್ಲಿಗೆ ಬರತಕ್ಕವರು ಕೀರ್ತಿವಂತರೋ ಅನಾಮ ಧೇಯರೋ, ಸುಖಿಗಳೊ ದುಃಖಿಗಳೊ, ಎಂಬುದೊಂದನ್ನೂ ಈ ಮನೆಯಲ್ಲಿ ವಿಚಾರಿಸುವ ಪದ್ಧತಿ ಇಲ್ಲ. ನಿನ್ನ ಹೆಸರನ್ನು ಕೇಳಿ ತಿಳಿದುಕೊಳ್ಳುವುದರಿಂದ ನನಗಾಗುವುದೇನು ? ಅಲ್ಲದೆ, ನೀನು ಹೇಳುವುದಕ್ಕೆ ಮೊದಲೇ ನಿನಗಿರುವ ಹೆಸರೊಂದನ್ನು ನಾನು ತಿಳಿ ದಿದ್ದನು,’ ಎಂದನು. ಆಗ ಜೀನ್ ವಾಲ್ಜೀನನು ಆಶ್ಚರ್ಯದಿಂದ ಕಣ್ಣರಳಿಸಿ, ‘ ನಿಜವಾಗಿಯೂ ನನ್ನ ಹೆಸರು ನಿಮಗೆ ಗೊತ್ತಿ ದ್ದಿತೇ ? ‘ ಎಂದನು.

ಪಾದ್ರಿಯು, ‘ ಅಹುದು, ನಿನಗೆ ನನ್ನ ಸಹೋದರನೆಂದು ಹೆಸರು,’ ಎಂದನು.

ಊಟ ಉಪಚಾರಗಳು ಮುಗಿದು ಎಲ್ಲರೂ ಮಲಗಿದರು. ಅರ್ಧ ರಾತ್ರಿಯಲ್ಲಿ ಜೀನ್ ವಾಲ್ಜೀನನು ಎಚ್ಚರಗೊಂಡು, ತನ್ನಲ್ಲಿ ತಾನು ಬಹಳವಾಗಿ ಮನಸ್ಸಿನ ಆಲೋಚನಾ ತರಂಗಗಳಲ್ಲಿ ಹೊಡೆ ದಾಡಿ, ಒದ್ದಾಡಿ, ಕಡೆಗೆ, ಆ ರಾತ್ರಿಯ ಊಟದಲ್ಲಿ ಉಪ ಯೋಗಿಸಿದ್ದ ಬೆಳ್ಳಿಯ ಚಮಚಗಳನ್ನೂ ಫೋರ್ಕುಗಳನ್ನೂ ಕದ್ದು ಕೊಂಡು ಹೋಗಬೇಕೆಂಬ ದುರಾಶೆಗೆ ವಶನಾಗಿ ಅವುಗಳನ್ನು ಕದ್ದು ಮಾಯವಾದನು. ಮಾರನೆಯ ದಿನ ಸಿಪಾಯಿಗಳು ಇವನನ್ನು ಹಿಡಿದು ಪಾದ್ರಿಯ ಎದುರಲ್ಲಿ ತಂದು ನಿಲ್ಲಿಸಿದರು. ಪಾದ್ರಿಯು ಅವನನ್ನು ಶಿಕ್ಷೆಯಿಂದ ತಪ್ಪಿಸಬೇಕೆಂದು ನಿಶ್ಚಯಿಸಿ ಆ ಬೆಳ್ಳಿಯ ಪದಾರ್ಥಗಳನ್ನು ತಾನೇ ಅವನಿಗೆ ಕೊಟ್ಟಿದ್ದನೆಂದು ಆ ರಾಜಾಧಿ ಕಾರಿಗಳಿಗೆ ನಂಬಿಕೆ ಹುಟ್ಟುವಂತೆ ಹೇಳಿದನು.

ಅನಂತರ ಜೀನ್ ವಾಲ್ಜೀನನ ಕಡೆ ನೋಡಿ, ‘ ಓಹೋ ! ಇದೇನು ! ನೀನೇ ? ನಿನ್ನನ್ನು ನೋಡಿ ನನಗೆ ಬಹಳ ಸಂತೋಷ ವಾಯಿತು. ಇದೇನು ! ನಾನು ನಿನಗೆ ಆ ಬೆಳ್ಳಿಯ ಮೇಣದ ಬತ್ತಿಯಿಡುವ ಕೊಳವೆಯನ್ನೂ ಇವುಗಳ ಜೊತೆಯಲ್ಲಿಯೇ ಕೊಟ್ಟಿದ್ದೆನಲ್ಲಾ! ಇವೆಲ್ಲವನ್ನೂ ಮಾಡಿದ್ದರೆ ನಿನಗೆ ಇನ್ನೂರು ಫ್ರಾಂಕುಗಳಾದರೂ ಸಿಕ್ಕುತ್ತಿದ್ದುವು. ಇವುಗಳ ಜೊತೆಯಲ್ಲಿ ಅದನ್ನೇತಕ್ಕೆ ತೆಗೆದುಕೊಂಡು ಹೋಗಲಿಲ್ಲ?’ ಎಂದನು. ಆಗ ಜೀನ್‌ ವಾಲ್ಜೀನನು ಕಣ್ಣುಗಳನ್ನು ಚೆನ್ನಾಗಿ ತೆರೆದು, ಮಾನ್ಯನಾದ ಆ ಪಾದ್ರಿಯನ್ನು ತನ್ನ ಮನಸ್ಸಿನಲ್ಲಿ ಉಂಟಾದ ಯಾವುದೋ ವರ್ಣಿಸಲಾಗದ ಒಂದು ಭಾವವನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ಎವೆಯಿಕ್ಕದೆ ನೋಡಿದನು.

ರಾಜಾಧಿಕಾರಿ – (ಪಾದ್ರಿಯನ್ನು ನೋಡಿ ) ಸ್ವಾಮಿ! ಹಾಗಾದರೆ ಇವನು ಹೇಳಿದ ಮಾತು ನಿಜವೆಂದೇ ಆಯಿತಲ್ಲವೆ ? ಇವನನ್ನು ಸಂಧಿಸಿದಾಗ ಇವನು ತಪ್ಪಿಸಿಕೊಂಡೋಡಿ ಹೋಗು ವನಂತೆ ಇವನ ನಡಿಗೆಯಿಂದ ಕಂಡುಬಂದಿತು. ವಿಷಯವೇನಿರ ಬಹುದೆಂದು ವಿಚಾರಿಸುವುದಕ್ಕಾಗಿ ಇವನನ್ನು ಹಿಡಿದು ನಿಲ್ಲಿ ಸಿದೆವು. ಇವನಲ್ಲಿ ಈ ಬೆಳ್ಳಿಯ ಪದಾರ್ಥಗಳಿದ್ದುವು.

ಪಾದ್ರಿ- ಮುಗುಳ್ಳಗೆಯಿಂದ ) ಹಾಗಾದರೆ, ಈ ವಸ್ತು, ಗಳನ್ನು ತನಗೆ ನಿನ್ನೆಯ ರಾತ್ರಿ) ಆಶಯವನ್ನು ಕೊಟ್ಟಿದ್ದ ಒಬ್ಬ ದಯಾಶಾಲಿಯಾದ ಮುದಿ ಪಾದ್ರಿಯು ಕೊಟ್ಟನೆಂದು ಹೇಳಿರ ಬಹುದು ! ವಿಷಯವೇನೆಂಬುದು ಈಗ ತಿಳಿದಂತಾಯಿತು. ನೀವು ಇವನನ್ನು ಹಿಂದಕ್ಕೆ ಕರೆತಂದಿರುವಿರಲ್ಲವೆ ? ಇದು ಅನ್ಯಾಯ.

ರಾಜಾಧಿಕಾರಿ-ಹೀಗಿರುವುದಾದರೆ ನಾವು ಇವನನ್ನು ಬಿಟ್ಟು ಬಿಡುವೆವು.

ಪಾದಿ-ಓಹೋ ! ಖಂಡಿತವಾಗಿಯೂ ಬಿಡಬೇಕು. ಸಿಪಾಯಿಗಳು ಜೀನ್ ವಾಲ್ಜೀನನನ್ನು ಬಿಟ್ಟುಬಿಟ್ಟರು.

ಜೀನ್’ ವಾಲ್ಮೀನ್-(ನಿದ್ದೆಗಣ್ಣಿನಿಂದ ಮಾತನಾಡುವವನಂತೆ ಕುಂಠಿತ ಸ್ವರದಿಂದ) ನನ್ನನ್ನು ಬಿಡುಗಡೆ ಮಾಡುವುದು ನಿಜವೇನು ?

ಒಬ್ಬ ಸಿಪಾಯಿ-ಅಹುದು. ನಿನಗೆ ಬಿಡುಗಡೆಯಾಗಿದೆ. ಅದು ನಿನಗೆ ಅರ್ಥವಾಗಲಿಲ್ಲವೆ?

ಪಾದ್ರಿ) – ( ಜೀನ್ ವಾಲ್ಜೀನನನ್ನು ನೋಡಿ ) ಮಿತ್ರಾ ! ಇದೊ, ನಿನ್ನ ಮೇಣದ ಬತ್ತಿಯ ಕೊಳವೆಯು, ನೀನು ಹೋಗು ವಾಗ ಇದನ್ನು ಮರೆಯದೆ ತೆಗೆದುಕೊಂಡು ಹೋಗು.

ಎಂದು ಹೇಳಿ ಪಾದ್ರಿಯು ಆ ಬೆಳ್ಳಿಯ ಕೊಳವೆಯನ್ನು ತಂದು ಜೀನ್ ವಾಲ್ಜೀನನಿಗೆ ಕೊಟ್ಟನು.

ಅವನ ಮೈನರಗಳೆಲ್ಲವೂ ನಡುಗಿಹೋದವು. ದಿಕ್ಕು ತೋರದೆ ಹುಚ್ಚನಂತೆ ನೋಡುತ್ತ ಸುಮ್ಮನೆ ಅದನ್ನು ಕೈಗೆ ತೆಗೆದುಕೊಂಡನು.

ಸಿಪಾಯಗಳು ಹೊರಟು ಹೋದರು. ಪಾದಿಯು ಸವಿತಾಸಕ್ಕೆ ಬಂದು, ಮೃದುವಾದ ಸ್ವರದಿಂದ ಮೆಲ್ಲನೆ, ‘ತಮ್ಮಾ, ಜೀನ್ ವಾಲ್ಜೀನ್‌, ಇನ್ನು ನಿನಗೆ ಪಾಪವಿಲ್ಲ. ಪುಣ್ಯಶೀಲನಾದೆ. ನಿನ್ನ ಆತ್ಮವನ್ನು ಕ್ರಯ ಕೊಟ್ಟು ನಾನು ಕೆಂಡುಕೊಂಡಿದ್ದೇನೆ. ಅದನ್ನು ನಾನು ದುರಾಲೋಚನೆಗಳಿಂದ ಬಿಡಿಸಿ ಅಧೋಗತಿಯಿಂದ ಪಾರುಮಾಡಿ ಆ ಪರಮಾತ್ಮನಿಗೆ ಅರ್ಪಣೆ ಮಾಡುವೆನು,’ ಎಂದನು.

ಆದರೂ ಅವನ ದುಷ್ಕರ್ಮ ಫಲರೂಪವಾದ ದುಃಖಮಯ ಜೀವನದ ದುರ್ಬುದ್ದಿಯು ಅವನನ್ನು ಪ್ರಬಲವಾಗಿ ವಶಪಡಿಸಿ ಕೊಂಡಿದ್ದಿತು. ಪಾದ್ರಿಯ ಮನೆಯನ್ನು ಬಿಟ್ಟು ಹೊರಟ ಮಾರ ನೆಯ ದಿನವೇ ಪೆಟಿಟ್ ಜರ್ವೆಲ್ ಎಂಬ ಮಗುವಿನ ಬಳಿಯಿದ್ದ ನಾಲ್ವತ್ತು, ಸೌಗಳ ( ಸುಮಾರು ಒಂದೂಕಾಲು ರೂಪಾಯಿ ) ನಾಣ್ಯವೊಂದನ್ನು ಕದ್ದನು. ತನ್ನ ತಪ್ಪಿಗಾಗಿ ಕೂಡಲೇ ಅವನ ಮನಸ್ಸಿನಲ್ಲಿ ಪಶ್ಚಾತ್ತಾಪ ಹುಟ್ಟಿ, ಆ ಹಣವನ್ನು ಹಿಂದಕ್ಕೆ ಕೊಟ್ಟುಬಿಡಬೇಕೆಂದು ಆ ಮಗುವನ್ನು ಎಲ್ಲೆಲ್ಲಿಯ ಹುಡು ಕಿದನು. ಅದು ಸಿಕ್ಕಲಿಲ್ಲ. ಕೊನೆಗೆ ತನಗೆ ಸಂಧಿಸಿದ ಒಬ್ಬ ಪಾದಿಯ ಕೈಗೆ, ಬಡವರಿಗಾಗಿ ಉಪಯೋಗಿಸಲು, ಆ ಹಣವನ್ನು ಕೊಟ್ಟು ಬಿಟ್ಟನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಚರಣೆ
Next post ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys