ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ

ಕಟ್ಟಿದ ಕಾಲೀಯಾ ಪರದಾಣೀ ನನ್ನ ಒಡೆಯ
ಕಂತೂಕೂ ಹೋಗೂವಾ ಶೂಲಮ್ಮ ಕೋಲೇ || ೧ ||

ಊರ ವಂದೇ ಹತ್ತು ಮಂದಿಗೆ ಹೇಳೂಕೆಯಾ ಕೊಡುವಾನೋ ಮೀರಾಶೀ ಮಗನೇ
ಊರ ವಂದೇ ಹತ್ತು ಮಂದೀ ಶೈವಾಗೆ ಬರುವಾರೆ ಕೋಲೇ || ೨ ||

ಕೊಪ್ಪರದಾ ಈಳೇಯಾ ತಡದಾನೋ ಮೀರಾಶೀ ಮಗನೆ
ಕಾಯೋಂದ ಕರಿಯೆಲೆಯಾನು ತಡದಾನು ಮೀರಾಶೀ ಮಗನೇ || ೩ ||

ಗಂಟೆ ದೂಪಾವಾ ತಡದಾನೋ ಮೀರಾಶೀ ಮಗನೆ
ಅಕಲಿ ಮಗ ಮುಂದಾಗೀ ಮೀರಾಶೀ ಮಗನೆ ಹಿಂದಾಗೀ || ೪ ||

ಊರ ಹತ್ ಮಂದಿ ನೆಡಗಾಗೀ ನೆಡದಾರೋ ಕೋಲೇ
ನೆಡದಾರೋ ಬರಶೀಮಣ್ಣಿನಾ ಗುಡೇಗಾಗಿ ಕೋಲೇ || ೫ ||

ಕಾಯೊಂದ ಕರಿಯೆಲೆಯ ಯತವಾನು ಮೀರಾಶೀ ಮಗನೆ
ಗೆಂಟ್ಯೊಂದು ದೂಪ-ದೀಪವ ತೋ ರ್ಯಾನು ಮೀರಾಶೀ ಮಗನೇ || ೬ ||

ಕರದಿಂಗಳಕ ಕೋಲ ಕಡುದರಲೋ ಕೋಲೇ
ಕರದಿಂಗಳಕ ಕೋಲ ಕಡುದರೋ ಆನಾ ಕೋಲು || ೭ ||

ಬೆಳುದಂಗಳಕ್ಕೆ ಕೋಲ ಬೆಳುಶಿದರೋ ಕೋಲೇ
ಆಸಾರೀ ಮಗನಾ ಕೈಯಲಿ ಕೊಡುವಾರೋ ಕೋಲೇ || ೮ ||
*****
ಕೆಲವು ಪದಗಳ ವಿವರಣೆ
ಕೊಪ್ಪರ = ಕರ್ಪೂರ
ಮದ್ದಲೆ = ನವಿಲಕುಂಚ (ಗಿರಿ)
ಮುಸ್ತಾಪಾ = ಬಿರುದು-ದುಸ್ತು
ಹುಲಿಮಿರಗನ ಶೆಲ್ಲಿ (ಚರ್ಮ) ಮಿಗ = ಮೃಗ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.