ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು, ...

ಮೇಷ್ಟ್ರು ರಂಗಪ್ಪ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠ...

ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್‌) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ – ಪೋರ – ಅವಳ ಮಗ, ಆಚೀಚೆ ದೂಡುತ್ತ ಮುರಿದಿದ್ದನಂತೆ ಅವನಿಗೆ ಸ...

ನ್ಯೂಯಾರ್ಕಿನ ನಮ್ಮ ಡೌನ್ಟೌನ್ ಆಫೀಸಿನಲ್ಲಿ, ಬ್ರಿಜೆಟಳನ್ನು ಮೊತ್ತಮೊದಲು ನೋಡಿದಾಗ ನನಗೆ ಥಟ್ಟನೆ ರಾಜಿಯದೇ ನೆನಪಾಗಿತ್ತು. ಯಾಕೆಂದು ಗೊತ್ತಿಲ್ಲ; ಅಂದರೆ ಮುಖಲಕ್ಷಣದಲ್ಲಿ ಅವಳಿಗೆ ರಾಜಿಯ ಹೋಲಿಕೆ ತಟಕೂ ಇರಲಿಲ್ಲ. ರಾಜಿಯದು ಉದ್ದ ಚೂಪು ಕೋಲಿನಂ...

ಹಿನ್ನುಡಿಯ ಅಗತ್ಯವಿದೆಯೆ? ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ತನ್ನ ಬರಹದ ಕುರಿತು ಲೇಖಕ ಏನು ಹೇಳಿಕೊಂಡರೂ ಅದು ಓದುಗರ ಮನಸ್ಸನ್ನು ನಿರ್ದೇಶಿಸುವ ಕಾರಣದಿಂದ ಕೆಲವರು ಏನನ್ನೂ ಹೇಳದೆ ಸುಮ್ಮನೆ ಇರುತ್ತಾರೆ. ಇದೇ ಒಂದು ಭಯವಾಗಿಬಿಟ್ಟರೆ, ಲೇಖಕ...

ಒಂದು ವೃಕ್ಷದ ಕೆಳಗೆ ಇಬ್ಬರು ಪ್ರೇಮಿಗಳು ಕುಳಿತ್ತಿದ್ದರು. ಅವರು ಒಬ್ಬರಿಗೊಬ್ಬರು ಅಂತರಂಗವನ್ನು ಒಪ್ಪಿಸಿ “ಹಕ್ಕಿಯಂತೆ ಹಾಯಾಗಿರೋಣ.” ಅಂದುಕೊಂಡರು. ವೃಕ್ಷದ ಮೇಲಿನ ಗೂಡನ್ನು ಸೂಕ್ಷ್ಮವಾಗಿ ನೋಡಿದ ಹುಡುಗಿ ಹೇಳಿದಳು- “ಒಂ...

ಬಂಗಾರು ಚೆಟ್ಟಿಯನ್ನು ಕೊಂದೇ ಬಿಡುತ್ತೇನೆ ಇವತ್ತು ಎಂದುಕೊಂಡು ಮುಂದೆ ಧಾವಿಸುತ್ತಿರುವ ದೀಕ್ಷಿತನನ್ನು ಹೇಗಾದರೂ ಮಾಡಿ ತಡಯಲೇಬೇಕೆಂದು ವಿನಯಚಂದ್ರನಿಗೆ ಅನಿಸಿತು. ದೀಕ್ಷಿತನ ಕೈಯಲ್ಲಿ ತೆಂಗಿನಕಾಯಿ ಒಡೆಯುವಂಥ ಕತ್ತಿಯಿತ್ತು. ವಿನಯಚಂದ್ರ ಮೆಟ್ಟ...

ಅವಳು ಯೌವ್ವನದಲ್ಲಿ ವಿಧವೆಯಾದವಳು. ನೃತ್ಯ ಅವಳ ವೃತ್ತಿಯಾಗಿತ್ತು. ಅವಳು ವೇದಿಕೆಯಲ್ಲಿ ರಾಧೆಯಾಗಿ, ಕೃಷ್ಣನೊಡನೆ ಶೃಂಗಾರ ರಸದಲ್ಲಿ ಲೀನವಾಗುತಿದ್ದಳು. ಶಕುಂತಲೆಯಾಗಿ ಪ್ರೇಮ ಪಾಶದಲ್ಲಿ ಸಿಲುಕುತ್ತಿದ್ದಳು. ರಾಮಾಯಣದಲ್ಲಿ, ಸೀತೆಯಾಗಿ ರಾಮಪಟ್ಟಾಭ...

ದೀಕ್ಷಿತ ಏನೋ ಗಾಢವಾಗಿ ಬರೆಯೋದರಲ್ಲಿ ತಲ್ಲೀನನಾಗಿದ್ದಾನೆ. ಆತ ಎಂದೂ ತನ್ನ ಅಭ್ಯಾಸದಲ್ಲಿ ಇಷ್ಟು ಆಸಕ್ತಿ ತೋರಿಸಿದ್ದಿಲ್ಲ. ಎಂದರೆ ಇನ್ನೇನು ಬರೀತಿದ್ದಾನೆ? ದ್ವಿತೀಯ ಕಮ್ಯೂನಿಸ್ಟ್ ಮ್ಯಾನಿಫ಼ೆಸ್ಟೋ? ಎಲ್ಲಾ ಬಿಟ್ಟು ಇಂಥ ಬೋರ್ ನ್ ಕೈಲಿ ಸಿಗಹಾ...

ಕಾಗೆಮರಿ ಒಮ್ಮೆ ಅಮ್ಮನ ಕೇಳಿತು- “ಪಾರಿವಾಳ, ನವಿಲು, ಗಿಣಿ ಮತ್ತೆ ಎಲ್ಲಾ ಪಕ್ಷಿಗಳಿಗೂ ಬಣ್ಣಗಳಿವೆ. ಏಕಮ್ಮ ನಾನು, ನೀನು ಕಪ್ಪು?” ಅಮ್ಮ ಕಾಗೆ ಹೇಳಿತು- “ಕಾಗೆ ಮರಿ! ನೋಡು ನಾವು ಬಾಳುವ ಬದುಕು ಮುಖ್ಯ. ನಾವು ಬದುಕಿಗೆ ಬಣ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...