
ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ, ಧಾವಿಸುವೆ ಹಾಸಿಗೆಗೆ ಪ್ರಿಯವಿಶ್ರಾಂತಿ ನೆಲೆಗೆ ; ಶುರುವಾಗುವುದು ಆಗ ತಲೆಯೊಳಗೆ ಸಂಚಾರ ; ಮೈಕೆಲಸ ಮುಗಿದು ಮನ ಹಾಯುವುದು ಚಿಂತನೆಗೆ. ನಾನಿರುವೆ ಎಲ್ಲೊ ದೂರದಲಿ, ಆಲೋಚನೆಯ ಯಾತ್ರೆ ಹೊರಡುವುದು ಖುಷಿಯಲ್ಲ...
ದೆಸೆ ತಿರುಗಿ ಮೇಲೆದ್ದ ಜನ ತಮಗೆ ಗಿಟ್ಚಿರುವ ಬಿರುದು ಬಾವಲಿಯನ್ನು ಕೊಚ್ಚಿಕೊಳ್ಳಲಿ ಬೀಗಿ, ನನಗಿಲ್ಲ ಅಂಥ ಅದೃಷ್ಟ, ನನ್ನೆಲ್ಲ ಸುಖ ಬಲು ಹಿರಿಯದೆಂದು ನಾ ಗೌರವಿಸಿದುದರಲ್ಲಿ. ರಾಜಕೃಪೆ ದಕ್ಕಿ ವೀರರ ಕೀರ್ತಿ ಹಬ್ಬುವುದು ರವಿಕಿರಣ ತಾಗಿ ಹೂ ಹೊನ್...
ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು ಚಿತ್ರಿಸಿದೆ ಈ ಕಣ್ಣು ಚಿತ್ರಕಾರನ ಹಾಗೆ ; ನನ್ನ ಮೈಕಟ್ಟು ಬಳಸಿದೆ ನಿನ್ನ ಚಿತ್ರವನು, ಸಾಕ್ಷಿಯಾಗಿದೆ ಚಿತ್ರ ಬಹು ಮಹೋನ್ನತ ಕಲೆಗೆ, ನಿನ್ನ ನಿಜವ್ಯಕ್ತಿತ್ವ ರೂಪ ಪಡೆದಿರುವ ಬಗೆ ತಿಳಿಯುವುದು ಚಿತ್ರಕ...
ಪೂರ ಪಳಗದ ನಟ ಅಭಿನಯದ ಹೊತ್ತಿನಲಿ ಹೆದರಿ, ಪಾತ್ರಕ್ಕೆ ಹೊರತಾಗಿ ನಟಿಸಿದ ಹಾಗೆ, ಇಲ್ಲ , ಭಾವವೇಶವಶನಾಗಿ ನಟನೆಯಲಿ ಅಭಿನಯದ ಪರಿಣಾಮವನ್ನೆ ಕಳೆಯುವ ಹಾಗೆ, ನನ್ನಲ್ಲೆ ವಿಶ್ವಾಸ ತಪ್ಪಿ, ನಾ ತಪ್ಪುವೆನು ಹೃದಯದೊಲುಮೆಯ ಜೇನ ನುಡಿಯೊಳಗೆ ಇಳಿಸಲು, ಪ್...
ನೀನು ಯೌವನದೊಡನೆ ಕೂಡಿಕೊಂಡಿರುವಾಗ ಕನ್ನಡಿಯು ನನ್ನ ವಯಸ್ಸನ್ನೆ ತೋರಿಸದು, ಆದರೀ ನಿನ್ನ ಹಣೆಯೊಳು ನೆರಿಗೆ ಕಂಡಾಗ ಇನ್ನು ಮುಗಿಯಿತು ನನ್ನ ಕಾಲ ಎನಿಸುವುದು ನಾ ನಿನ್ನೊಳಿರುವಂತೆ ನೀನಿರುವೆ ನನ್ನೊಳಗೆ, ನಿನ್ನ ಮೈಚೆಲುವೆಲ್ಲ ನನ್ನ ಆತ್ಮದ ತೊಡಿಗ...
ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ, ಸೂರ್ಯ ಶಶಿ ಇಳೆ ಕಡಲು ಚೈತ್ರ ಪುಷ್ಪಗಳನ್ನು ಸ್ವರ್ಗವನ್ನೂ ಯಾರು ಬಣ್ಣನೆಗೆ ಕರೆವರೋ, ಸ್ವರ್ಗ ಬಳಸಿರುವ ಅಪರೂಪ ವಸ್ತುಗಳನ್ನು ತಾವು ಸ್ತುತಿಸುವ ಚೆಲುವಿನೊಡನೆ ಹೋಲಿಕೆ ಮಾಡಿ ಘನಜೋಡಿಗಳ ಯಾರು ಹೆ...
ತನ್ನ ಕೈಯಿಂದಲೇ ಪ್ರಕೃತಿ ಸೃಷ್ಟಿಸಿ ತೆಗೆದ ಹೆಣ್ಣಮುಖ ನಿನ್ನದು. ನೀ ನನ್ನ ಪ್ರೇಮಕ್ಕೆ ಸ್ವಾಮಿ ಸತಿ ಎರಡೂ. ಹೆಣ್ಣ ಕೋಮಲ ಹೃದಯ ಇದ್ದರೂ ನಿನಗಿಲ್ಲ ಹುಸಿ ಹೆಣ್ಣ ಚಂಚಲತೆ. ಹೆಣ್ಣಿಗಿಂತಲು ಹೊಳಪುಗಣ್ಣು ಹುಸಿಯಿರದ ನಡೆ; ತಾವು ನೋಡುವ ವಸ್ತುವನ್ನೆ...
ಏ ಬಕಾಸುರ ಕಾಲ! ಸಿಂಹದುಗುರುಗಳನ್ನು ಮೊಂಡಾಗಿಸುವೆ, ಭೂಮಿ ತನ್ನ ಸಂತತಿಯನ್ನೆ ನುಂಗುತಿದೆ ನಿನ್ನಿಂದ, ವ್ಯಾಘ್ರದ ಬಾಚಿ ಹಲ್ಲನ್ನು ಕಿತ್ತೆಸೆವೆ ನೀನು, ಪ್ರಾಚೀನ ಫೀನಿಕ್ಸನ್ನೆ ರಕ್ತದಲಿ ಕುದಿಸುವೆ, ಹರ್ಷದುಃಖಗಳನ್ನು ಓಡುತ್ತಲೇ ಎಲ್ಲ ಋತುಗಳಿಗೆ...
ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ ? ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು. ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ, ಬೇಸಿಗೆಯ ಗೇಣಿ ಬಲು ಬೇಗನೇ ಮುಗಿಯುವುದು; ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾರುವುದು, ಎಷ್ಟೊ ಸಲ ಅದರ ಹೊಂಬಣ್ಣ ...
ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು ನಿಜ ಬಣ್ಣಿಸಿದ್ದರೂ, ಅದು ನಿನ್ನ ಘನತೆಯನು ಅರ್ಧ ಮಾತ್ರವೆ ತೋರುವಂಥ ಸ್ಮಾರಕ ಎಂದು ಸ್ವರ್ಗಕೇ ಗೊತ್ತಿದ್ದೂ ನಂಬುವರು ಯಾರದನು ? ಆ ಕಣ್ಣ ಸೊಬಗ ಹಾಗೇ ಚಿತ್ರಿಸಿದರೂ, ನಿನ್ನ ಘನತೆಯ ಕುರಿತು ಹೊಸ ಹೊಸತು ಬ...














