ಮಿತ್ರನಾಗಲಿ ಶತ್ರುವಾಗಲಿ
ಗುರುತಿನವನಾಗಲಿ, ಗುರುತಿಲ್ಲದವನಾಗಲಿ
ದೊಡ್ಡವನೆಂದು ತಿಳಿದವನ
ಬಡವನೆಂದು ಒಪ್ಪದವನ
ಮೇಲೆ
ಯಾವದೇ ಕಾರಣದಿಂದ
ಅಪಯಶದ ಧೂಳು ಹಾರಿದರೆ
ನೀನು
ಕಟುವಚನದಿಂದ ಅವನನ್ನು
ದೂರುವ ತಪ್ಪು ಮಾಡದಿರು
ಇವನು ಹಾಗೇ ಇದ್ದನೆಂದು
ನೂರಾರು ಪುರಾವೆಗಳ ಹಿಡಿದು
ಸಾಧಿಸದಿರು
ಅವನು ನಿಜವಾಗಿಯೂ ಎಡವಿ
ತಪ್ಪುದಾರಿ ಹಿಡಿದರೆ
ಕಟು ಮಾತಿನಿಂದಲ್ಲ
ಸ್ನೇಹದಿಂದ ಮಾತಾಡಿ ನೋಡು
ದೋಷ ಎಷ್ಟು ಆಳವಾದರು
ಸ್ನೇಹ ಅಲ್ಲಿ ಇಳಿಯುವುದು
ಲೋಕ ಎಷ್ಟು ಭ್ರಷ್ಟವಾದರು
ಸ್ನೇಹ ಎಲ್ಲರಿಗೆ ಹಿಡಿಸುವುದು
ಬಿದ್ದವರನ್ನು ಎಬ್ಬಿಸುವಷ್ಟು
ಪ್ರಿಯ ಕಾರ್ಯವಿಲ್ಲ
ಎತ್ತಿ ಸ್ನೇಹ ಹಂಚದ
ಕೀಳ್ತನದಷ್ಟು ಪತನ ಬೇರೆ ಇಲ್ಲ
ಸ್ನೇಹ ದೃಷ್ಟಿಯಿಂದ
ನೋಡಿದರೆ,
ಕಣ್ಣಿನ ದುನ್ಸಾಹಸ
ಮರೆಯಾಗುವುದು
ಪ್ರತಿಯೊಂದು ದುಷ್ಟತನ
ಕಂಬನಿಯಾಗಿ
ಕಪೋಲದಿಂದ ಹರಿಯುವುದು
ಆಣೆಯ ಮೇಲೆ ನಿನಗೆ
ಹೆಚ್ಚು ಮೋಹ
ಆಣೆ ಹಾಕುವ ಚಟ ಒಳಿತಲ್ಲ
ಆಣೆ ಜೊತೆಗೆ ತೊಂದರೆಯನ್ನು ತರುವುದು
ನಿನ್ನ ಮೇಲೆ ಹಾವಿಯಾಗುವುದು
ಹೊರಿಸುವೆನು ಆಣೆ ನಿನ್ನ ಮೇಲೆ ನಾನು
ಇಳಿಸಿ ಹಾಡಿ ಹರಡು
ಸ್ನೇಹದಿ ನೀನು
ಆಣೆ ನಿನಗೆ ಆ ಕರುಣಾಕರನ
ಬೆತ್ತಲೆಯಾಗಿ ಸ್ನೇಹದ
ಭಿಕ್ಷೆ ಬೇಡುವ ಭಿಕ್ಷುಕನ
ಕಟುವಾಗಿ ಒರೆಯದೆ, ಹೊರಡು
ಅಂತರ ಮನದ ನೇಹದಿ ಹೇಳು
ಕೊನರುವುದು ಕೊರಡು
*****
ಮೂಲ: ಭವಾನಿಪ್ರಸಾದ ಮಿಶ್ರ
(ಹಿಂದಿ ಅನುವಾದ ವಿಭಾಗ)















