
“ಮರ ನಿಟ್ಟುಸಿರು ಬಿಟ್ಟು ಹೇಳಿತು” ಮಾನವ! ನೀನು ನನ್ನ ಕಡೆಯಬಹುದು, ಆದರೆ ಮೋಡಗಳನ್ನು ಕಡೆಯಲಾರೆ. ನಕ್ಷತ್ರ ಹೆಕ್ಕಲಾರೆ. ಮರಗಳಿಲ್ಲದ ಭೂಮಿಯ ಮೇಲೆ ಪಿಶಾಚಿಯಾಗಿ ಅಲೆಯುವೆಯಾ? ನನ್ನ ಕೊಂದು ನೀ ಜೀವಿಸಬಲ್ಲೆಯಾ? ನೀ ಮರದ ಆಕ್ರಂದನಕೆ...
ಮರಗಳು ಹೇಳಿದವು-ನಾವು ಭೂಮಿ ತಾಯಿಯ ಮಹಾ ಕಾವ್ಯವನ್ನು ಆಕಾಶದ ಎತ್ತರಕ್ಕೆ ಬರೆಯುತ್ತೇವೆ. ಬೇರಿನ ಕೈಗಳಿಂದ ಭೂಮಿಯನ್ನು ಬಿಗಿದಪ್ಪುತ್ತೇವೆ. ಅರಳಿದ ಹೂಗಳನ್ನು ಉದರಿಸಿ ಪೂಜಿಸುತ್ತೇವೆ. ಮಾನವರಾದ ನೀವು ಮರಗಳನ್ನು ಕಡೆದು ಭೂಮಿ ತಾಯಿಯ ಹೃದಯವನ್ನು ...
ಒಂದು ಎಲೆ ಮನುಷ್ಯನಿಗೆ ಹೇಳಿತು “ನಾನು ಬಾಳಿನಲ್ಲಿ ಎಲ್ಲವನ್ನೂ ಕಂಡೆ” ಎಂದು. “ಅದು ಹೇಗೆ?” ಎಂದ ಮನುಷ್ಯ. “ನನ್ನದು ಚಿಗುರಿನ ಬಾಲ್ಯ. ಬಣ್ಣದ ಹೂವಿನ ಯೌವ್ವನ. ಹಳದಿ ಎಲೆಯಲ್ಲಿ ವೃಧ್ಯಾಪ್ಯದ ನೆರಳು. ಇಷ್ಟನ್...
ಹೃದಯವನ್ನು ವನ ಮಾಡಿದೆ. ಸಂತಸದ ಉಸಿರು ಹಸಿರಲ್ಲಿ ಮೂಡಿತು. ಚಳಿಗಾಲ ಬಂದು ಎಲೆ ಎಲ್ಲಾ ಉದುರಿತು. ಮತ್ತೆ ಬೇಸಿಗೆ ತಾಪ ಸಹಿಸಲಾರದೇ ವಸಂತನಿಗಾಗಿ ಕಾದು ಕುಳಿತೆ. ದಟ್ಟ ಮೋಡಗಳು ಮೂಡಿ ಮಳೆ ಸುರಿಯಿತು. ಚೈತ್ರದ ಚಿಗುರು ಮೂಡಿ ಕೋಗಿಲೆ ಮತ್ತೆ ಪಲ್ಲವ...
“ಮರ! ಭೂಮಿಯಿಂದ ನೀನೇನ ಕಲಿತೆ?” ಎಂದು ಓರ್ವ ದಾರಿಹೋಕ ಕೇಳಿದ. ಭೂಮಿ ನನ್ನ ಗಟ್ಟಿಯಾಗಿ ನಿಲ್ಲಿಸಿ ಬೆಳಸಿತು. ಎತ್ತರಕ್ಕೆ ಬೆಳೆದು ಆಕಾಶದೊಡನೆ ಮಾತನಾಡುವುದನ್ನು ಕಲಿತೆ. ಆಕಾಶ ನನಗೆ ಮಳೆಹನಿ ಮುತ್ತುಗಳನ್ನು ಇತ್ತು ನನ್ನ ಹರ್ಷವನ್...
ಮುಂಜಾನೆ ಸಮಯ. ಆ ಪುಟ್ಟ ಹುಡುಗ ದೊಡ್ಡ ಗಿಡವನ್ನು ಹತ್ತಿ ಮರದ ಶಾಕೆ ಶಾಕೆಯಲ್ಲಿ ಏನೋ ಹುಡುಕುತಿದ್ದ. ಆಡುವ ವಯಸ್ಸಿನ ಈ ಹುಡುಗ ಬೆಳ್ಳಂಬೆಳಿಗ್ಗೆ ಸಿಲಿಕಿಹಾಕಿಕೊಂಡ ಗಾಳಿಪಟ ಹುಡುಕುತ್ತಿರಬಹುದೆಂದು “ಯಾಕೆ, ಮಗು, ಮರ ಹತ್ತಿದ್ದೀಯಾ?̶...
ಅವಳಿಗೆ ಬಾಳಿನಲ್ಲಿ ಬೇಸರ ತಡೆಯಲಾಗಲಿಲ್ಲ. ತನ್ನ ಪ್ರಿಯಕರನ ತೋಳಲ್ಲಿ ಬೇರೆಯ ಹುಡುಗಿಯನ್ನು ಕಂಡಾಗ ಅವಳ ಹೃದಯ ನಿಂತಂತಾಯಿತು. ಬಾಳಲ್ಲಿ ಕತ್ತಲೆ ಕವಿದು ತೋಟದ ಮರಕ್ಕೆ ನೇಣು ಹಾಕಿಕೊಳ್ಳಲು ಹೊರಟಾಗ ಮರ ತನ್ನ ಭಾಷೆಯಲ್ಲಿ ನೂರುಬಾರಿ ಸಂತೈಸಿ ಹೇಳಿತ...
ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. “ಇದನ್ನು ಓದಿಕೋ ಜಗತ್ತೇ?” ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದ...














