
ಆಕಾಶ ಬರಿ ಶೂನ್ಯ ಎನ್ನುವುದು ಅಸತ್ಯ ಅಲ್ಲೂ ನಡೆದಿದೆ ಕಣ್ಣಿಗೆ ಕಾಣದ ದಾಂಪತ್ಯ ಇಲ್ಲವಾದರೆ ಮುಗಿಲು ಗುಡುಗು ಮಿಂಚು ನೀರಾಗಿ ಹುಟ್ಟಿ ಸುರಿಯಲು ಹೇಗೆ ತಾನೆ ಸಾಧ್ಯ *****...
ಆಗೊಂದು ಈಗೊಂದು ತಿನಬಾರದ ಬೇನೆ ತಿಂದು ಈದದ್ದು ತಿರುವಿ ತಿರುವಿ ನೋಡಿದಂತೆಲ್ಲಾ ರಾಚುವುದು ಕಣ್ಣು ಒಂದಿಲ್ಲೊಂದು ಕುಂದು. ವಿಷಾದಿಸುತ್ತೇನೆ ಈದೇನೆ ಎಂದಾದರೊಂದು ದಿನ ಕುಂದಿಲ್ಲದೊಂದು ಪಡೆದೇನೆ ಸಮಾಧಾನ! *****...
ರಾತ್ರಿ ಸುರಿದ ಮಳೆಗೆ ಮೈಯೊಡ್ಡಿ ನಿರಾಳವಾದ ಇಳೆ ಮುಂಜಾನೆ ಧರಿಸಿಕೊಂಡ ಹೊಸ ಕಳೆ ಅವಳ ಕಣ್ಣಲ್ಲಿತ್ತು *****...













