ಆಗೊಂದು ಈಗೊಂದು
ತಿನಬಾರದ ಬೇನೆ ತಿಂದು
ಈದದ್ದು
ತಿರುವಿ ತಿರುವಿ ನೋಡಿದಂತೆಲ್ಲಾ
ರಾಚುವುದು ಕಣ್ಣು
ಒಂದಿಲ್ಲೊಂದು ಕುಂದು.
ವಿಷಾದಿಸುತ್ತೇನೆ
ಈದೇನೆ
ಎಂದಾದರೊಂದು ದಿನ
ಕುಂದಿಲ್ಲದೊಂದು
ಪಡೆದೇನೆ ಸಮಾಧಾನ!
*****