
– ಪಲ್ಲವಿ – ಬಾ, ತರಣಿಯ ತುಂಬಿದ ಹೊಂಬೆಳಕೇ, ಈ ತಮವನು ತೊಳೆಯಲು ನೆಲಕೆ! ೧ ‘ಕಾರಿರುಳನು ಬಿಡಿ, ಬೆಳಕಿಗೆ ಕಾಲಿಡಿ! ಸಾರುತಿದೆಯಿಂತು ದೈವದ ತಿಳಿನುಡಿ; ಆರಯ್ಯುವುದಿಳೆ ನಿನ್ನ ಬರವಿನಡಿ, ತೂರುತ ಕಿರಣವ ಕೆಲಕೆಲಕೆ…. ಬಾ, ತರ...
ಬೆನ್ನಿನ್ ಮೇಗಿನ್ ಸರಟ್ ಓದ್ರೋಯ್ತು ಬೆನ್ ಮ್ಯಾಗ್ ಐತೆ ಚಮ್ಡ! ಯೆಂಡ ತತ್ತ! ಚಮ್ಡ ಓದ್ಮೇಲ್ ಉಟ್ತೈತಾ ಒಂದ್ ದಮ್ಡಿ? ೧ ಬಡವೊರ್ ಬದಕೋ ದಾರೀಂತಂದ್ರೆ- ಈ ಮಾತ್ನಾಗ್ ಐತ್ ಮರ್‍ಮ! ಕುಡಕನ್ ಮಾತ್ ಅಂದ್ರ್ ಎಂತಾದ್ದಣ್ಣ- ಕಾಣದ ಕಣ್ಣೀರ್ ಸುರ್‍ಮ! ೨ ...
ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ- ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ- ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ- ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ- ತಾಪವನ್ನು ನುಂಗಿ ನಗೆಗೂಡಿ, ಬಡತನ ನೀಗಿ, ತಾಯಿ ನೆಲವನೆ ಸುತ್ತಿಯೊಳಗೊಂ...
ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ ವರ ಯೋಗಿಯ ನಿಶ್...
ಹುಟ್ಟಿದಂದೀಗಿ ಮೊದಲಽ ಹೊಟ್ಟಿಬ್ಯಾನೆಂಬೂದರಿಯ| ಹೊಟ್ಟಿ ಕುಟ್ಟಂದಾವಲ್ಲಽಽ ಎದ್ದಾಽಽವೇಳವ್ವಾ ಬ್ಯಾನಿ ತಾಳಲಾರೇನ ಬ್ಯಾನಿ ||೧|| ನಡ ಟೊಂಕ ಕೊಡಲೀಲಿ ಕಡದಂತ ತಡಬ್ಯಾನಿ| ಬದಿಲಿ ಕುಂತವ್ವಗಳಿರ್‍ಯಾ ಹಡಿ ಹಽಡೀ ಅಂದಾರಲ್ಲ| ಎದ್ದಾಽಽವೇ…. ||೨...
ಸುಂದರ ಈ ನಾಡು – ನಮ್ಮ ಕಲಿಗನ್ನಡ ನಾಡು ಸ್ಫೂರ್ತಿಯ ನೆಲೆವೀಡು – ಅದ ರಿಂದಲೇ ಈ ಹಾಡು ಬೆಳ್ಗೊಳ ಪಟ್ಟದಕಲ್ಲು – ಹಾಳ್ ಹಂಪೆಯ ಮೂರ್ತಿಯ ಸೊಲ್ಲು ಅರಿಯುತಲಿ ಏಳು – ಅರಿತು ಕನ್ನಡತನ ಮೈ ತಾಳು ಕೀರ್ತನೆ ಚಂಪೂ ವಚನ ...
ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ. ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ- ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ ಅವನು ದೇವಪ್ರಾಯ, ಉಳಿದರಿಗೆ...













