ಸಿರಿಗೆರೆಯ ಸಿರಿದೇವಿ ಬನಶಂಕರಿ
ಬನಗಿರಿಯ ಶಿವ ಶಿವಶಂಕರಿ
ವರೇದೆ ತಾಯೆ ವೇದಾಂಭಿಕೆ
ಪುಷ್ಪಾಂಕಿತ ಶೋಭಿತೆ ಸರ್‍ವೇಶ್ವರಿ

ವಿಶ್ವನುತೆ ವಿಶ್ವಾಂಭರಿ ವಿಶ್ವೇಶ್ವರಿ
ಮಹೋನ್ನತೆ ಮಹಾದೇವಿ ಮಾಹೇಶ್ವರಿ
ಮುತ್ತೆ ದೆ ಸಿರಿತನದ ತಾಯೆ ಮುತ್ಯಾಲಮ್ಮ
ಆನಂದದಾಯಿನಿ ಅನಂತ ತನಯೆ ಅಣ್ಣಮ್ಮ

ಭೂದೇವಿ ವರದೇವಿ ಭುವನೇಶ್ವರಿ
ರಜತೆ ರಾಜಮಾತೆಯೆ ರಾಜರಾಜೇಶ್ವರಿ
ಮುದದಿ ಕಾಯುವ ತಾಯೆ ಮೂಕಾಂಬಿಕೆ
ಜಗದ ಮಡಿಲ ಹೊತ್ತ ತಾಯೆ ಜಗದೀಶ್ವರಿ
ನಮಿಸುವೆ ನಿನಗೆ ಕ್ಷಮಯಾಧರಿತ್ರಿಯೆ ||
*****