
ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ ತದ ಪುರಾ...
ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...
ಸಿರಿಗೆರೆಯ ಸಿರಿದೇವಿ ಬನಶಂಕರಿ ಬನಗಿರಿಯ ಶಿವ ಶಿವಶಂಕರಿ ವರೇದೆ ತಾಯೆ ವೇದಾಂಭಿಕೆ ಪುಷ್ಪಾಂಕಿತ ಶೋಭಿತೆ ಸರ್‍ವೇಶ್ವರಿ ವಿಶ್ವನುತೆ ವಿಶ್ವಾಂಭರಿ ವಿಶ್ವೇಶ್ವರಿ ಮಹೋನ್ನತೆ ಮಹಾದೇವಿ ಮಾಹೇಶ್ವರಿ ಮುತ್ತೆ ದೆ ಸಿರಿತನದ ತಾಯೆ ಮುತ್ಯಾಲಮ್ಮ ಆನಂದದಾಯ...
ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ ಮೂಡಲಿಹ ಕೊನೆ...
ಮ್ಯಾಲ ತುಂತುರ ಹನಿಯು ತಂತಿ ವಾದ್ಯದ ಮುಗುಲು ಬನತುಂಬ ಮಳೆಬಿಲ್ಲು ಬಿತ್ತಿಬಾರ ಹನಿಹನಿಯು ಬಿದ್ದಲ್ಲಿ ಸವಿಮುದ್ದು ಇದ್ದಲ್ಲಿ ಭೂರಮಣಿ ಮೈಬಿಚ್ಚಿ ಹೂವು ತಾರ ಏಳು ಬಣ್ಣದ ಮುಗುಲು ಸಂಜಿ ಶೀತಲ ನವಿಲು ಗಗನ ಮಲ್ಲಿಗಿ ಸುರಿದು ಕೈಯತಾರ ಬಾಳಿ ತೋಳನು ಚಾ...
ಬೆಂಕೀನ್ ಇಟ್ಟಿದ್ಲಂತೆ ಯಿಂದ್ ಅಡಗೂಲಜ್ಜಿ- ಮುನಿಯನ್ಗು ಆತ್ಕೋಂತ ಔಳೀಗಿದ್ ಕಜ್ಜಿ! ಕೋಳಿ ಕೂಗ್ದಿದ್ರೆಲ್ಲು ಬೆಳಕೇ ಆಗಾಲ್ವ! ಯೆಂಡ ಇಲ್ದೋಯ್ತಂದ್ರೆ ಆಡಾಕಾಗಾಲ್ವ? ೧ ಝುಮ್ಮಂತ್ ಇರಬೇಕಾದ್ರೆ ಪದಗೊಳ್ದು ಗತ್ತು ಏನಾರ ಬೇಕೇ ಬೇಕ್ ಅದಕೊಂದು ಮತ್ತು...
ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ ತಾಳವು ಯಾರದೊ ಹಾಡುತಿರುವ ಕಂಠಕೆ ಹೂವು ಯಾರದೊ ದಾರವು ಯಾರದೊ ಕೋಯುತ್ತಿರುವ...
ಇಗೊ ಸಂಜೆ, ಸಖಿ, ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ ತುಸ ತುಟಿತೆರೆದು ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು; ನಿನ್ನು ಸಿರ್ ಕಂಪ ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ; ಓ ಚಪಲಾಕ್ಷಿ, ಎನ್ನೆದೆಯಾಗಸದೊಳು ಬಿಡು ಅಕ್ಷಿಯ ಪಕ್ಷಿ, (ಇಗೊ ಸಂ...
ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್ ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು ರಂಜಾನ್ ಹಬ್ಬದ ಸಣ್ಣ ಗೆರೆಯಂತಹ ಚಂದ್ರನ ನೋಡಿದ ಮಗಳು ಓಡೋಡಿ ಬಂದು “ಅಮ್ಮಿ ಈದ್ ಮುಬಾರಕ್” ಹ...













